ವಿವಾದದ ಮಧ್ಯೆಯೂ 3 ದಿನದಲ್ಲಿ 340 ಕೋಟಿ ರು. ಗಳಿಕೆ: ಆದಿಪುರುಷ ಸಂಭಾಷಣೆಕಾರನಿಗೆ ಭಾರಿ ಭದ್ರತೆ

ನಟ ಪ್ರಭಾಸ್‌ ನಟನೆಯ ರಾಮಾಯಣ ಕಥೆಯ ‘ಆದಿಪುರುಷ’ ಸಿನಿಮಾ ಬಿಡುಗಡೆಯಾದ 3ನೇ ದಿನ ಭಾನುವಾರ 100 ಕೋಟಿ ರು. ಗಳಿಸುವ ಮೂಲಕ ಜಗತ್ತಿನಾದ್ಯಂತ 3 ದಿನದಲ್ಲಿ ಒಟ್ಟು 340 ಕೋಟಿ ರು. ಗಳಿಸಿದೆ.

Prabhas starer Adipurush movies collected 340 crores in 3 days even in the midst of controversy akb

ಮುಂಬೈ: ನಟ ಪ್ರಭಾಸ್‌ ನಟನೆಯ ರಾಮಾಯಣ ಕಥೆಯ ‘ಆದಿಪುರುಷ’ ಸಿನಿಮಾ ಬಿಡುಗಡೆಯಾದ 3ನೇ ದಿನ ಭಾನುವಾರ 100 ಕೋಟಿ ರು. ಗಳಿಸುವ ಮೂಲಕ ಜಗತ್ತಿನಾದ್ಯಂತ 3 ದಿನದಲ್ಲಿ ಒಟ್ಟು 340 ಕೋಟಿ ರು. ಗಳಿಸಿದೆ. ಹೀಗೆಂದು ಚಿತ್ರ ನಿರ್ಮಾಣ ಮಾಡಿದ್ದ ಟಿ-ಸಿರೀಸ್‌ ಸಂಸ್ಥೆ ‘ಜೈ ಶ್ರೀರಾಮ್‌’ ಎಂಬ ಬರಹದೊಂದಿಗೆ ತನ್ನ ಟ್ವೀಟರ್‌ ಖಾತೆಯಲ್ಲಿ ತಿಳಿಸಿದೆ. ಸಿನಿಮಾದಲ್ಲಿ ಹಿಂದೂ ದೇವರು ಹನುಮಂತನಿಗೆ ಅವಮಾನ ಮಾಡಲಾಗಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದ ನಡುವೆಯೂ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ ಎನ್ನಲಾಗಿದೆ. ಶುಕ್ರವಾರ ಸಿನಿಮಾ ಬಿಡುಗಡೆಯಾಗಿತ್ತು. ನಿರ್ದೇಶಕ ಓಂ ರಾವತ್‌ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಟ ಪ್ರಭಾಸ್‌ ಶ್ರೀರಾಮ, ನಟಿ ಕೃತಿ ಸನೋನ್‌ ಸೀತಾಮಾತೆ ಹಾಗೂ ನಟ ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ಆದಿಪುರುಷ ಚಿತ್ರದ ಸಂಭಾಷಣೆಕಾರ ಮನೋ​ಜ್‌ಗೆ ಪೊಲೀಸ್‌ ಭದ್ರತೆ

ಆದಿಪುರುಷ ಚಿತ್ರದ ಸಂಭಾಷಣೆಕಾರ ಮನೋಜ್‌ ಮುನ್ತಾಶಿರ್‌ಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ ಮುಂಬೈ ಪೊಲೀಸರು ಆತನಿಗೆ ಭದ್ರತೆ ಒದಗಿಸಿದ್ದಾರೆ. ‘ಚಿತ್ರದಲ್ಲಿ ಹಿಂದೂ ದೇವರು ಹನುಮಂತನಿಗೆ ಅವಮಾನ ಮಾಡಲಾಗಿದೆ. ಸಂಭಾಷಣೆಯಲ್ಲಿ ತೀರಾ ತಳಮಟ್ಟದ ಭಾಷೆಯನ್ನು ಬಳಸಲಾಗಿದೆ’ ಎಂದು ಚಿತ್ರದ ಸಂಭಾಷಣೆ ಬರೆದಿದ್ದ ಸಂಭಾಷಣೆಕಾರ ಮನೋಜ್‌ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ, ತನಗೆ ಹಲವು ಜೀವ ಬೆದರಿಕೆ ಕರೆ ಬರುತ್ತಿದ್ದು ಭದ್ರತೆ ಒದಗಿಸುವಂತೆ ಮನೋಜ್‌ ಪೊಲೀಸರಲ್ಲಿ ಮನವಿ ಮಾಡಿದ್ದರು. ಹೀಗಾಗಿ ಸುರಕ್ಷತಾ ದೃಷ್ಟಿಯ ಕಾರಣ ಭದ್ರತೆ ನೀಡಲಾಗಿದೆ.

