ಗಲ್ವಾನ್ ಹೇಳಿಕೆ: ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ; ಅಕ್ಷಯ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಕಿಡಿ

ರಿಚಾ ಚಡ್ಡ ಗಲ್ವಾನ್ ಹೇಳಿಕೆಗೆ ಪ್ರಕಾಶ್ ರಾಜ್ ಬೆಂಬಲ ನೀಡಿದ್ದಾರೆ. ಅಕ್ಷಯ್ ಕುಮಾರ್ ವಿರುದ್ಧ ಕಿಡಿ ಕಾರಿರುವ ಪ್ರಕಾಶ್ ರಾಜ್ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 

Prakash Raj slams Akshay Kumar for comment on Richa Chadhas Galwan tweet sgk

ಬಾಲಿವುಡ್ ನಟಿ ರಿಚಾ ಚಡ್ಡಾ ಗಲ್ವಾನ್ ಹೇಳಿಕೆ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಸೌತ್ ಸಿನಿಮಾರಂಗದ ಖ್ಯಾತ ನಟ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದು ರಿಚಾ ಚಡ್ಡಾ ಪರ ಬ್ಯಾಟ್ ಬೀಸಿದ್ದಾರೆ. ರಿಚಾ ಚೆಡ್ಡಾ ಹೇಳಿಕೆ ಬೆಂಬಲ ಸೂಚಿಸಿರುವ ಪ್ರಕಾಶ್ ರಾಜ್ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ. ದೇಶದ ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಅಣಕಿಸಿದ್ದ ನಟಿ ರಿಚಾ ಚಡ್ಡಾ ವಿರುದ್ಧ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಆಕ್ರೋಶ ಹೊರ ಹಾಕಿದ್ದರು. 

ಅಕ್ಷಯ್ ಕುಮಾರ್ ಮಾತಿಗೆ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದು ನಿಮಗಿಂತ ರಿಚಾ ಚಡ್ಡಾ  ಹೆಚ್ಚು ಪ್ರಸ್ತುತ ಎಂದು ಹೇಳಿದ್ದಾರೆ. ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, 'ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಅಕ್ಷಯ್ ಕುಮಾರ್. ನಮ್ಮ ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ' ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, 'ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ರಿಚಾ ಚಡ್ಡಾ. ನೀವು ಯಾವ ಅರ್ಥದಲ್ಲಿ ಹೇಳಿದ್ದೀರಿ ಎನ್ನುವುದು ನಮಗೆ ಅರ್ಥವಾಗಿದೆ' ಎಂದು ಹೇಳಿದ್ದಾರೆ.  

ಪ್ರಕಾಶ್ ರಾಜ್ ಹೇಳಿಕೆ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅಕ್ಷಯ್ ಕುಮಾರ್ ಅವರಿಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನೆಟ್ಟಿಗರೊಬ್ಬರು ದಯವಿಟ್ಟು ಪ್ರಕಾಶ್ ರಾಜ್ ಮತ್ತು ರಿಚಾ ಚಡ್ಡಾ ಅವರನ್ನು ಸಿಯಾಚಿನ್ ಬಾರ್ಡರ್‌ಗೆ ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

'ಗಲ್ವಾನ್‌' ಕೆಣಕಿದ ರಿಚಾ ಛಡ್ಡಾಗೆ ನೆಟ್ಟಿಗರ ಭರ್ಜರಿ ಕ್ಲಾಸ್‌, ಕ್ಷಮೆ ಕೇಳಿದ ನಟಿ

ಅಕ್ಷಯ್ ಕುಮಾರ್ ಹೇಳಿದ್ದೇನು?

