Preity Zinta: ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾದ ಬಾಲಿವುಡ್ ನಟಿ
ಬಾಲಿವುಡ್ ಖ್ಯಾತ ನಟಿ ಪ್ರೀತಿ ಝಿಂಟಾ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾಗಿದ್ದಾರೆ. ಪತಿಯ ಜೊತೆ ಹ್ಯಾಪಿ ಪೋಸ್ಟ್ ಒಂದನ್ನು ನಟಿ ಶೇರ್ ಮಾಡಿದ್ದಾರೆ.
ಅಭಿನಂದನೆಗಳು(Congratulations) ಪ್ರೀತಿ ಜಿಂಟಾ(Preity Zinta) ಮತ್ತು ಜೀನ್ ಗುಡೆನಫ್. ದಂಪತಿಗಳು ಗುರುವಾರ ಅವಳಿ ಮಕ್ಕಳಾದ ಜೈ ಮತ್ತು ಜಿಯಾ ಅವರಿಗೆ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತನದ (Surrogacy) ಮೂಲಕ ಇಬ್ಬರು ಮಕ್ಕಳನ್ನು ಪಡೆದಿರುವುದಾಗಿ ಜೋಡಿ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಕ್ಕಳ ಜನನ ಎನೌನ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದಾರೆ ಪ್ರೀತಿ. ತನ್ನ ಮತ್ತು ತನ್ನ ಗಂಡನ ಫೋಟೋವನ್ನು ಹಂಚಿಕೊಂಡ 46 ವರ್ಷದ ನಟಿ ಖುಷಿಯ ಸುದ್ದಿ ತಿಳಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಇಂದು ನಮ್ಮ ಅದ್ಭುತ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
Aryan Drug Case: ಶಾರೂಖ್ ಮನೆಗೆ ಭೇಟಿ ಕೊಟ್ಟ ಪ್ರೀತಿ
ಜೀನ್ ಮತ್ತು ನಾನು ತುಂಬಾ ಸಂತೋಷಪಟ್ಟಿದ್ದೇವೆ. ನಮ್ಮ ಹೃದಯಗಳು ತುಂಬಾ ಕೃತಜ್ಞತೆಯಿಂದ ತುಂಬಿವೆ. ತುಂಬಾ ಪ್ರೀತಿಯಿಂದ ನಾವು ನಮ್ಮ ಅವಳಿಗಳಾದ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಅನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ನಮ್ಮ ಜೀವನದಲ್ಲಿ ಈ ಹೊಸ ಹಂತದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದಿದ್ದಾರೆ.
ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ವೈದ್ಯರು ಮತ್ತು ಅವರ ಬಾಡಿಗೆ ತಾಯಿಗೆ ನಟಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ವೈದ್ಯರು, ದಾದಿಯರು ಮತ್ತು ನಮ್ಮ ಬಾಡಿಗೆ ತಾಯಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.
ಪ್ರೀತಿ ಜಿಂಟಾ ಫೆಬ್ರವರಿ 29, 2016 ರಂದು ಜೀನ್ ಗುಡ್‌ನಫ್ ಅವರನ್ನು ವಿವಾಹವಾದರು. ನಂತರ ಲಾಸ್ ಏಂಜಲೀಸ್‌ಗೆ ತೆರಳಿದರು. ತಮ್ಮ ಅವಳಿ ಮಕ್ಕಳಾದ ಜೈ ಮತ್ತು ಜಿಯಾ ಅವರ ಬಗ್ಗೆ ದಂಪತಿಗಳ ದಿಢೀರ್ ಪ್ರಕಟಣೆಯು ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದು, ಖುಷಿಗೊಳಿಸಿದೆ. ನಟಿ ಆಗಾಗ ತನ್ನ Instagram ಪ್ರೊಫೈಲ್‌ನಲ್ಲಿ ತನ್ನ ಮತ್ತು ಜೀನ್ ಗುಡ್‌ನಫ್‌ನ ಪ್ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಪ್ರೀತಿ ಜಿಂಟಾ ಮಣಿರತ್ನಂ ಅವರ 1998 ರ ಸಿನಿಮಾ ದಿಲ್ ಸೇ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದು ಅಸ್ಸಾಂನಲ್ಲಿನ ದಂಗೆಯ ಹಿನ್ನೆಲೆ ಕಾರಣ ವಿರುದ್ಧವಾಗಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿ ಹೊರಹೊಮ್ಮಿತು. ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳು, ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ವಿಶೇಷ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆಯಿತು.
ಬಾಡಿಗೆ ತಾಯ್ತನ(Surrogacy)
ಬಾಡಿಗೆ ತಾಯ್ತನವು(Surrogacy) ಮಹಿಳೆಯು ಬೇರೊಬ್ಬರಿಗಾಗಿ ಮಗುವನ್ನು ಹೆರಲು ಒಪ್ಪಿಕೊಳ್ಳುವುದಾಗಿದೆ. ಮಗುವಿನ ಜನನದ ನಂತರ ಜನ್ಮ ನೀಡಿದ ತಾಯಿಯು ಉದ್ದೇಶಿತ ಪೋಷಕರು ಅಥವಾ ಪೋಷಕರಿಗೆ ಮಗುವನ್ನು ಬಿಟ್ಟು ಕೊಡುತ್ತಾರೆ. ಬಾಡಿಗೆ ತಾಯ್ತನವು ಸಂಕೀರ್ಣವಾದ ಕಾನೂನು ಮತ್ತು ವೈದ್ಯಕೀಯ ಹಂತಗಳನ್ನು ಹೊಂದಿದೆ. ಅದನ್ನು ಕಟ್ಟುನಿಟ್ಟಾಗಿ ಪೂರೈಸಬೇಕಾಗಿರುತ್ತದೆ.