10 ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪೋಪಿ ಜಬ್ಬಲ್. ಲವ್ ಆಂಡ್‌ ಮ್ಯಾರೇಜ್‌ ಸ್ಟೋರಿ ಬಿಚ್ಚಿಟ್ಟ ನಟಿ...

ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಪಾಪ್ಪಿ ಜಬಲ್ ಮತ್ತು ಕರಣ್ ಹಿಮಾಜಲ್‌ ಪ್ರದೇಶದಲ್ಲಿ ಮೇ 31ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 10 ವರ್ಷಗಳ ಪ್ರೀತಿ ಹೇಗಿತ್ತು, ಮದುವೆ ಮತ್ತು ಹನಿಮೂನ್‌ ಪ್ಲ್ಯಾನ್‌ಗಳನ್ನು ಮೊದಲ ಬಾರಿ ಪಾಪ್ಪಿ ಹಂಚಿಕೊಂಡಿದ್ದಾರೆ. 

'ಕೆಲವು ವಾರಗಳ ಹಿಂದೆ ನಾವು ಮದುವೆ ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದು. ನಮ್ಮಿಬ್ಬರಿಗೂ ಬೆಟ್ಟ ಗುಡ್ಡ ತುಂಬಾನೇ ಇಷ್ಟ ಹೀಗಾಗಿ ಒಂದು ಸುಂದರವಾದ ಜಾಗ Chailಗೆ ಭೇಟಿ ಕೊಟ್ಟಿವು. ಎಷ್ಟು ಇಷ್ಟ ಆಯ್ತು ಅಂದ್ರೆ ಇಲ್ಲಿ ಮದುವೆ ಆಗಬೇಕು ಎಂದು ಪ್ಲ್ಯಾನ್ ಮಾಡಿದೆವು. ಮೂರ್ನಾಲ್ಕು ದಿನಗಳ ಕಾಲ ನಾವು ಫಂಕ್ಷನ್ ಮಾಡಿಲ್ಲ, ಒಂದು ದಿನ ನಡೆದ ಮದುವೆ. ನಮ್ಮ ಮದುವೆಗೆ ಸ್ನೇಹಿತರು ಮತ್ತು ಕುಟುಂಬಸ್ಥರು ಕಾಯುತ್ತಿದ್ದರು, ಅವರೆಲ್ಲಾ ಖುಷಿಯಾಗಿ ಎಂಜಾಯ್ ಮಾಡಿದ್ದಾರೆ' ಎಂದು ಕರಣ್ ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.

'ನಾವಿಬ್ಬರೂ ಧರಿಸಿರುವ ಉಂಗುರದಲ್ಲಿ ನಮ್ಮ ಮದುವೆ ದಿನಾಂಕವಿದೆ ಅದು ಬಿಟ್ಟರೆ ನಮ್ಮಲ್ಲಿ ಯಾವ ಬದಲಾವಣೆನೂ ಆಗಿಲ್ಲ. ಸದಾ ಪ್ರೀತಿ ತೋರಿಸಿ ಇಷ್ಟ ಪಡುವ ಹುಡುಗನನ್ನು ಮದುವೆಯಾಗುತ್ತಿರುವುದಕ್ಕೆ ನನಗೆ ಖುಷಿ ಇದೆ' ಎಂದು ಪಾಪ್ಪಿ ಹೇಳಿದ್ದಾರೆ. 

