Aryan Drug Case: ಶಾರೂಖ್ ಮನೆಗೆ ಭೇಟಿ ಕೊಟ್ಟ ಪ್ರೀತಿ
- ಸಹ ನಟನ ಮನೆಗೆ ಭೇಟಿ ಕೊಟ್ಟ ಪ್ರೀತಿ ಝಿಂಟಾ
- ಮನ್ನತ್‌ಗೆ ಬಂದು ಶಾರೂಖ್ ಖಾನ್ ಗೌರಿ ಖಾನ್‌ನನ್ನು ಭೇಟಿಯಾದ ನಟಿ
ಆರ್ಯನ್ ಖಾನ್ ಜಾಮೀನು ಅರ್ಜಿಯ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವು ಆದೇಶವನ್ನು ಅಕ್ಟೋಬರ್ 20 ಕ್ಕೆ ಕಾಯ್ದಿರಿಸಿದ ಕೆಲವೇ ಗಂಟೆಗಳಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ(Preity Zinta) ಗುರುವಾರ ಸಂಜೆ ಬಾಂದ್ರಾದ ಶಾರುಖ್ ಖಾನ್ ಅವರ ಮನೆ ಮನ್ನತ್‌ಗೆ ಆಗಮಿಸಿದ್ದಾರೆ.
ಆರ್ಯನ್ ಬಂಧನದ ನಡುವೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಶಾರುಖ್ ಮತ್ತು ಗೌರಿ ಖಾನ್ ಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಕೂಡಾ ಶಾರೂಖ್ ಮನೆಗೆ ಭೇಟಿ ನೀಡುತ್ತಾ ಧೈರ್ಯ ತುಂಬುತ್ತಿದ್ದಾರೆ
ಬುಧವಾರ ಸೂಪರ್‌ಸ್ಟಾರ್ ಸಲ್ಮಾನ್ ಖಾನ್(Salman Khan) ಎಸ್‌ಆರ್‌ಕೆ ಮನೆಯ ಹೊರಗೆ ಕಾಣಿಸಿಕೊಂಡರು. ಮಾಧ್ಯಮಗಳಲ್ಲಿ ಆರ್ಯನ್ ವಿವಾದ ಶುರುವಾದ ನಂತರ ಸಲ್ಮಾನ್ ಈ ತಿಂಗಳ ಆರಂಭದಲ್ಲಿ ಶಾರೂಖ್ ಅವರನ್ನು ಭೇಟಿ ಮಾಡಿದ್ದರು.
ಅಲ್ವಿರಾ ಖಾನ್ ಅಗ್ನಿಹೋತ್ರಿ, ನೀಲಂ ಕೊಠಾರಿ, ಸೀಮಾ ಖಾನ್ ಮತ್ತು ಮಹೀಪ್ ಕಪೂರ್ ಸೇರಿದಂತೆ ಹಲವಾರು ಖ್ಯಾತನಾಮರು ಈ ತಿಂಗಳ ಆರಂಭದಲ್ಲಿ ಮನ್ನತ್‌ಗೆ ಆಗಮಿಸಿದ್ದರು.
ಹೃತಿಕ್ ರೋಷನ್, ಶತ್ರುಘ್ನ ಸಿನ್ಹಾ, ಸುಸನ್ನೆ ಖಾನ್, ಪೂಜಾ ಭಟ್, ಮಿಕಾ ಸಿಂಗ್, ಹಂಸಲ್ ಮೆಹ್ತಾ ಮತ್ತು ಇತರರು ಆರ್ಯನ್ ಮತ್ತು ಖಾನ್ ಕುಟುಂಬಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 2 ರಂದು ಗೋವಾಕ್ಕೆ ಸಾಗುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಎನ್‌ಸಿಬಿ(NCB) ತಂಡವು ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಿದೆ. ಇದರ ಮಧ್ಯೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಆರ್ಯನ್ ಖಾನ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿದೆ.
ಇದುವರೆಗಿನ ತನಿಖೆಯು ಪಿತೂರಿ ಮತ್ತು ಕಾನೂನುಬಾಹಿರ ಖರೀದಿ ಮತ್ತು ಮಾದಕ ವಸ್ತುಗಳ ಸೇವನೆಯಲ್ಲಿ ಅವರ ಪಾತ್ರವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.