Asianet Suvarna News Asianet Suvarna News

ಶಾರುಖ್ ಖಾನ್​​ಗೆ ಡಬಲ್​ ಶಾಕ್​ ನೀಡಿದ ಪ್ರಭಾಸ್​! ಮುಂಗಡ ಬುಕಿಂಗ್​ನಲ್ಲೂ ದಾಖಲೆ, ಕಟೌಟ್​ನಲ್ಲೂ ಹೊಸ ರೆಕಾರ್ಡ್​

ಪ್ರಭಾಸ್​ ಅಭಿನಯದ ಸಲಾರ್​ ಚಿತ್ರವು ಶಾರುಖ್​ ಖಾನ್​ ಅವರ ಡಂಕಿ ಚಿತ್ರದ ರೆಕಾರ್ಡ್​ ಬ್ರೇಕ್​ ಮಾಡಿದೆ. ಮುಂಗಡ ಬುಕಿಂಗ್​ನಲ್ಲಿಯೂ ಮುನ್ನಡೆ ಸಾಧಿಸಿದ್ದು, ಭರ್ಜರಿ ಕಟೌಟ್​ನಲ್ಲಿಯೂ ದಾಖಲೆ ಬರೆದಿದೆ. 
 

Prabhas gets 120 feet cutout in mumbai for salaar and  record breaking in ticket booking suc
Author
First Published Dec 18, 2023, 5:04 PM IST

ಪ್ರಭಾಸ್​ ಅವರ ಬಹು ನಿರೀಕ್ಷಿತ ಸಲಾರ್​ ಚಿತ್ರವು ಇದೇ 22ರಂದು ಬಿಡುಗಡೆಯಾಗಲಿದ್ದರೆ, ಶಾರುಖ್​ ಅವರು ಹ್ಯಾಟ್ರಿಕ್​ ಹೀರೋ ಆಗಲು ಹಾತೊರೆಯುತ್ತಿರುವ ಡಂಕಿ ಚಿತ್ರವು 21ರಂದು ರಿಲೀಸ್​ ಆಗಲಿದೆ. ಇಲ್ಲಿಯವರೆಗೆ ಶಾರುಖ್​ ಖಾನ್​ ಅವರ ಡಂಕಿ ಚಿತ್ರವು ಮೊದಲ ದಿನದ ಮುಂಗಡ ಟಿಕೆಟ್​ ಬುಕಿಂಗ್​ನಲ್ಲಿ ದಾಖಲೆ ಬರೆದಿದೆ ಎಂದೇ ಹೇಳಲಾಗಿತ್ತು. ಆದರೆ ಪ್ರಭಾಸ್​ ಅವರು ಶಾರುಖ್​ಗೆ ಶಾಕ್​ ನೀಡಿದ್ದಾರೆ. ಇದಕ್ಕೆ ಕಾರಣ, ಸಲಾರ್​ ಚಿತ್ರದ ಮುಂಗಡ ಟಿಕೆಟ್​ ಬುಕಿಂಗ್​, ಡಂಕಿಗಿಂತಲೂ ಹೆಚ್ಚಾಗಿದೆ ಎಂದು ವರದಿಯಾಗಿದೆ. Sacnilk ಪ್ರಕಾರ, Dunki ಸುಮಾರು 1,44,830 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಅದರ ಒಟ್ಟು ಮಾರಾಟವು 4.46 ಕೋಟಿ ರೂಪಾಯಿಗಳನ್ನು ತಲುಪಿದೆ. ಆದರೆ ಸಲಾರ್‌  ಚಿತ್ರದ ಟಿಕೆಟ್​ ಒಟ್ಟೂ  1,53, 705 ಮಾರಾಟವಾಗಿದ್ದು,  ಡಂಕಿಗಿಂತಲೂ  8875 ಟಿಕೆಟ್‌ ಹೆಚ್ಚು ಮಾರಾಟವಾಗಿದೆ. ಆದರೆ ಡಂಕಿ ಟಿಕೆಟ್​ ದರದಲ್ಲಿ ಹೆಚ್ಚಳ ಇರುವ ಕಾರಣ, ಸಲಾರ್​ ಚಿತ್ರವು 3.58 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಡಂಕಿಗಿಂತಲೂ  88 ಲಕ್ಷ ರೂಪಾಯಿ ಕಡಿಮೆ ಸಂಗ್ರಹವಾಗಿದೆ.  

