'ರಾಧೆ ಶ್ಯಾಮ್' ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ನಟ ಪ್ರಭಾಸ್
ನಟ ಪ್ರಭಾಸ್ ಮೊದಲ ಬಾರಿಗೆ ರಾಧೆ ಶ್ಯಾಮ್ ಸಿನಿಮಾ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋತ ಸಿನಿಮಾದ ಬಗ್ಗೆ ಮಾತನಡಿದ ಪ್ರಭಾಸ್ ಕೋವಿಡ್ ಅಥವಾ ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಲೋಪ ಇರಬಹುದು ಎಂದು ಹೇಳಿದ್ದಾರೆ.
ತೆಲುಗು ಸ್ಟಾರ್ ಪ್ರಭಾಸ್(Prabhas) ಬಾಹುಬಲಿ(bahubali) ಸಿನಿಮಾ ಬಳಿಕ ದೊಡ್ಡ ಮಟ್ಟದ ಸಕ್ಸಸ್ ಕಂಡಿಲ್ಲ. ಬಾಹುಬಲಿ ಮೂಲಕ ವಿಶ್ವದ ಗಮನ ಸೆಳೆದಿದ್ದ ಪ್ರಭಾಸ್ ನಂತರದ ಚಿತ್ರಗಳು ಮುಗ್ಗರಿಸಿವೆ. ಸಾಹೋ ಸೋಲಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಪ್ರಭಾಸ್ ರಾಧೆ ಶ್ಯಾಮ್ ಮೂಲಕ ಮತ್ತೊಮ್ಮೆ ಸೋಲುಂಡಿದ್ದಾರೆ(Radhe Shyam disaster). ರಾಧೆ ಶ್ಯಾಮ್ ಸಿನಿಮಾ ನಿರೀಕ್ಷಿತ ಗೆಲವು ಕಾಣುವಲ್ಲಿ ವಿಫಲವಾಗಿದೆ.
ಸಾಹೋ ಮೂಲಕ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಪ್ರಭಾಸ್ ರಾಧೆ ಶ್ಯಾಮ್ ನಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ತೆರೆಮೇಲೆ ಬಂದಿದ್ದರು. ನಿರ್ದೇಶಕ ರಾಧ ಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಪೋಸ್ಟರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿತ್ತು. ಆದರೆ ರಾಧೆ ಶ್ಯಾಮ್ ಬಿಡುಗಡೆ ಬಳಿಕ ಭಾರಿ ನಿರಾಸೆ ಮೂಡಿಸಿತು. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಈ ಸಿನಿಮಾ ಬಿಡುಗಡೆ ಬಳಿಕ ಪ್ರಭಾಸ್ ಎಲ್ಲೂ ಕಾಣಿಸಿಕೊಂಡಿಲ್ಲ. ರಾಧೆ ಶ್ಯಾಮ್ ಬಿಡುಗಡೆ ಆಗುತ್ತಿದ್ದಂತೆ ಪ್ರಭಾಸ್ ವಿದೇಶಕ್ಕೆ ಹಾರಿದರು. ಕಾಲಿನ ಸರ್ಜರಿಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಇದೀಗ ವಾಪಸ್ ಆಗಿರುವ ಪ್ರಭಾಸ್ ಮೊದಲ ಬಾರಿಗೆ ರಾಧೆ ಶ್ಯಾಮ್ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಸೋಲಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಸಿನಿಮಾದ ಸೋಲು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ರಾಧೆ ಶ್ಯಾಮ್ ಹೆಚ್ಚು ಗಳಿಕೆ ಮಾಡದೆ ಇರಲು ಕಾರಣವೆಂದು ತಿಳಿಸಿದ ಬಾಹುಬಲಿ ಸ್ಟಾರ್, ಬಹುಶಃ ಕೋವಿಡ್ ಕಾರಣದಿಂದ ಅಥವಾ ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಏನಾದರೂ ಲೋಪ ಆಗಿರಬಹುದು. ಜನರಿಗೆ ತುಂಬಾ ಚೆನ್ನಾಗಿ ಗೊತ್ತಾಗಿರುತ್ತದೆ. ಈ ರೀತಿಯ ಸಿನಿಮಾಗಳಲ್ಲಿ ಅಭಿಮಾನಿಗಳನ್ನು ನನ್ನನ್ನು ನೋಡಲು ಇಷ್ಟಪಡದೆ ಇರಬಹುದು ಎಂದು ಪ್ರಭಾಸ್ ತಿಳಿಸಿದ್ದಾರೆ.
