ನಟ ಪ್ರಭಾಸ್ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನನ್ನ ಮದುವೆ ಎಂದು ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮದುವೆ ವಿಚಾರ ಆಗಾಗ ಹೇಗೆ ಸದಾ ಸುದ್ದಿಯಲ್ಲಿರೋ ಹಾಗೆ ಟಾಲಿವುಡ್‌ನಲ್ಲಿ ಪ್ರಭಾಸ್ ಮದುವೆ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಡೇಟಿಂಗ್, ಪ್ರೀತಿ ಅಂತ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಪ್ರಭಾಸ್ ಮದುವೆ ವಿಚಾರ ಸಖತ್ ವೈರಲ್ ಆಗಿತ್ತು. ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಜೊತೆ ಡೇಟಿಂಗ್ ನಲ್ಲಿದ್ದಾರೆ, ಆದಿಪುರುಷ್ ಸಿನಿಮಾ ರಿಲೀಸ್ ಬಳಿಕ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗರುವ ಪ್ರಭಾಸ್ ಇತ್ತೀಚಿಗೀಷ್ಟೆ ತೆಲುಗು ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK2 ಶೋನಲ್ಲಿ ಭಾಗಿಯಾಗಿದ್ದರು.
ಶೋನಲ್ಲಿ ನಂದಮೂರಿ ಬಾಲಕೃಷ್ಣ, ಪ್ರಭಾಸ್‌ಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರು. ಯಾವಾಗ ಸೆಟಲ್ ಆಗ್ತೀರಿ ಎಂದು ಕೇಳಿದರು. ಪ್ರಭಾಸ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ಬಾಲಕೃಷ್ಣ ಪ್ರಶ್ನೆ ಕೇಳುತ್ತಿದ್ದಂತೆ, 'ಸಲ್ಮಾನ್ ಖಾನ್ ಮದುವೆಯಾದ ಬಳಿಕ' ಎಂದು ಹೇಳಿದರು. ಅಂದಹಾಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೂ ಇದೇ ಪ್ರಶ್ನೆ ಎದುರಾಗುತ್ತಲೇ ಇರುತ್ತೆ. ಸಲ್ಮಾನ್ ಏನಾದರೊಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಪ್ರಭಾಸ್ ಕೂಡ ಮದುವೆ ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ.
ಕೃತಿ ಜೊತೆ ಪ್ರಭಾಸ್ ಡೇಟಿಂಗ್ ವದಂತಿ
ಪ್ರಭಾಸ್ ಮತ್ತು ಕೃತಿ ಇಬ್ಬರೂ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದೇ ಆದಿಪುರುಷ್ ಸಿನಿಮಾ ಸೆಟ್‌ನಲ್ಲಿ ಎಂದು ಹೇಳಲಾಗುತ್ತಿದೆ. ಟಾಲಿವುಡ್ ಸ್ಟಾರ್ ಪ್ರಭಾಸ್ ಶೂಟಿಂಗ್ ಸೆಟ್‌ನಲ್ಲಿಯೇ ಕೃತಿಗೆ ಲವ್ ಪ್ರಪೋಸ್ ಮಾಡಿದ್ದರು ಎನ್ನಲಾಗಿದೆ. ಪ್ರಭಾಸ್ ಪ್ರಪೋಸ್‌ಗೆ ಕೃತಿ ಶಾಕ್ ಆದರೂ ನಂತರ ಗ್ರೀನ್ ಸಿಗ್ನಲ್ ನೀಡಿದರು ಎನ್ನಲಾಗಿದೆ. ಅಂದಹಾಗೆ ಪ್ರಭಾಸ್ ಮತ್ತು ಕೃತಿ ಇಬ್ಬರೂ ಆದಿಪುರುಷ್ ಸಿನಿಮಾ ರಿಲೀಸ್ ಆದಮೇಲೆ ಮದುವೆಯಾಗ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಆದಿಪುರುಷ್ ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅಂದರೆ ಇಬ್ಬರೂ ಮುಂದಿನ ವರ್ಷದ ಕೊನೆಯಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗಿತ್ತು.
Kriti Prabhas ಬೇರೊಬ್ಬರು ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ಇದು ನನ್ನ ಕ್ಲಾರಿಟಿ: ಕೃತಿ ಸನೊನ್
ಕೃತಿ ರಿಯಾಕ್ಷನ್
'ಇದು ಪ್ರೀತಿ ಅಲ್ಲ, ನಮ್ಮ ಬೇಡಿಯಾ ರಿಯಾಲಿಟಿ ಶೋ ಸಮಯದಲ್ಲಿ ಕೊಂಚ ವೈಲ್ಡ್ ಆಯ್ತು. ತಮಾಷೆ ಕ್ಷಣಗಳು ಇಷ್ಟೊಂದು ದೊಡ್ಡ ಗಾಳಿ ಮಾತುಗಳಿಗೆ ಕಾರಣವಾಯ್ತು. ಯಾವುದೋ ಒಂದು ಸುದ್ದಿ ವಾಹಿನಿ ನನ್ನ ಮದುವೆ ದಿನಾಂಕ ಅನೌನ್ಸ್ ಮಾಡುವ ಮುನ್ನ ನಾನೇ ಕ್ಲಾರಿಟಿ ಕೊಡ್ತೀನಿ. ಹರಿದಾಡುತ್ತಿರುವ ಸುದ್ದಿಗೆ ಆಧಾರ ರಹಿತವಾಗಿದೆ. ಎಲ್ಲವೂ ಫೇಕ್' ಎಂದು ಪ್ರತಿಕ್ರಿಯೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದರು ಕೃತಿ.
ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಆ ಸಿನಿಮಾಗಳು ಸಹ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಗಿವೆ. ಹಾಗಾಗಿ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
'ಆದಿಪುರುಷ್' ಸೆಟ್‌ನಲ್ಲಿ ಕೃತಿಗೆ ಪ್ರಪೋಸ್ ಮಾಡಿದ್ರಾ ಪ್ರಭಾಸ್? 'ಬಾಹುಬಲಿ' ಸ್ಟಾರ್ ಲವ್ ಸ್ಟೋರಿ ಫುಲ್ ವೈರಲ್
ಸದ್ಯ ಪ್ರಭಾಸ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಇನ್ನೂ ನಾಗ್ ಅಶ್ವಿನ್ ಅವರ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ.
