Asianet Suvarna News Asianet Suvarna News

ಸದ್ದಿಲ್ಲದೇ ನಡೆದೇ ಬಿಡ್ತಾ ಪ್ರಭಾಸ್​-ಅನುಷ್ಕಾ ಮದ್ವೆ? ಮಗು ಯಾರದ್ದು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

ಡೇಟಿಂಗ್​ ವದಂತಿಯ ನಡುವೆಯೇ ಸದ್ದಿಲ್ಲದೇ ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಮದ್ವೆ ನಡೆದೇ ಬಿಟ್ಟಿದೆ ಎನ್ನುವ ಫೋಟೋಗಳು ವೈರಲ್​ ಆಗ್ತಿವೆ. ಏನಿದರ ಅಸಲಿಯತ್ತು?
 

Prabhas Anushka Once again the fans expressed their desire to witness AI suc
Author
First Published Oct 7, 2023, 3:46 PM IST

ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರು ಮಾಧ್ಯಮಗಳಿಗೆ ಎದುರಾದಾಗೊಮ್ಮೆ ಮದುವೆ  ವಿಚಾರ ಪ್ರಸ್ತಾಪವಾಗುತ್ತದೆ. ಹಿಂದೊಮ್ಮೆ  ತಿರುಪತಿಯಲ್ಲಿ  ನಡೆದ ಆದಿ ಪುರುಷ ಸಿನಿಮಾದ ಪ್ರಿ ರಿಲೀಸ್ ಇವೆಂಟ್​ನಲ್ಲಿಯೂ  ಇದೇ  ಪ್ರಶ್ನೆ ಎದುರಾಗಿದ್ದಾಗ ಅವರು, ಮದುವೆಯ ಬಗ್ಗೆ ಮೌನ ಮುರಿದಿದ್ದರು.  ಮದುವೆ ಪ್ರಶ್ನೆ ಕೇಳಿದಾಗೆಲ್ಲ ಏನಾದರೂ ಒಂದು ಸಬೂಬು ನೀಡಿ ಜಾರಿಕೊಳ್ಳುತ್ತಿದ್ದ ನಟ, ಮದುವೆಯ ಪ್ರಶ್ನೆ ಕೇಳುತ್ತಿದ್ದಂತೆಯೇ, ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಆದರೆ  ಮದುವೆ ಯಾವಾಗ ಎನ್ನುವುದನ್ನು ಮಾತ್ರ ಅವರು ಹೇಳಿಕೊಂಡಿಲ್ಲ. ಅವರ ಹೆಸರು ಮಾತ್ರ ನಟಿ ಅನುಷ್ಕಾ ಜೊತೆ  ಥಳಕು ಹಾಕಿಕೊಳ್ಳುತ್ತಲೇ ಇದೆ.  ಅನುಷ್ಕಾ ಮತ್ತು ಪ್ರಭಾಸ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ಬಿಲ್ಲಾ ಜೊತೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

ಇನ್ನು ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೆ ಕನ್ನಡದಲ್ಲಿಯೂ ಮಾಡುವೆ ಎಂದಿದ್ದರೂ ಇದುವರೆಗೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ತೆಲುಗು ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' (Mrs Shetty Mrs Poli Shetty) ಸಿನಿಮಾದಲ್ಲಿ ನಟಿಸಿದ್ದು, ಅದು ಕಳೆದ ಸೆಪ್ಟೆಂಬರ್​7ರಂದು ರಿಲೀಸ್​ ಆಗಿದೆ.  ಮೂರು ವರ್ಷಗಳ ಬಳಿಕ  ಮತ್ತೆ ತೆರೆಮೇಲೆ ಆಗಮಿಸಿದ್ದಾರೆ  ಅನುಷ್ಕಾ. ಮಹೇಶ್‌ ಬಾಬು ಪಿಚಿಗೊಲ್ಲ ನಿರ್ದೇಶನದಲ್ಲಿ ಮೂಡಿಬಂದಿದೆ ಈ ಚಿತ್ರ. ಈ ಸಿನಿಮಾದಲ್ಲಿ  ಶೆಫ್‌ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 

