Asianet Suvarna News Asianet Suvarna News

ಪ್ರಭಾಸ್ ಮದುವೆಗೆ ಭಾರೀ ಸಮಸ್ಯೆ, ಅನುಷ್ಕಾ ಶೆಟ್ಟಿ ಬಗ್ಗೆ ನಮಗೇನೂ ತೊಂದರೆಯಿಲ್ಲ; ಪ್ರಭಾಸ್ ಫ್ಯಾಮಿಲಿ

ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಚಿತ್ರಗಳು ಇಡೀ ಭಾರತದ ಲೆವಲ್‌ಗೆ ತುಂಬಾ ನಿರೀಕ್ಷೆ ಹುಟ್ಟಿಸಿದ್ದವು. ಆದರೆ ಈ ಮೂರರಲ್ಲಿ ಯಾವ ಸಿನಿಮಾ ಕೂಡ ನಿರೀಕ್ಷೆ ತಲುಪಲು ವಿಫಲವಾಗಿದೆ. ಈ ಕಾರಣಕ್ಕೆ ಪ್ರಭಾಸ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನದ ಮುಂಬರುವ 'ಸಲಾರ್' ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. 

Prabhas not dating Anushka Shetty as rumours are spreading srb
Author
First Published Nov 3, 2023, 11:37 AM IST | Last Updated Nov 3, 2023, 12:30 PM IST

ಬಾಹುಬಲಿ ಖ್ಯಾತಿಯ ಪ್ಯಾನ್ ಇಂಡಿಯಾ ನಟ ಪ್ರಭಾಸ್ ಮದುವೆ ಬಗ್ಗೆ ಆಗಾಗ ಗಾಸಿಪ್ ಹಬ್ಬುತ್ತಲೇ ಇದೆ. ಈ ಸುದ್ದಿ ಯಾವಾತ್ತೂ ನಟಿ ಅನುಷ್ಕಾ ಸುತ್ತ ಸುತ್ತುತ್ತಲೇ ಇರುತ್ತದೆ. ಅದೆಷ್ಟೋ ಬಾರಿ ಅನುಷ್ಕಾ ಹಾಗೂ ಪ್ರಭಾಸ್ ತಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ, ನಾವಿಬ್ಬರೂ ಮದುವೆಯಾಗಲು ಪ್ಲಾನ್ ಮಾಡಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಆದರೂ ಈ ಗಾಸಿಪ್ ಮತ್ತೆ ಮತ್ತೆ ಹರಿದಾಡುತ್ತಲೇ ಇರುತ್ತದೆ. ಕಾರಣ, ಅವರಿಬ್ಬರೂ ಗುಡ್ ಫ್ರಂಡ್ಸ್. 

ಪ್ರಭಾಸ್ ಮತ್ತು ಅನುಷ್ಕಾ ತುಂಬಾ ಕ್ಲೋಸ್ ಫ್ರಂಡ್ಸ್, ಅವರಿಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಅವರಿಬ್ಬರ ತೆರೆಯ ಮೇಲಿನ ಕೆಮೆಸ್ಟ್ರಿ ಕೂಡ ಸೂಪರ್ ಎಂಬಂತಿದೆ. ಆದರೆ, ನಿಜ ಜೀವನದಲ್ಲಿ ಅವರಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು. ಈ ಸಂಗತಿ ಅವರಿಬ್ಬರ ಕುಟುಂಬಕ್ಕೆ ಸಹ ಗೊತ್ತಿದೆ. ಈ ಕಾರಣಕ್ಕೆ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಬಗ್ಗೆ ಅವರ ಕುಟುಂಬದ ಸದಸ್ಯರು ಮಾತನಾಡುವುದಿಲ್ಲವಂತೆ. ಆದರೆ, ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಈ ಗಾಸಿಪ್ ನಿಲ್ಲುತ್ತಿಲ್ಲ. 

ರಾಣೆಬೆನ್ನೂರಿನಲ್ಲಿ 'ಗರಡಿ' ಜನಜಾತ್ರೆ, ಚಾಲೆಂಜಿಂಗ್ ಸ್ಟಾರ್ ನೋಡಲು ಜನಸಾಗರ; ದರ್ಶನ್ ಹೇಳಿದ್ದೆನು?

