Asianet Suvarna News Asianet Suvarna News

ಅವರು ಮಗುವಿನ ಹಾಗೆ, ಈಗ ದೊಡ್ಡ ಸ್ಟಾರ್; ಪ್ರಭಾಸ್ ಬಗ್ಗೆ ನಟಿ ನಯನತಾರಾ ಮಾತು

ದಕ್ಷಿಣ ಭಾರತದ ಖ್ಯಾತ ನಟಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ ಟಾಲಿವುಡ್ ಸ್ಟಾರ್  ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. 

Connect star Nayanthara about Jr NTR and Prabhas sgk
Author
First Published Dec 23, 2022, 5:34 PM IST

ದಕ್ಷಿಣ ಭಾರತದ ಖ್ಯಾತ ನಟಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ ಸದ್ಯ ಕನೆಕ್ಟ್ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಆರೈಕೆ ಜೊತೆಗೆ ನಯನತಾರಾ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಡಿಸೆಂಬರ್ 22ರಂದು ನಯನತಾರಾ ಕನೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅಂದಹಾಗೆ ನಯನತಾರಾ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ. ಆದರೆ ಅನೇಕ ವರ್ಷಗಳ ಬಳಿಕ ನಯನತಾರಾ ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಯನತಾರಾ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ವಿಶೇಷವಾಗಿ ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಜೂ ಎನ್ ಟಿ ಆರ್ ಬಗ್ಗೆ ಮಾತನಾಡಿದ್ದಾರೆ. 

ನಯನತಾರಾ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಜೂ.ಎನ್‌ಟಿಆರ್ ಮತ್ತು ಪ್ರಭಾಸ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡರು. ಪ್ರಭಾಸ್ ಬಗ್ಗೆ ಮಾತನಾಡಿದ ನಯನತಾರಾ, 'ಅವರು ತುಂಬಾ ಸ್ವೀಟ್. ಅವರು ಮಗುವಿನ ಹಾಗೆ. ಅವನು ಇನ್ನೂ ಮಗುವಿನಂತೆ ಇದ್ದಾನೋ ಎಂದು ನನಗೆ ಇವಗ ಗೊತ್ತಿಲ್ಲ. ನಾನು ಅವರೊಂದಿಗೆ ಕೆಲಸ ಮಾಡುವಾಗ ಮಗುವಿನ ಮನಸ್ಸು ಕಂಡುಕೊಂಡೆ. ಯಾವಾಗಲೂ ಜೋಕ್ ಮಾಡುತ್ತಿದ್ದರು. ಅವರು ಶೂಟಿಂಗ್ ಸೆಟ್‌ನ ಸುತ್ತಲೂ ಮಗುವಿನ ಹಾಗೆ ಜಿಗಿಯುತ್ತಿದ್ದರು. ಆದರೆ ಈಗ ಅವರು ದೊಡ್ಡ ಸ್ಟಾರ್ ಆಗಿದ್ದಾರೆ. ಅವರನ್ನು ಈ ರೀತಿ ನೋಡಲು ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದರು. 

ಜೂ. ಎನ್ ಟಿ ಆರ್ ಬಗ್ಗೆ ಮಾತನಾಡಿದ ನಯನತಾರಾ, ಶೂಟಿಂಗ್ ಅನುಭವ ಬಿಚ್ಚಿಟ್ಟರು. 'ಶೂಟಿಂಗ್‌ನಲ್ಲಿ ನಾನು ಮೇಕಪ್ ಮಾಡಿಕೊಳ್ಳುತ್ತಿದ್ದೆ. ಅವರು ನನ್ನನ್ನೇ ನೋಡುತ್ತಿದ್ದರು. ನಾನು ಯಾಕೆ ಹೀಗೆ ನೋಡುತ್ತಿದ್ದೀರಿ ಎಂದು ಕೇಳಿದೆ. ಯಾಕೆ ಹೀಗೆ ರೆಡಿ ಆಗುತ್ತಿದ್ದೀರಿ ಅಂತ ಕೇಳಿದ್ರು. ಶೂಟಿಂಗ್‌ಗೆ ಎಂದು ಹೇಳಿದೆ. ಅವರು ತಮಾಷೆಯಾಗಿ ನಿಮ್ಮನ್ನು ಯಾರು ನೋಡಲ್ಲ ಎಲ್ಲರೂ ನನ್ನನ್ನೂ ನೋಡುತ್ತಾರೆ' ಎಂದು ಹೇಳಿದರು. ಜೂ ಎನ್ ಟಿ ಆರ್ ಡಾನ್ಸ್ ಮಾಡುವ ರೀತಿ ತುಂಬಾ ಇಷ್ಟ ಎಂದು ನಯನತಾರಾ ಹೇಳಿದರು.   

ಮದ್ವೆ ನನ್ನ ಜೀವನ ಬದಲಾಯಿಸಿಲ್ಲ, ಕೆಲಸ ಮಾಡಬಾರದು ಅನ್ನೋಕೆ ನೀವ್ಯಾರು?: ನಯನತಾರಾ

ನಯನತಾರಾ ಅವರಿಗೆ ಈ ವರ್ಷ ತುಂಬಾ ವಿಶೇಷವಾದ ವರ್ಷ. ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದರು. ಬಳಿಕ ಇಬ್ಬರು ಮುದ್ದಾದ ಮಕ್ಕಳನ್ನು ಸ್ವಾಗತಿಸಿದರು. ನಯನತಾರಾ ಮತ್ತು ವಿಘ್ನೇಶ್ ಶಿವನ್  ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಮೇಕಪ್ ಹಾಕೋದನ್ನೇ ಬಿಟ್ಟಿದ್ದಾರೆ ನಟಿ ನಯನತಾರಾ: ಕಾರಣ ರಿವೀಲ್..!

ಅಕ್ಟೋಬರ್ 9ಕ್ಕೆ ಅವಳಿ ಮಕ್ಕಳ ಜನನ

ಅಕ್ಟೋಬರ್ 9ಕ್ಕೆ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದರು. ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿರುವ ಶೀವನ್‌, ‘ನಯನ್‌ ಮತ್ತು ನಾನು ಅಮ್ಮ-ಅಪ್ಪ ಆಗಿದ್ದೇವೆ. ನಮಗೆ ಅವಳಿ ಮಕ್ಕಳ ಜನನವಾಗಿದೆ. ಜೀವನ ಹೆಚ್ಚು ಪ್ರಕಾಶಮಾನವಾಗಿ ಹಾಗೂ ಸುಂದರವಾಗಿ ಕಾಣುತಿದೆ. ಇದಕ್ಕೆಲ್ಲ ಹಿರಿಯರ ಆಶೀರ್ವಾದ ಕಾರಣ’ ಎಂದಿದ್ದಾರೆ. ಇದರ ಜತೆಗೆ ಇಬ್ಬರೂ ಮಕ್ಕಳ ಕಾಲಿಗೆ ಮುತ್ತಿಕ್ಕುತ್ತಿರುವ ಚಿತ್ರ ಹಾಕಿಕೊಂಡಿದ್ದರು. 
   

Follow Us:
Download App:
  • android
  • ios