ರಿಚಾ ಚಡ್ಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್ ಕುಮಾರ್, 'ಇದನ್ನು ನೋಡಿ ತುಂಬಾ ನೋವಾಗುತ್ತಿದೆ. ನಮ್ಮ ಸೈಕನಿಗೆ ನಾವು ಯಾವತ್ತೂ ಅವಮಾನ ಮಾಡಬಾರದು. ನಾವೆಲ್ಲ ಆರಾಮಾಗಿ ಇಲ್ಲಿ ಇದ್ದೀವಿ ಅಂದರೆ ಅದಕ್ಕೆ ಸೈನಿಕರೇ ಕಾರಣ' ಎಂದು ಹೇಳಿದ್ದರು. 

ಲೆಫ್ಟಿನೆಂಟ್‌ ಜನರಲ್‌ ಹೇಳಿದ್ದೇನು?

ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ, 'ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಮರಳಿ ವಶಪಡಿಸಿಕೊಳ್ಳಲು ನಮ್ಮ ಸೇನೆ ಸದಾ ಸಿದ್ಧವಾಗಿರುತ್ತದೆ. ಅವರಿಗೆ ತಕ್ಕ ರೀತಿಯ ಉತ್ತರ ನೀಡಿ ವಶಪಡಿಸಿಕೊಳ್ಳುತ್ತೇವೆ' ಎಂದು ಕಮಾಂಡರ್‌ ಹೇಳಿದ್ದರು. ಈ ಹೇಳಿಕೆಯನ್ನು ಬಾಬಾ ಬನಾರಸ್‌ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಪೋಸ್ಟ್‌ ಮಾಡಿತ್ತು. 

ತುಂಬಾ ನೋವಾಯಿತು; 'ಗಲ್ವಾನ್' ಕೆಣಕಿದ ನಟಿ ರಿಚಾ ಚಡ್ಡಾ ವಿರುದ್ಧ ಅಕ್ಷಯ್ ಕುಮಾರ್ ಕಿಡಿ

ವಿವಾದ ಎಬ್ಬಿಸಿದ ರಿಚಾ ಚಡ್ಡಾ ಟ್ವೀಟ್

ಲೆಫ್ಟಿನೆಂಟ್‌ ಜನರಲ್‌ ಮಾತಿಗೆ ರಿಚಾ ಚಡ್ಡಾ ಪ್ರತಿಕ್ರಿಯೆ ನೀಡಿ, 'ಗಲ್ವಾನ್‌ ಹಾಯ್‌ ಎಂದು ಹೇಳುತ್ತಿದೆ' ಎಂದು ಬರೆದಿದ್ದರು. ಅವರ ಈ ಟ್ವೀಟ್‌ ಕ್ಷಣಾರ್ಧದಲ್ಲಿ ವೈರಲ್‌ ಆಗಿತ್ತು. ಅಲ್ಲದೇ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ರಿಚಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾಚಿಕಗೇಡಿನ ಹಾಗೂ ಅವಮಾನಕರ ಟ್ವೀಟ್‌ ಎಂದು ಕರೆಯುತ್ತಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ರಿಚಾ ಚಡ್ಡಾ ಟ್ವೀಟ್ ಡಿಲೀಟ್ ಮಾಡಿದರು. ಬಳಿಕ ಕ್ಷಮೆಯಾಚಿಸಿದರು. 

ಗಲ್ವಾನ್ ಸಂಘರ್ಷ

2020ರ ಜೂನ್‌ನಲ್ಲಿ ಸಂಭವಿಸಿದ ಗಲ್ವಾನ್‌ ಘರ್ಷಣೆಯಲ್ಲಿ ಚೀನಾದ ಸೈನಿಕರ ವಿರುದ್ಧ ಹೋರಾಟ ಮಾಡುತ್ತಾ ಭಾರತದ 20 ಸೈನಿಕರು ಸಾವು ಕಂಡಿದ್ದರು. ಈ ಘಟನೆಯನ್ನು ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವು ಕಂಡಿದ್ದರು. ಇದು ಎರಡೂ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ದ್ವಿಪಕ್ಷೀಯ ಬಿಕ್ಕಟ್ಟಿಗೂ ಕಾರಣವಾಗಿತ್ತು.

Latest Videos
Follow Us:
Download App:
  • android
  • ios