ಕೊನೆಗೂ ಪುತ್ರಿಯನ್ನು ಮನೆಗೆ ಬರ ಮಾಡಿಕೊಂಡ ಪ್ರಿಯಾಂಕಾ ಚೋಪ್ರಾ. ಮದರ್ಸ್ ಡೇ ದಿನ ಪಿಗ್ಗಿ ಎಮೋಷನಲ್ ನೋಟ್....
ಬಾಲಿವುಡ್ (Bollywood) ಸುಂದರಿ, ಏಷ್ಯಾ ರಿಚ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಹಾಲಿವುಡ್ ಖ್ಯಾತ ಪಾಪ್ ಗಾಯಕ ನಿಕ್ ಜೋನಾಸ್ (Nick Jonas) ಅವರು ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Malti marie) ಹುಟ್ಟಿ 100 ದಿನಗಳ ನಂತರ ಮನೆಗೆ ಬರ ಮಾಡಿಕೊಂಡಿದ್ದಾರೆ. ಮೇ 8 ಮದರ್ಸ್ ಡೇ (Mothers Day) ಪ್ರಯುಕ್ತ ಮಗಳ ಜೊತೆಗಿರುವ ಫೋಟೋ ಹಂಚಿಕೊಂಡ ಪಿಗ್ಗಿ ಎಮೋಷನಲ್ ನೋಟ್ ಬರೆದಿದ್ದಾರೆ.
ಪಿಗ್ಗಿ ಪೋಸ್ಟ್:
'ನಾವು ಕೆಲವು ದಿನಗಳಿಂದ ಎದುರಿಸುತ್ತಿರುವ ಏಳು ಬೀಳುಗಳನ್ನು ನಿಮ್ಮ ಜೊತೆ ಈ ತಾಯಂದಿರ ದಿನದಂದು ಹಂಚಿಕೊಳ್ಳುತ್ತೀನಿ. ನಮಗಿದು ರೋಲರ್ ಕೋಸ್ಟರ್ (Roller coster) ಅನುಭವ ಆಗಿದೆ, ಈಗ ತಿಳಿಯುತ್ತಿದೆ ಜೀವನದಲ್ಲಿ ಈ ಕ್ಷಣವನ್ನು ಎಲ್ಲರು ಎದುರಿಸಿದ್ದಾರೆ ಎಂದು. ಸುಮಾರು 100 ದಿನಗಳ ಕಾಲ ನಮ್ಮ ಪುಟ್ಟ ಮಗಳು ಎನ್‌ಐಸಿಯುನಲ್ಲಿ (NICU) ಇದ್ದು ಈಗ ಮನೆಗೆ ಬಂದಿದ್ದಾಳೆ. ಪ್ರತಿಯೊಂದು ಕುಟುಂಬದ ಜರ್ನಿ ವಿಭಿನ್ನವಾಗಿರುತ್ತದೆ ಆದರೆ ಆಗ ಎಲ್ಲರಲ್ಲೂ ಆತ್ಮವಿಶ್ವಾಸ ಇರುತ್ತದೆ' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಪತಿ ಜೊತೆ Priyanka Chopra Easter ಔಟಿಂಗ್; ನಟಿಯ ಬಟ್ಟೆ ಬೆಲೆ ಕೇಳಿದರೆ ತಲೆ ತಿರುಗುತ್ತೆ!
'ನಮ್ಮ ಕುಟುಂಬದಲ್ಲಿ ಎರಡು ಮೂರು ತಿಂಗಳು ದೊಡ್ಡ ಚಾಲೆಂಜ್ ಆಗಿತ್ತು. ನಮ್ಮದು ತುಂಬಾ ಕ್ಲಿಯರ್ ಅಗಿತ್ತು . ಹಿನ್ನೋಟದಲ್ಲಿ ನಮ್ಮ ಜರ್ನಿ ಹೇಗಿತ್ತು ಎಷ್ಟು ಮುಖ್ಯವಾಗಿತ್ತು ಎಂದಷ್ಟೇ ನಿಜ. ನಮ್ಮ ಪುಟ್ಟ ಹುಡುಗಿ ಮನೆಗೆ ಬಂದಿರುವುದಕ್ಕೆ ನಾವು ತುಂಬಾ ಸಂತೋಷವಾಗಿದ್ದೀವಿ. ನಮಗೆ ಸಹಾಯ ಮಾಡಿದ ಪ್ರತಿಯೊಬ್ಬ ವೈದ್ಯ (Doctor), ನರ್ಸ್ (Nurse) ಮತ್ತು ರಾಡಿ ಆಸ್ಪತ್ರೆ ಲಾಸ್ ಏಂಜಲ್ಸ್ (LA) ಸ್ಪೆಷಲಿಸ್ಟ್‌ಗಳಿಗೆ ಧನ್ಯವಾದಗಳು. ಸ್ವಾರ್ಥರಹಿತವಾಗಿ ನಮಗೆ ಸಹಾಯ ಮಾಡಿದ್ದಾರೆ. ನಮ್ಮ ಜೀವನದ ಮುಂದಿನ ಅಧ್ಯಾಯ ಈಗ ಶುರುವಾಗುತ್ತದೆ.Our baby is truly a basass. Lets make it MM! ಅಮ್ಮ ಅಪ್ಪ ನಿನ್ನ ತುಂಬಾ ಇಷ್ಟ ಪಡುತ್ತಾರೆ.' ಎಂದು ಪ್ರಿಯಾಂಕಾ ಹೇಳಿದ್ದಾರೆ.
