Asianet Suvarna News Asianet Suvarna News

ತುಂಬಾ ನೋವಾಯಿತು; 'ಗಲ್ವಾನ್' ಕೆಣಕಿದ ನಟಿ ರಿಚಾ ಚಡ್ಡಾ ವಿರುದ್ಧ ಅಕ್ಷಯ್ ಕುಮಾರ್ ಕಿಡಿ

ದೇಶದ ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಅಣಕಿಸಿದ್ದ ನಟಿ ರಿಚಾ ಚಡ್ಡಾ ವಿರುದ್ಧ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಿಡಿ ಕಾರಿದ್ದಾರೆ. ಸೇನೆಯನ್ನು ಅವಮಾನಿಸಬಾರದು ಎಂದಿರುವ ಅಕ್ಷಯ್ ಕುಮಾರ್ ಇಂಥ ಮಾತು ಕೇಳಿ ತುಂಬಾ ನೋವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Akshay Kumar takes a jibe at Richa Chadha's Galwan Says Hi tweet sgk
Author
First Published Nov 25, 2022, 11:04 AM IST

ದೇಶದ ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಅಣಕಿಸಿದ್ದ ನಟಿ ರಿಚಾ ಚಡ್ಡಾ ವಿರುದ್ಧ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಿಡಿ ಕಾರಿದ್ದಾರೆ. ಸೇನೆಯನ್ನು ಅವಮಾನಿಸಬಾರದು ಎಂದಿರುವ ಅಕ್ಷಯ್ ಕುಮಾರ್ ಇಂಥ ಮಾತು ಕೇಳಿ ತುಂಬಾ ನೋವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ನಟಿ ರಿಚಾ ಚಡ್ಡಾ, 2020ರಲ್ಲಿ ನಡೆದ ಗಲ್ವಾನ್‌ ಕಣಿವೆ ಸಂಘರ್ಷದ ರೆಫರೆನ್ಸ್ ನೀಡಿ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವಾಗಿ ದೇಶದ ಅಗ್ರ ಸೇನಾ ಕಮಾಂಡರ್‌ನ ಹೇಳಿಕೆಯನ್ನು ಕುಹಕ ಮಾಡಿದ್ದರು. ಸೇನೆಗೆ ಅವಮಾನ ಮಾಡಿದ್ದಾರೆ ಎಂದು ರಿಚಾ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಅಕ್ಷಯ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ರಿಚಾ ಚಡ್ಡಾ ಹೇಳಿಕೆಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, 'ಇದನ್ನು ನೋಡಿ ತುಂಬಾ ನೋವಾಗುತ್ತಿದೆ. ನಮ್ಮ ಸೈಕನಿಗೆ ನಾವು ಯಾವತ್ತೂ ಅವಮಾನ ಮಾಡಬಾರದು. ನಾವೆಲ್ಲ ಆರಾಮಾಗಿ ಇಲ್ಲಿ ಇದ್ದೀವಿ ಅಂದರೆ ಅದಕ್ಕೆ ಸೈನಿಕರೇ ಕಾರಣ' ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಟ್ವೀಟ್‌ಗೆ ಅನೇಕರು ಬೆಂಬಲ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೆಫ್ಟಿನೆಂಟ್‌ ಜನರಲ್‌ ಹೇಳಿದ್ದೇನು?

ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ, 'ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಮರಳಿ ವಶಪಡಿಸಿಕೊಳ್ಳಲು ನಮ್ಮ ಸೇನೆ ಸದಾ ಸಿದ್ಧವಾಗಿರುತ್ತದೆ. ಅವರಿಗೆ ತಕ್ಕ ರೀತಿಯ ಉತ್ತರ ನೀಡಿ ವಶಪಡಿಸಿಕೊಳ್ಳುತ್ತೇವೆ' ಎಂದು ಕಮಾಂಡರ್‌ ಹೇಳಿದ್ದರು. ಈ ಹೇಳಿಕೆಯನ್ನು ಬಾಬಾ ಬನಾರಸ್‌ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಪೋಸ್ಟ್‌ ಮಾಡಿತ್ತು. 

