ರಾಣೆಬೆನ್ನೂರಿನಲ್ಲಿ 'ಗರಡಿ' ಜನಜಾತ್ರೆ, ಚಾಲೆಂಜಿಂಗ್ ಸ್ಟಾರ್ ನೋಡಲು ಜನಸಾಗರ; ದರ್ಶನ್ ಹೇಳಿದ್ದೆನು?
ನಿನ್ನೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಗರಡಿ ಸಿನಿಮಾದ ಇಡೀ ತಂಡ ಭಾಗವಹಿಸಿತ್ತು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ 'ಜನಸಾಗರ' ಎಂಬಂತಾಗಿತ್ತು. ಬಹಳಷ್ಟು ಮನರಂಜನಾ ಕಾರ್ಯಕ್ರಮಗಳೂ ನಡೆದವು. ರಾಣೆಬೆನ್ನೂರು ಹಾಗೂ ಅಕ್ಕಪಕ್ಕದ ಊರಿನ ಜನರು ಚಿತ್ರತಂಡವನ್ನು ನೋಡಿ ಖುಷಿ ಪಟ್ಟರು.
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದ ಟ್ರೈಲರ್ ಲಾಂಚ್ ಅದ್ದೂರಿ ಕಾರ್ಯಕ್ರಮ ರಾಣೆ ಬೆನ್ನೂರಿನಲ್ಲಿ ನಿನ್ನೆ ನಡೆಯಿತು. ನಟ ದರ್ಶನ್ ಗರಡಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ ಈ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಅದ್ದೂರಿ ಈವೆಂಟ್‌ಅನ್ನು ರಾಣೆಬೆನ್ನೂರಿನಲ್ಲಿ ಅದ್ದೂರಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಗರಡಿ ಚಿತ್ರದ ನಾಯಕನಟ ಯಶಸ್ ಸೂರ್ಯ ಮತ್ತು ನಾಯಕಿ ಸೋನಲ್ ಮಂಥೆರೋ ಹಾಜರಿದ್ದರು. ಈ ಚಿತ್ರದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ದೇಸಿ ಕ್ರಿಡೆ ಎಂದೇ ಪ್ರಸಿದ್ಧಿ ಪಡೆದಿದೆ. ಬಿಸಿ ಪಾಟೀಲ್ ನಿರ್ಮಾಣದ ಈ ಚಿತ್ರವು ಇದೇ ತಿಂಗಳ 10 ರಂದು (10 ನವೆಂಬರ್ 2023) ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ನಟ ದರ್ಶನ್ ನಾಯಕನ ಅಣ್ಣನ ಪಾತ್ರದಲ್ಲಿ ಅತಿಥಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ಚಿತ್ರಕ್ಕೆ ಭಾರೀ ಹೈಪ್ ದೊರಕಿದೆ. ಯೋಗರಾಜ್ ಭಟ್ ನಿರ್ದೇಶನದ ಬೇರೆ ಚಿತ್ರಗಳಿಗೆ ಹೋಲಿಸಿದರೆ ಇದು ಖಂಡಿತವಾಗಿಯೂ ಡಿಫ್ರಂಟ್ ಆಗಿದೆ ಎನ್ನಬಹುದು.
ಕಾಜೋಲ್ ಮುಂಚೆ ಅಜಯ್ ದೇವಗನ್ ಲವ್ ಮಾಡಿದ್ದು ಬೇರೆ ಸ್ಟಾರ್ ನಟಿ, ಅದಕ್ಕೂ ಮೊದಲು ಇನ್ನೊಬ್ಬರು!
ನಿನ್ನೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಗರಡಿ ಸಿನಿಮಾದ ಇಡೀ ತಂಡ ಭಾಗವಹಿಸಿತ್ತು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ 'ಜನಸಾಗರ' ಎಂಬಂತಾಗಿತ್ತು. ಬಹಳಷ್ಟು ಮನರಂಜನಾ ಕಾರ್ಯಕ್ರಮಗಳೂ ನಡೆದವು. ರಾಣೆಬೆನ್ನೂರು ಹಾಗೂ ಅಕ್ಕಪಕ್ಕದ ಊರಿನ ಜನರು ಚಿತ್ರತಂಡವನ್ನು ನೋಡಿ ಖುಷಿ ಪಟ್ಟರು.
ಕಮಲ್ ಹಾಸನ್‌ಗೆ ನಾನು 35 ವರ್ಷ ಸಿನಿಮಾವನ್ನೇ ಮಾಡಿಲ್ಲ; ಗುಟ್ಟು ಬಿಚ್ಚಿಟ್ಟ ಲೆಜೆಂಡ್ ಮಣಿರತ್ನಂ
ಗರಡಿ ಚಿತ್ರದ ಬಗ್ಗೆ ನಾಯಕ ನಟ ಯಶಸ್ ಸೂರ್ಯ ತುಂಬಾ ಭರವಸೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಾಯಕನಟ ಎಂದು ಗುರುತಿಸಿಕೊಂಡಿರುವ ಅವರು ಈ ಚಿತ್ರದ ಮೂಲಕ ಸ್ಟಾರ್ ನಟ ಎನಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಚಿತ್ರದ ಸಾಂಗ್ಸ್ ಹಾಗು ಬಿಡುಗಡೆ ಕಂಡಿರುವ ಟ್ರೈಲರ್‌ಗಳನ್ನು ವೀಕ್ಷಿಸಿದರೆ ಈ ಚಿತ್ರವು ಆಕ್ಷನ್ ಆಧಾರಿತ ಎನ್ನಬಹುದು. ಕಟ್ಟುಮಸ್ತಾದ ಬಾಡಿ ಬೆಳೆಸಿಕೊಂಡು ಕುಸ್ತಿ ಪಟುವಾಗಿ ಗರಡಿ ಚಿತ್ರದಲ್ಲಿ ನಟ ಸೂರ್ಯ ಕಾಣಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಗರಡಿ ಥಿಯೇಟರ್‌ನಲ್ಲಿ ಅಬ್ಬರಿಸಲಿದೆ.