ಹನಿಮೂನ್​ ಮೂಡ್​ನಲ್ಲಿರೋ ಪರಿಣಿತಿ- ರಾಘವ್​ಗೆ ಭಾರಿ ಶಾಕ್​! ಮನೆ ಖಾಲಿ ಮಾಡಲು ಕೋರ್ಟ್​ ಆದೇಶ

ಆದರೆ ಇದೀಗ ಕುತೂಲಹದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಅನುಷ್ಕಾ ಮತ್ತು ಪ್ರಭಾಸ್​ ಅವರ ಮದುವೆಯ ಫೋಟೋ ವೈರಲ್​ ಆಗಿವೆ. ಸಾಲದು ಎನ್ನುವುದಕ್ಕೆ ಇಬ್ಬರ ಬಳಿ ಒಂದು ಮಗು ಕೂಡ ಇದೆ. ಇದನ್ನು ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ.  ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಫೋಟೋಗಳು ವೈರಲ್​ ಆಗಿವೆ. ಕೆಲವರು ಅನುಷ್ಕಾ ಕೆಲ ವರ್ಷ ಗ್ಯಾಪ್​ ತೆಗೆದುಕೊಂಡಿದ್ದು ಇದೇ ಕಾರಣಕ್ಕೇನಾ ಎಂದುಪ್ರಶ್ನಿಸುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ ಸಲಾರ್​, ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿದ್ದು, ಡಿಸೆಂಬರ್​ 22ರ ಡೇಟ್​ ನಿಗದಿ ಮಾಡಲಾಗಿದೆ. ಇವೆಲ್ಲದಕ್ಕೂ ಒಂದಕ್ಕೊಂದು ತಾಳೆ ಹಾಕಿ ಫೋಟೋಗಳಿಗೆ ವಿಭಿನ್ನ ರೀತಿಯ ಕಮೆಂಟ್​ ಮಾಡಲಾಗುತ್ತಿದೆ.

ಅಷ್ಟಕ್ಕೂ  ಈ ಫೋಟೋ ಹಿಂದಿರೋ ಅಸಲಿಯತ್ತೇ ಬೇರೆ. ಹೇಳಿ ಕೇಳಿ ಇದು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಎಐ-AI) ಯುಗ. ಫೋಟೋ, ವಿಡಿಯೋಗಳಲ್ಲಿ ಯಾರ ಜೊತೆ ಯಾರನ್ನಾದರೂ ಸೇರಿಸಿ ಏನು ಬೇಕಾದರೂ ಮಾಡುವ ಕಾಲವಿದು. ಈ ಫೋಟೋಗಳೂ ಅದೇ ಎಐನಿಂದ ಸೃಷ್ಟಿ ಮಾಡಿರುವುದು. ಇದು ಅಸಲಿ ಫೋಟೋಗಳು ಅಲ್ಲ. ಇದು ಅಸಲಿ ಅಲ್ಲ ಎನ್ನುವುದನ್ನು ಕೆಲವು ಫ್ಯಾನ್ಸ್​ ಮಾತ್ರ ಕಂಡುಹಿಡಿದಿದ್ದಾರೆ. ಅಷ್ಟಕ್ಕೂ ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಪ್ರಭಾಸ್ ಅವರ ಸಲಾರ್​ ಚಿತ್ರ ಮುಂದೂಡಿಕೆ  ಆಗಲು ಬೇರೆಯ ಕಾರಣಗಳೇ ಇವೆ.  ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.  ಈ ಸಿನಿಮಾಗೆ ಸಂಬಂಧಿಸಿದ ಗ್ರಾಫಿಕ್ಸ್ ಕಂಪ್ಲೀಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್​ಗೆ  ಮುಂದೂಡಲಾಗಿದೆ. ಪ್ರಭಾಸ್ ಕಳೆದ ಕೆಲ ದಿನಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮುಗಿಸಿದ್ದಾರೆ. ಆದರೆ ಆ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಬೇಕಾಗುವ ಕಾರಣದಿಂದಲೂ ಚಿತ್ರ ಮುಂದೂಡಲಾಗಿದೆ  ಎನ್ನಲಾಗಿದೆ.

ಐಶ್ವರ್ಯ ಕಂಡ್ರೆ ಅಮಿತಾಭ್​ ಪುತ್ರಿ ಶ್ವೇತಾಗೆ ಹೊಟ್ಟೆ ಉರಿ: ಮೊಮ್ಮಗಳು ನವ್ಯಾ ನವೇಲಿನೂ ಇದೇ ಹಾದಿ ಹಿಡಿದ್ರಾ?

Follow Us:
Download App:
  • android
  • ios