'ಆದಿಪುರುಷ್' ಕೆಲಸ ನಿಲ್ಲಿಸಿ ಮೊದಲು 'ಜೇಮ್ಸ್' ಚಿತ್ರ ಮುಗಿಸಿ; ಪ್ರಭಾಸ್
ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ರೀ ರಿಲೀಸ್ ಆಗುತ್ತಿದೆ. ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದೆ. ತಂತ್ರಜ್ಞಾನದ ಮೂಲಕ ಪುನೀತ್ ಧ್ವನಿ ಮಿಕ್ಸ್ ಮಾಡಿ ಸಿನಿಮಾ ರೀ ರಿಲೀಸ್ ಮಾಡಲಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17ರಂದು ಅದ್ದೂರಿಯಾಗಿ ತೆರೆಗೆ ಬಂದಿತ್ತು. ಅಪ್ಪು ಹುಟ್ಟುಹಬ್ಬದ ದಿನವೇ ಬಿಡುಗಡೆಯಾದ ಜೇಮ್ಸ್ ಚಿತ್ರಕ್ಕೆ ಭರ್ಜರಿ ಸ್ವಾಗತ ಸಿಗಿತ್ತು. ಅಭಿಮಾನಿಗಳು ಸಿನಿಮಾ ನೋಡಿ ಹಾಡಿಹೊಗಳಿದ್ದರು. ಬಾಕ್ಸ್ ಆಫೀಸ್ ನಲ್ಲೂ ಅಪ್ಪು ಜೇಮ್ಸ್ ಸಿನಿಮಾ ಉತ್ತಮ ಕಮಾಯಿ ಮಾಡಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿ 25 ದಿಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಸಿನಿಮಾತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಜೇಮ್ಸ್ ಸಿನಿಮಾಗೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ.
ಅಂದಹಾಗೆ ಜೇಮ್ಸ್ ಸಿನಿಮಾ ಈಗಾಗಲೇ ಒಟಿಟಿಯಲ್ಲೂ ಬಿಡುಗಡೆಯಾಗಿದೆ. ಏಪ್ರಿಲ್ 14ರಂದು ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿ ಕೊಟ್ಟಿದೆ. ಈ ನಡುವೆ ಇದೀಗ ಸಿನಿಮಾ ಜೇಮ್ಸ್ ಸಿನಿಮಾತಂಡ ಮತ್ತೊಂದು ಸಾಹಸಕ್ಕೆ ಮುಂದಾಹಿದೆ. ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲೇ ಸಿನಿಮಾವನ್ನು ರೀ ರಿಲೀಸ್ ಮಾಡಲು ಸಿನಿಮಾತಂಡ ಮುಂದಾಗಿದೆ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿ ಮಿಕ್ಸ್ ಮಾಡಿ ಬಿಡುಗಡೆ ಮಾಡುತ್ತಿದೆ ಸಿನಿಮಾತಂಡ. ಇದೇ ಶುಕ್ರವಾರ ಏಪ್ರಿಲ್ 22ರಿಂದ ಜೇಮ್ಸ್ ಸಿನಿಮಾ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದೆ. ಅಂದಹಾಗೆ ಈ ಬಗ್ಗೆ ತಂತ್ರಜ್ಞರು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ವಾಯ್ಸನಲ್ಲೇ ಜೇಮ್ಸ್ ಚಿತ್ರ; ಪವರ್ ಧ್ವನಿಯನ್ನು ಮರು ಸೃಷ್ಟಿಸಿರುವ ಸೌಂಡ್ ಇಂಜಿನಿಯರ್!
ಜೇಮ್ಸ್ ಸಿನಿಮಾಗೆ ವಾಯ್ಸ್ ಮಿಕ್ಸಿಂಗ್ ಮಾಡಿದ ತಂತ್ರಜ್ಞರು ಪ್ರಭಾಸ್ ನಟನೆಯ ಆದಿಪುರಷ್ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಜೇಮ್ಸ್ ಸಿನಿಮಾದ ಕೆಲಸ ಮಾಡಿಕೊಡಲು ಕೇಳಿದಾಗ ಅವರು ಪ್ರಭಾಸ್ ಬಳಿ ಈ ವಿಚಾರವನ್ನು ಚರ್ಚಿಸಿದ್ದಾರೆ. ಕನ್ನಡದ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ವಾಯ್ಸ್ ಮಿಕ್ಸಿಂಗ್ ಕೆಲಸ ಬಂದಿದೆ ಎಂದು ತಂತ್ರಜ್ಞರು ಪ್ರಭಾಸ್ ಬಳಿ ಹೇಳಿದಾಗ ಬಾಹುಬಲಿ ಸ್ಟಾರ್ 'ಆದಿಪುರುಷ್ ಚಿತ್ರದ ಕೆಲಸ ನಿಲ್ಲಿಸಿ ಮೊದಲು ಪುನೀತ್ ಸಿನಿಮಾದ ಕೆಲಸ ಮುಗಿಸಿ' ಎಂದು ಹೇಳಿದ್ದರಂತೆ. ಈ ವಿಚಾರವನ್ನು ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಫೋಟೋದ ಎದುರು ಹೆಜ್ಜೆ ಹಾಕಿದ ಕರಗ!
ಕನ್ನಡ ಸಿನಿಮಾದಲ್ಲಿ ಅದರಲ್ಲೂ ಪುನೀತ್ ರಾಜ್ ಕುಮಾರ್ ಸಿನಿಮಾಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತುಂಬಾ ಸಂತಸವಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಬಹುನಿರೀಕ್ಷೆಯ ಜೇಮ್ಸ್ ಸಿನಿಮಾ ಬಿಡುಗಡೆಗೂ ಮೊದಲು ಅಪ್ಪು ಇಹಲೋಕ ತ್ಯಜಿಸಿದರು. ಚಿತ್ರೀಕರಣ ಮುಗಿಸಿದ್ದ ಪುನೀತ್ ಡಬ್ಬಿಂಗ್ ಬಾಕಿ ಇತ್ತು. ಅಪ್ಪು ಸಿನಿಮಾಗೆ ಸಹೋದರ ಶಿವರಾಜ್ ಕುಮಾರ್ ಧ್ವನಿ ನೀಡುವ ಮೂಲಕ ನೋವಿನಲ್ಲೂ ತಮ್ಮನ ಸಿನಿಮಾ ಬಿಡುಗಡೆಗೆ ಸಾಥ್ ನೀಡಿದ್ದರು. ಇದೀಗ ತಂತ್ರಜ್ಞಾನದ ಮೂಲಕ ಪುನೀತ್ ಧ್ವನಿಯಲ್ಲೇ ಬರ್ತಿದೆ ಜೇಮ್ಸ್. ಮತ್ತೊಮ್ಮೆ ಪ್ರೀತಿಯ ಅಪ್ಪುನನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಪ್ಪು ಧ್ವನಿಯಲ್ಲೇ ಬರ್ತಿರುವ ಜೇಮ್ಸ್ ಹೇಗಿರಲಿದೆ ಎಂದು ಏಪ್ರಿಲ್ 22ರಂದು ಗೊತ್ತಾಗಲಿದೆ.