'ಆದಿಪುರುಷ್' ಕೆಲಸ ನಿಲ್ಲಿಸಿ ಮೊದಲು 'ಜೇಮ್ಸ್' ಚಿತ್ರ ಮುಗಿಸಿ; ಪ್ರಭಾಸ್
ರಾಧೆ ಶ್ಯಾಮ್ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಫ್ಯಾಮಿಲಿ ರಾಧೆ ಶ್ಯಾಮ್ ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ ಎಂದು ಭಾವಿಸಿದ್ದೀನಿ ಎಂದು ಪ್ರಭಾಸ್ ಹೇಳಿದ್ದಾರೆ. ಕೋವಿಡ್ ಬಳಿಕ ಜನ ಹೆಚ್ಚು ಟಿವಿ ವೀಕ್ಷಿಸುತ್ತಿದ್ದಾರೆ. ಒಟ್ಟಿಗೆ ಕುಳಿತು ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ ಎಂದು ಹೇಳಿದರು. ಇದೇ ಸಮಯದಲ್ಲಿ ದಕ್ಷಿಣದ ಸಿನಿಮಾಗಳ ಸಕ್ಸಸ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ, ಉತ್ತರ, ಪೂರ್ವ ಅಥವಾ ಪಶ್ಚಿಮದ ಸಿನಿಮಾ ಅಂತಲ್ಲ, ಜನರು ಕೆಲವು ಸಿನಿಮಾಗಳನ್ನು ಇಷ್ಟಡುತ್ತಾರೆ. ಅದು ಯಾವುದೇ ಭಾಗದ್ದಾದರು ಸರಿ ಎಂದು ಹೇಳಿದರು.
ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿರುವ ಪ್ರಭಾಸ್ ಗೆ ಮುಂದಿನ ಸಿನಿಮಾಗಳ ಆಯ್ಕೆ ದೊಡ್ಡ ಚಾಲೆಂಜಿಂಗ್ ಆಗಿತ್ತು. ಒತ್ತಡದಲ್ಲಿದ್ದ ಪ್ರಭಾಸ್ ಎರಡು ಸೋಲಿಗೆ ಕಾರಣರಾಗಿದ್ದಾರೆ. ಸಾಹೋ(Saaho) ಮತ್ತು ರಾಧೆ ಶ್ಯಾಮ್ ಎರಡೂ ಸಿನಿಮಾಗಳು ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿವೆ. ಉತ್ತರ ಭಾರತದಲ್ಲಿ ಪ್ರಭಾಸ್ ಗೆ ಭಾರಿ ಬೇಡಿಕೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೂ ರಾಧೆ ಶ್ಯಾಮ್ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿಲ್ಲ.
KGF 2 ಬಿಡುಗಡೆ ಬೆನ್ನಲ್ಲೇ ಪ್ರಶಾಂತ್ ನೀಲ್ 'ಸಲಾರ್' ಚಿತ್ರದಿಂದ ಬಂತು ಭರ್ಜರಿ ಸುದ್ದಿ
ಮಾರ್ಚ್ 11ರಂದು ತೆರೆಗೆ ಬಂದಿರುವ ರಾಧೆ ಶ್ಯಾಮ್ ಚಿತ್ರದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದಲ್ಲಿ ಭಾರಿ ಬೇಡಿಕೆಯ ನಟಿ ಪೂಜಾ ಮೊದಲ ಬಾರಿಗೆ ಪ್ರಭಾಸ್ ಜೊತೆ ತೆರೆಹಂಚಿಕೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾಗೆ ರಾಧೆ ಶ್ಯಾಮ್ ಸೋಲುಣಿಸಿದೆ. ಇನ್ನು ಪ್ರಭಾಸ್ ಬಳಿ ಅನೇಕ ಸಿನಿಮಾಗಳಿವೆ. ಸಲಾರ್, ಆದಿಪುರುಷ್ ಮತ್ತು ಇನ್ನು ಹೆಸರಿಡದ ಮತ್ತೊಂದು ಸಿನಿಮಾವಿದೆ.