'ಎಲ್ಲರಿಗೂ ತಾಯಂದಿರ ದಿನದ ಶುಭಾಶುಗಳು. ನಮ್ಮ ಕೇರ್‌ಟೇಕರ್‌ಗೂ ಶುಭಾಶಯಗಳನ್ನು ತಿಳಿಸುತ್ತೀನಿ. ನೀವೆಲ್ಲರೂ ಮೇಲ್ನೋಟಕ್ಕೆ ಸುಲಭವಾಗಿ ಕಾಣಿಸುತ್ತೀರಾ ಅಷ್ಟೆ. ನನ್ನ ಪತಿ ನಿಕ್ ಜೋನಾಸ್ ನಿಮ್ಮ ಸಹಾಯವಿಲ್ಲದೆ ನಾವು ಈ ಜರ್ನಿ ನಡೆಸಲು ಆಗುತ್ತಿರಲಿಲ್ಲ. ದಿವ್ಯಾ ಜೋತಿ ಮಾಸಿ ಫೋಟೋ ಕ್ಲಿಕ್ ಮಾಡಿದ್ದು, ಅಕೈರಿ ಕಲ್ಕಿ ಈ ಉಡುಪು ಕೊಟ್ಟಿದ್ದು' ಎಂದು ಪೋಸ್ಟ್ ಮಾಡಿದ್ದಾರೆ.
ಸಂಸ್ಕೃತ ಹೆಸರಿಟ್ಟು ನಾಮಕರಣ
ನಿಕ್ ಮತ್ತು ಪ್ರಿಯಾಂಕಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ (Malti marie chopra) ಎಂದು ಹೆಸರಿಟ್ಟಿದ್ದಾರೆ. ಹೆಸರು ತುಂಬಾನೇ ಡಿಫರೆಂಟ್ ಆಗಿದ್ದು ಸಂಸ್ಕೃತದ ಪದ ಎನ್ನಲಾಗಿದೆ. ಪ್ರಿಯಾಂಕಾ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ನಾಡು ನುಡಿ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ, ಅದಕ್ಕೆ ಸಾಕ್ಷಿ ಆಯ್ತು ಮಗಳ ಹೆಸರು.
'ಮಾಲ್ತಿ ಮೇರಿ ರಾತ್ರಿ 8 ಗಂಟೆಗೆ ಜನಿಸಿದ್ದಾಳೆ. ಮಾಲ್ತಿ ಸಂಸ್ಕೃತ ಮೂಲಕ ಪದವಾಗಿದ್ದು ಹೂವಿನ ಸುವಾಸನೆ, ಬೆಳದಿಂಗಳು ಎಂಬ ಅರ್ಥ ಕೊಡುತ್ತದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲಾ ಮೇರಿಸ್ ಎಂದು ಇದರ ಅರ್ಥ ಸಮದ್ರದ ತಾರೆ ಎಂದು. ಫ್ರೆಂಚ್‌ನಲ್ಲಿ ಜೀಸ್‌ಸ್ ತಾಯಿ ಎಂಬರ್ಥ ಕೂಡ' ಎಂದು ಹಾಲಿವುಡ್ ಖಾಸಗಿ ಮಾಧ್ಯಮ ವರದಿ ಮಾಡಿದೆ.
ಅನಾಥ ಮಗುವೆಗೆ ತಾಯಿಯಾಗಲು ಬಯಿಸಿದ್ದ ಪಿಗ್ಗಿ, ನೋ ಎಂದ್ರಂತೆ ತಾಯಿ ಮಧು ಚೋಪ್ರಾ!
'ಸರೋಗೆಸಿ ಮೂಲಕ ನಾವು ನಮ್ಮ ಮಗುವನ್ನು ಸ್ವಾಗತಿಸಿಕೊಂಡಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಥ್ಯಾಂಕ್ಸ್' ಎಂದು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಜನವರಿ 22ರಂದು ಪೋಸ್ಟ್ ಹಾಕಿದ್ದರು. ಪ್ರಿಯಾಂಕಾ ತಡವಾಗಿ ಜನರಿಗೆ ಮಗು ಬಗ್ಗೆ ತಿಳಿಸಿದ್ದಾರೆ ಎನ್ನು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 12 ವಾರಗಳು ಮುಂಚಿತವಾಗಿಯೇ ಮಗು ಬಾಡಿಗೆ ತಾಯಿ ಮೂಲಕ ಹುಟ್ಟಿದ್ದು ಪ್ರೀ-ಮೆಚ್ಯೂರ್ ಬೇಬಿಯಾಗಿದೆ. ಬಾಡಿ ತಾಯಿಯನ್ನು ಕೆಲವು ದಿನಗಳ ಕಾಲ ಕ್ಯಾಲಿಪೋರ್ನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೆಲೆಬ್ರಿಟಿ ಕಪಲ್‌ಗಳು ಇದುವರೆಗೂ ಮಗುವಿನ ಫೋಟೋ ರಿವೀಲ್ ಮಾಡಿಲ್ಲ