'ಗಲ್ವಾನ್‌' ಕೆಣಕಿದ ರಿಚಾ ಛಡ್ಡಾಗೆ ನೆಟ್ಟಿಗರ ಭರ್ಜರಿ ಕ್ಲಾಸ್‌, ಕ್ಷಮೆ ಕೇಳಿದ ನಟಿ

ರಿಚಾ ಚಡ್ಡಾ ವಿವಾದಾತ್ಮಕ ಪ್ರತಿಕ್ರಿಯೆ 

ಇದಕ್ಕೆ ರಿಚಾ ಚಡ್ಡಾ ಪ್ರತಿಕ್ರಿಯೆ ನೀಡಿದ್ದರು. ರೀ ಟ್ವೀಟ್ ಮಾಡಿ 'ಗಲ್ವಾನ್‌ ಹಾಯ್‌ ಎಂದು ಹೇಳುತ್ತಿದೆ' ಎಂದು ಬರೆದಿದ್ದರು. ಅವರ ಈ ಟ್ವೀಟ್‌ ಕ್ಷಣಾರ್ಧದಲ್ಲಿ ವೈರಲ್‌ ಆಗಿದೆ. ಅಲ್ಲದೇ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ರಿಚಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಚಿಕಗೇಡಿನ ಹಾಗೂ ಅವಮಾನಕರ ಟ್ವೀಟ್‌ ಎಂದು ಕರೆಯುತ್ತಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ರಿಚಾ ಚಡ್ಡಾ ಟ್ವೀಟ್ ಡಿಲೀಟ್ ಮಾಡಿದರು. ಬಳಿಕ ಕ್ಷಮೆಯಾಚಿಸಿದರು. 

'ನಾನು ಮಾಡಿದ ಟ್ವೀಟ್‌ನ ಉದ್ದೇಶ ಎಂದಿಗೂ ಸೇನೆಯನ್ನು ಅವಮಾನ ಮಾಡುವುದಾಗಿರಲಿಲ್ಲ. ನಾನು ಪೋಸ್ಟ್‌ ಮಾಡಿರುವ 3 ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾನು ಉದ್ದೇಶ ರಹಿತವಾಗಿ ಹಾಕಿರುವ ಪೋಸ್ಟ್‌ ನಿಂದ ಯಾರಿಗಾದರೂ ಬೇಸರವಾಗಿದ್ದರೆ ನನಗೂ ಅದೇ ರೀತಿ ಅನಿಸುತ್ತದೆ. ನನ್ನ ನಾನಾಜಿ ಕೂಡ ಸೇನೆಯ ಪ್ರಸಿದ್ಧ ಹುದ್ದೆಯಲ್ಲಿದ್ದರು' ಎಂದು ರಿಚಾ ಚಡ್ಡಾ ತಮ್ಮ ಕ್ಷಮಾಪಣೆ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

ಇದೇ ಟ್ವೀಟ್ ನಲ್ಲಿ ರಿಚಾ ಚಡ್ಡಾ, ತಮ್ಮ ಅಜ್ಜ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದರು ಎಂದು ಹೇಳಿಕೊಂಡಿದ್ದು ಮಾತ್ರವಲ್ಲದೆ, ಇಂಡೋ-ಚೀನಾ ಯುದ್ಧದಲ್ಲಿ ಅವರ ಕಾಲಿಗೆ ಗುಂಡು ತಗುಲಿತ್ತು ಎಂದು ಹೇಳಿದ್ದಾರೆ. ನನ್ನ ಮಾಮ ಪ್ಯಾರಾಟ್ರೂಪರ್‌ ಆಗಿದ್ದರು. ಸೇನೆಯ ಗೌರವ ನನ್ನ ರಕ್ತದಲ್ಲಿದೆ. ದೇಶವನ್ನು ರಕ್ಷಿಸುವ ಹಾದಿಯಲ್ಲಿ ಒಬ್ಬ ಯೋಧ ಹುತಾತ್ಮನಾದಾಗ ಅಥವಾ ಗಾಯಾಳುವಾದಾಗ ಇಡೀ ಕುಟುಂಬಕ್ಕೆ ಅದರ ಪರಿಣಾಮ ಬೀರುತ್ತದೆ. ಇದರಿಂದಾಗಿಯೇ ನನ್ನಂಥ ವ್ಯಕ್ತಿಗಳು ದೇಶದಲ್ಲಿದಿದ್ದಾರೆ. ನಮ್ಮವರನ್ನು ಕಳೆದುಕೊಳ್ಳುವ ದುಃಖ ಹೇಗಿರುತ್ತದೆ ಎನ್ನುವುದು ನನಗೆ ಗೊತ್ತದೆ. ಇದೊಂದು ನನಗೆ ಭಾವನಾತ್ಮಕ ವಿಷಯ' ಎಂದು ಹೇಳಿದ್ದಾರೆ.

ಗಲ್ವಾನ್ ಸಂಘರ್ಷ

2020ರ ಜೂನ್‌ನಲ್ಲಿ ಸಂಭವಿಸಿದ ಗಲ್ವಾನ್‌ ಘರ್ಷಣೆಯಲ್ಲಿ ಚೀನಾದ ಸೈನಿಕರ ವಿರುದ್ಧ ಹೋರಾಟ ಮಾಡುತ್ತಾ ಭಾರತದ 20 ಸೈನಿಕರು ಸಾವು ಕಂಡಿದ್ದರು. ಈ ಘಟನೆಯನ್ನು ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವು ಕಂಡಿದ್ದರು. ಇದು ಎರಡೂ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ದ್ವಿಪಕ್ಷೀಯ ಬಿಕ್ಕಟ್ಟಿಗೂ ಕಾರಣವಾಗಿತ್ತು.


 

Follow Us:
Download App:
  • android
  • ios