ರಾಮಾಯಣಕ್ಕೆ 'ಆದಿಪುರುಷ'ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ: ಮುಖೇಶ್ ಖನ್ನಾ ಆಕ್ರೋಶ

ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಆದಿಪುರುಷ್ ಅಭಿಮಾನಿಗಳಿಗೆ ಅಷ್ಟೇ ನಿರಾಸೆ ಮೂಡಿಸಿದೆ. ಪ್ರಭಾಸ್ ನಟನೆ ಬಿಟ್ಟರೇ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿಲ್ಲ. ಓಂ ರಾವುತ್ ನಿರ್ದೇಶನ, ಸಂಭಾಷಣೆ, ವಿಎಕ್ಸ್‌ಎಫ್, ಪಾತ್ರಗಳ ಡಿಸೈನ್ ಸೇರಿದಂತೆ ಎಲ್ಲಾ ವಿಚಾರದಲ್ಲೂ ಆದಿಪುರುಷ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಓಂ ರಾವುತ್ ಅವರಿಗೆ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.  ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಕಲಾವರಿದರು ಕೂಡ ಆದಿಪುರುಷ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ, ರಾಮನ ಹೆಸರು ಹಾಳು ಮಾಡಬೇಡಿ' ಎಂದು ಪರೋಕ್ಷವಾಗಿ ಜರಿದಿದ್ದರು. ಇದೀಗ ಬಾಲಿವುಡ್ ಹಿರಿಯ ನಟ ಮುಖೇಶ್ ಖನ್ನಾ ಕೂಡ ಆಕ್ರೋಶ ಹೊರಹಾಕಿದ್ದಾರೆ. 

ಪಠಾಣ್, KGF-2 ನಂತರದ ಸ್ಥಾನ ಪಡೆದ ಆದಿಪುರುಷ್: ಮೊದಲ ದಿನದ ಕಲೆಕ್ಷನ್ ಎಷ್ಟು ?

ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿರುವ ಮುಖೇಶ್ ಖನ್ನಾ, ಆದಿಪುರುಷ್ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ರಾಮಾಯಣಕ್ಕೆ ‘ಆದಿಪುರುಷ’ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ ಎಂದು ಹೇಳಿದ್ದಾರೆ. ಓಂ ರಾವುತ್‌ಗೆ ರಾಮಾಯಣದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ತೋರುತ್ತದೆ. ಅದರ ಜೊತೆ ನಮ್ಮ ರಾಮಾಯಣವನ್ನು 'ಕಲಿಯುಗ್' ಆಗಿ ಪರಿವರ್ತಿಸಿದ ಮಹಾನ್ ಬುದ್ಧಿಜೀವಿ ಬರಹಗಾರ ಮನೋಜ್ ಮುಂತಶಿರ್ ನಮ್ಮಲ್ಲಿದ್ದಾರೆ' ಎಂದ ಮುಖೇಶ್ ಆದಿಪುರುಷ್ ಸಿನಿಮಾವನ್ನು 'ಭಯಾನಕ್ ಮಜಾಕ್' ಎಂದು ಕರೆದಿದ್ದಾರೆ. 

ಹಾಲಿವುಡ್‌ನ ಕಾರ್ಟೂನ್‌' ಎಂದ ರಾಮಾಯಾಣದ ರಾಮ ಖ್ಯಾತಿಯ ಅರುಣ್‌ ಗೋವಿಲ್‌!
ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್, ನಿರ್ಮಾಪಕರನ್ನು ಕಟುವಾಗಿ ಟೀಕಿಸಿದ್ದು, ಚಲನಚಿತ್ರವನ್ನು 'ಹಾಲಿವುಡ್‌ನ ಕಾರ್ಟೂನ್' ಎಂದು ಕಿಡಿಕಾರಿದ್ದಾರೆ.   ಹಿಟ್ ಟಿವಿ ಶೋ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ್ದ  ಕಿರುತೆರೆಯ ನಟ ಅರುಣ್ ಗೋವಿಲ್ ಆದಿಪುರುಷ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಅವರು ಅದಿಪುರುಷ ಸಿನಿಮಾವನ್ನು 'ಹಾಲಿವುಡ್‌ನ ಕಾರ್ಟೂನ್' ಎಂದು ಕರೆದಿದ್ದು ಮತ್ತು ಮಹಾಕಾವ್ಯವನ್ನು ಆಧುನೀಕರಿಸುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.  ಅದಿಪುರುಷ ವಾಲ್ಮೀಕಿಯ ರಾಮಾಯಣವನ್ನು ಆಧರಿಸಿದೆ. 

ಆದಿಪುರುಷ್ ಸೋಲಿನ ಬೆನ್ನಲ್ಲೇ ಪ್ರಭಾಸ್ ಕಣ್ಮರೆ: ಪ್ರಶಾಂತ್ ನೀಲ್ ಮೇಲೆ ಹೆಚ್ಚಿದ ಒತ್ತಡ

Latest Videos
Follow Us:
Download App:
  • android
  • ios