Physical Attraction, ಪ್ರೀತಿ, ಮದುವೆ ಬಗ್ಗೆ ಬೋಲ್ಡ್ ಹೇಳಿಕೆ ಕೊಟ್ಟ ನಟಿ ಪಾಯಲ್

'ನಾವು ಮದುವೆ ಆಗಬೇಕು ಎನ್ನು ಪ್ಲ್ಯಾನ್‌ ನನಗೆ ಇರಲಿಲ್ಲ. ಒಬ್ಬರಿಗೆ ಕಮಿಟ್ ಆದ್ಮೇಲೆ ಮದುವೆ ಯೋಚನೆ ಬರುವುದಿಲ್ಲ. ಒಬ್ಬರನ್ನು ನಾವು ಇಷ್ಟ ಪಟ್ಟರೆ ಲವ್ ಮಾಡಿದರೆ ಅಷ್ಟೇ ನಮ್ಮ ಜೀವನ ನಾವು ಬೇರೆ ಅವರನ್ನು ನೋಡುವುದಿಲ್ಲ. ನಾವು 10 ವರ್ಷಗಳ ಕಾಲ ಪ್ರೀತಿಸಿದ್ದೀವಿ. ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ ಕುಟುಂಬದ ಬಗ್ಗೆ ಚಿಂತನೆ ಶುರುವಾಯಿತ್ತು. ನಾನು ಟಿವಿ ಶೋ ಚಿತ್ರೀಕರಣಕ್ಕೆಂದು Mohali ಪ್ರಯಾಣ ಮಾಡಿದೆ ನಾವು ಹಲವು ತಿಂಗಳುಗಳ ಕಾಲ ಲಾಂಗ್‌ ಡಿಸ್ಟೆನ್ಸ್‌ ಪ್ರೀತಿಯಲ್ಲಿದ್ದೆವು. ನಮಗೆ ಸರಿಯಾಗಿ ಸಮಯ ಸಿಗುತ್ತಿರಲಿಲ್ಲ ಹೀಗಾಗಿ ಸದಾ ಒಟ್ಟಿಗೆ ಇರಬೇಕು ಎಂದು ಮದುವೆ ಆಗುವ ಪ್ಲ್ಯಾನ್ ಮಾಡಲಾಗಿತ್ತು' ಎಂದಿದ್ದಾರೆ ಕರಣ್.

3 ಮಕ್ಕಳಿದ್ದರೂ ವಿಚ್ಛೇದನ ಪಡೆದು 15 ವರ್ಷದ ಗೆಳೆಯನ ಜೊತೆ ಹಸೆಮಣೆ ಏರಿದ ಗಾಯಕಿ!

'ಕೆಲವು ತಿಂಗಳುಗಳ ಹಿಂದೆ ನನ್ನ ತಂದೆ ಆರೋಗ್ಯ ಏರುಪೇರಾಗಿತ್ತು. ಆಗ ಕರಣ್ ನನ್ನ ಸಪೋರ್ಟ್ ಆಗಿದ್ದರು. ಕರಣ್ ತುಂಬಾನೇ ಕೇರಿಂಗ್ ಮತ್ತು ಲವಿಂಗ್ ವ್ಯಕ್ತಿ. 10 ವರ್ಷಗಳಿಂದ ಕರಣ್ ಪರಿಚಯವಿದೆ.'ಎಂದು ಪಾಪಿ ಹೇಳಿದ್ದರೆ. 'ಪಾಪ್ಪಿ ನನ್ನ ಬ್ಯಾಕ್‌ಬೋನ್ ನನ್ನ ಪ್ರತಿಯೊಂದು ಕೆಲಸಕ್ಕೂ ಸಪೋರ್ಟ್ ಮಾಡಿದ್ದಾರೆ. ನಾನು ಬಿಳಿ ಬಣ್ಣದ ಶೇರ್ವಾನಿ ಧರಿಸಿದರೆ ಆಕೆ ಅದಕ್ಕೆ ಬಟನ್ ಹಾಕುತ್ತಾಳೆ.ನಾನು ಕೆಲವು ದಿನಗಳಲ್ಲಿ ಚಿತ್ರೀಕರಣ ಮತ್ತೆ ಶುರು ಮಾಡುತ್ತೀನಿ. ನಮ್ಮ ಹನಿಮೂನ್‌ ಪ್ಲ್ಯಾನ್ ಏನು ಇಲ್ಲ ನಮ್ಮ ಗೋರೆಗಾಂವ್ ಮನೆಯಲ್ಲಿ ನಾವು ಹನಿಮೂನ್‌ ಮಾಡಿಕೊಳ್ಳುವುದು. ಸಿಂಪಲ್ ಆಗಿರುತ್ತದೆ ಟಾಪ್‌ ಫ್ಲೋರ್‌ನಿಂದ ಮುಂಬೈ ಬೀಚ್ ನೋಡುವುದು. ತಮಾಷೆ ಹೊರತು ಪಡಿಸಿ ಹೇಳಬೇಕು ಅಂದ್ರೆ ಪಾಪ್ಪಿ ವೆಬ್‌ ಶೋ ಚಿತ್ರೀಕರಣಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಇದರ ಜೊತೆ ನಾವು ಸ್ನೇಹಿತರಿಗೆ ಆರತಕ್ಷತೆ ಹಮ್ಮಿಕೊಳ್ಳಬೇಕು. ಒಂದಾದ ಮೇಲ್ಲೊಂದು ಪ್ಲ್ಯಾನ್ ಶುರು ಮಾಡುತ್ತೀವಿ'ಎಂದಿದ್ದಾರೆ ಕರಣ್.