ಇಂದು ಸಲಾರ್​ ಪಾರ್ಟ್​ -1ರ ಎರಡನೆಯ ಟ್ರೇಲರ್​ ರಿಲೀಸ್​ ಆಗಿದ್ದು, ಫ್ಯಾನ್ಸ್​ ಇನ್ನಷ್ಟು ಉತ್ಸಾಹಭರಿತರಾಗಿದ್ದಾರೆ. ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದ  ಮೊದಲ ಟ್ರೇಲರ್ ಕೆಲ ದಿನಗಳ ಹಿಂದೆ ರಿಲೀಸ್​ ಆಗಿತ್ತು. ಅದರಲ್ಲಿ ಪ್ರಭಾಸ್‌ ಮತ್ತು ಪ್ರಥ್ವಿರಾಜ್‌ ಅವರ ಸ್ನೇಹದ ಕಥೆ ತೋರಿಸಿದ್ದರೆ, ಇದೀಗ ಬದ್ಧ ವೈರಿಯಾಗಿರುವುದನ್ನು ತೋರಿಸಲಾಗಿದೆ. ಇದರಿಂದಾಗಿ ಕಥೆ  ಏನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿಕ್ಕವನಿದ್ದಾಗ ನಿನಗೊಂದು ಕಥೆ ಹೇಳುತ್ತಿದ್ದೆ, ಪರ್ಶಿಯನ್‌ ಸಾಮ್ರಾಜ್ಯದಲ್ಲಿ ಸುಲ್ತಾನ್‌ ಎಷ್ಟೇ ದೊಡ್ಡ ಸಮಸ್ಯೆ ಬಂದರೂ ತನ್ನ ಸೈನಕ್ಕೂ ಹೇಳದೆ ಒಬ್ಬನಿಗೆ ಹೇಳುತ್ತಿದ್ದ ಎಂಬ ಹಿನ್ನೆಲೆ ಧ್ವನಿಯಲ್ಲಿ ಹಲವು ಹೋರಾಟ, ಕಾದಾಟ  ಕಣ್ಣೀರಿನ ದೃಶ್ಯಗಳನ್ನು ಟ್ರೇಲರ್​ನಲ್ಲಿ  ತೋರಿಸಲಾಗಿದೆ.

ಮುಂಗಡ ಬುಕಿಂಗ್​ನಲ್ಲಿ ದಾಖಲೆ ಬರೆದ ಶಾರುಖ್​ ಡಂಕಿ! ಚಿತ್ರಕ್ಕೆ ನಟ ಪಡೆದ ಸಂಭಾವನೆಯೆಷ್ಟು?

 ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಎ ಸರ್ಟಿಫಿಕೇಟ್‌ ದೊರಕಿದೆ. ಈ ಸಿನಿಮಾ 2 ಗಂಟೆ 55 ನಿಮಿಷ ಅವಧಿಯದ್ದಾಗಿದೆ. ಇದರ ನಡುವೆಯೇ ಸಲಾರ್​ ಚಿತ್ರ ಇನ್ನೊಂದು ದಾಖಲೆ ಬರೆದಿದೆ. ಅದೇನೆಂದರೆ, ಚಿತ್ರದ ನಾಯಕ ಪ್ರಭಾಸ್‌ ಅವರ ಬೃಹತ್‌ ಕಟೌಟ್‌ ಮುಂಬೈನಲ್ಲಿ ನಿಲ್ಲಿಸಲಾಗಿದೆ. ಇದು ಇದುವರೆಗಿನ ಅತಿ ದೊಡ್ಡ ಕಟೌಟ್​ ಎನ್ನಲಾಗಿದೆ. ಅಂದಹಾಗೆ ಈ ಕಟೌಟ್​ 120 ಅಡಿ ಎತ್ತರವಾಗಿದೆ. ಇದರ  ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿದೆ. ಮುಂಬೈ ಹೃದಯ ಭಾಗದಲ್ಲಿ ಈ ಕಟೌಟ್​ ನಿರ್ಮಿಸಲಾಗಿದೆ. 
 
 ಅಂದಹಾಗೆ, ಇದು ಆಕ್ಷನ್‌ ಇರುವ ಸಿನಿಮಾ ಆಗಿದೆ.  ಈ ಚಿತ್ರದಲ್ಲಿ ತೆಲುಗು ಮೂಲದ ಮಲಯಾಳಂ ನಟ ಪೃಥ್ವಿರಾಜ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಂತಾರ, ಕೆಜಿಎಫ್‌ ಮುಂತಾದ ಭರ್ಜರಿ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್‌ನ  ಸಲಾರ್‌ ಸಿನಿಮಾದ ಕುರಿತು ತುಸು ಹೆಚ್ಚೇ ನಿರೀಕ್ಷೆ ಇದೆ.  

ಸಾಯಿಬಾಬಾ... ನನ್ನ ಕೋರಿಕೆ ಈಡೇರಿಸು... ಶಿರಡಿಯಲ್ಲಿ ಪುತ್ರಿ ಜೊತೆ ಶಾರುಖ್​ ವಿಶೇಷ ಪೂಜೆ!

Follow Us:
Download App:
  • android
  • ios