ಪ್ರಭಾಸ್ ಮದುವೆಯಾಗದಿರಲು ಕೆಲವು ಸಮಸ್ಯೆಗಳಿವೆ ಎಂದು ವರದಿ ಹೇಳುತ್ತಿದೆ. ಅವರಿಗೆ ಈಗ 43 ವಯಸ್ಸು. ಆದರೆ, ಸದಾ ಸಿನಿಮಾ ಬಗ್ಗೆಯೇ ಯೋಚಿಸುತ್ತಿರುವ, ಕಾಲ್‌ಶೀಟ್ ಹಂಚುತ್ತಿರುವ ಪ್ರಭಾಸ್, ಸೋಷಿಯಲ್ ಅಥವಾ ಕುಟುಂಬ ಜೀವನಕ್ಕೆ ಸಮಯ ಕೊಡಲು ಸಾಧ್ಯವೇ ಆಗುತ್ತಿಲ್ಲವಂತೆ. ಈ ಕಾರಣಕ್ಕೆ ಅವರು ಮದುವೆ, ಸಂಸಾರದ ಬಗ್ಗೆ ಯೋಚಿಸಲು ಅಸಾಧ್ಯ ಎನ್ನಲಾಗಿದೆ. ಪ್ರಭಾಸ್ ಕುಟುಂಬ ಇತ್ತೀಚೆಗೆ ಅವರ ಮದುವೆ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದೆ. 

ಆದರೆ, ಅವರ ಸಿನಿಮಾ ಡೇಟ್ಸ್ ಮಧ್ಯೆ ಎಮಗೇಜ್‌ಮೆಂಟ್, ಮದುವೆ ಅದಕ್ಕೆಲ್ಲಾ ಸಮಯವೇ ಸಿಗುತ್ತಿಲ್ಲ ಎನ್ನಲಾಗಿದೆ. ಆದರೆ, ಪ್ರಭಾಸ್ ಅನುಷ್ಕಾರನ್ನು ಮದುವೆ ಆಗುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ಪ್ರಭಾಸ್ ಫ್ಯಾಮಿಲಿ ನಿರ್ಧಾರದ ಹಂತದಲ್ಲೇ ಹೇಳಿದೆ ಎಂದು ವರದಿ ತಿಳಿಸಿದೆ. ಸದ್ಯ ಪ್ರಭಾಸ್ ಅವರಿಗೆ ತುರ್ತಾಗಿ ಒಂದು ಸಿನಿಮಾ ಸೂಪರ್ ಹಿಟ್ ಆಗಬೇಕಿದೆ. ಏಕೆಂದರೆ, ಬಾಹುಬಲಿ ಬಳಿಕ ಸಾಲುಸಾಲಾಗಿ ಪ್ರಭಾಸ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿವೆ. 

ಕಮಲ್ ಹಾಸನ್‌ಗೆ ನಾನು 35 ವರ್ಷ ಸಿನಿಮಾವನ್ನೇ ಮಾಡಿಲ್ಲ; ಗುಟ್ಟು ಬಿಚ್ಚಿಟ್ಟ ಲೆಜೆಂಡ್ ಮಣಿರತ್ನಂ

ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಚಿತ್ರಗಳು ಇಡೀ ಭಾರತದ ಲೆವಲ್‌ಗೆ ತುಂಬಾ ನಿರೀಕ್ಷೆ ಹುಟ್ಟಿಸಿದ್ದವು. ಆದರೆ ಈ ಮೂರರಲ್ಲಿ ಯಾವ ಸಿನಿಮಾ ಕೂಡ ನಿರೀಕ್ಷೆ ತಲುಪಲು ವಿಫಲವಾಗಿದೆ. ಈ ಕಾರಣಕ್ಕೆ ಪ್ರಭಾಸ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನದ ಮುಂಬರುವ 'ಸಲಾರ್' ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಅಂದಹಾಗೆ, ಸಲಾರ್ 22 ಡಿಸೆಂಬರ್ 2023 ರಂದು ಬಿಡುಗಡೆಯಾಗಲಿದೆ. 
 

Latest Videos
Follow Us:
Download App:
  • android
  • ios