Asianet Suvarna News Asianet Suvarna News

ವನವಾಸ ಮುಗಿಸಿ ಕೊನೆಗೂ ಬಂತು ಪಠಾಣ್ ಟ್ರೇಲರ್​​: ಜಾನ್ ಅಬ್ರಹಾಂ, ಶಾರುಖ್ ನಡುವಿನ ಫೈಟಿದು!

ಕೇಸರಿ ಬಣ್ಣದಿಂದ ಭಾರಿ ವಿವಾದಕ್ಕೆ ಸಿಲುಕಿರುವ ಬಹು ನಿರೀಕ್ಷಿತ ಪಠಾಣ್​ ಚಿತ್ರದ ಟ್ರೇಲರ್​ ಕೊನೆಗೂ ಬಿಡುಗಡೆಗೊಂಡಿದೆ. ಮುಂದೇನು?
 

Pathan trailer released new mission to save Bharat Mata begins
Author
First Published Jan 10, 2023, 2:53 PM IST

ವಿವಾದಗಳಿಗೆ ಸಿಲುಕಿ ನಲುಗಿ ಹೋಗಿರುವ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಅವರ ಬಹು ನಿರೀಕ್ಷಿತ ಪಠಾಣ್​ ಟ್ರೇಲರ್​ ಕೊನೆಗೂ ಬಿಡುಗಡೆಯಾಗಿದೆ. ಆ್ಯಕ್ಷನ್​ ಹೀರೋ ಶಾರುಖ್​ ಖಾನ್ ಈ ಟ್ರೇಲರ್​ನಲ್ಲಿಯೂ ಅಬ್ಬರಿಸುತ್ತಾ ಆ್ಯಕ್ಷನ್​ ಮಾಡಿದ್ದು, ಫ್ಯಾನ್ಸ್​ಗಳ ಮನ ಗೆದ್ದಿದ್ದಾರೆ. ಟ್ರೇಲರ್​ನ ಉದ್ದಕ್ಕೂ  ಆ್ಯಕ್ಷನ್​ ದೃಶ್ಯಗಳೇ ತುಂಬಿಹೋಗಿವೆ. ಹೇಳಿಕೇಳಿ ಇದು ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಚಿತ್ರ. ಆಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ಪಳಗಿರುವ ಸಿದ್ಧಾರ್ಥ್​, ಇಲ್ಲಿ ಇದರ ಪ್ರಯೋಜನ ಸಾಕಷ್ಟು ಪಡೆದುಕೊಂಡಿದ್ದಾರೆ. ಸಾಹಸ ಸನ್ನಿವೇಶಗಳಿಗೆ ಪ್ರಾಧಾನ್ಯ ನೀಡಲಾಗಿದೆ.

 'ಬ್ಯಾಂಗ್ ಬ್ಯಾಂಗ್', 'ವಾರ್' ಸಿನಿಮಾಗಳಂತೆಯೇ ಸಿದ್ಧಾರ್ಥ್​ ಅವರು ಇಲ್ಲಿಯೂ ಸಾಕಷ್ಟು ಆ್ಯಕ್ಷನ್​ ಮೂಡಿಸಿದ್ದಾರೆ. ಶಾರುಖ್​ ಖಾನ್​ ಮಾತ್ರವಲ್ಲದೇ, ಇನ್ನು ಕೇಸರಿ ಬಣ್ಣದ ಬಿಕಿನಿ(Bikini)ಯಿಂದಾಗಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಕೂಡ ಇಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಅವರ ಸ್ಟಂಟ್​ಗಳಿಗೂ ಕಮ್ಮಿಯೇನಿಲ್ಲ. ಅಚ್ಚರಿ ಮೂಡಿಸುವಷ್ಟು ಸ್ಟಂಟ್​ (Stunt) ಮಾಡಿದ್ದಾರೆ. ಮೈನವಿರೇಳಿಸುವಂತಹ ಸಾಕಷ್ಟು ಆಕ್ಷನ್ ಸೀನ್‌ಗಳು ಈ ಸಿನಿಮಾದಲ್ಲಿವೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿ.  'ಬೇಷರಂ ರಂಗ್'​ (Besharam Rang) ಹಾಡಿನಿಂದಾಗಿ ಬೈಕಾಟ್​ ಬಿಸಿ ಅನುಭವಿಸುತ್ತಿರುವ ನಡುವೆಯೇ ಪಠಾಣ್​ ಟ್ರೇಲರ್​ ಭರ್ಜರಿ ಸದ್ದು ಮಾಡಿದೆ. ‘ಪಠಾಣ್​ ವನವಾಸ (Vanavasa) ಮುಗಿಸಿ ಬರುವ ಟೈಮ್ ಆಯಿತು’ ಎಂಬ ಸಿನಿಮಾದ ಡೈಲಾಗ್​ನಿಂದ ಟ್ರೇಲರ್​ ಶುರುವಾಗುತ್ತದೆ. ಅಸಲಿಗೆ ಇದು ನಿಜಕ್ಕೂ ಈಗಿನ ಪಠಾಣ್​ ಸ್ಥಿತಿಗೆ ಸರಿಹೊಂದುತ್ತದೆ ಎನ್ನುವುದು ನೆಟ್ಟಿಗರ ಮಾತು.

'ಬೇಶರಂ ರಂಗ್'​ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?

ಸಿನಿಮಾದ ಟ್ರೇಲರ್​ (Trailer) ಸಾಕಷ್ಟು ಅದ್ದೂರಿಯಾಗಿ ಮೂಡಿಬಂದಿದೆ. ರಿಲೀಸ್ ಆದ ಕೆಲವೇ ನಿಮಿಷಕ್ಕೆ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ದಾಖಲೆ ಮಾಡಿದೆ. 'ಪಠಾಣ್' ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ.  ಈ ಟ್ರೇಲರ್ ಬಿಡುಗಡೆಯಾದ  ಒಂದೇ ಗಂಟೆಯಲ್ಲಿ 25 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ.  5 ಲಕ್ಷಕ್ಕೂ ಅದಿಕ ಮಂದಿ ಲೈಕ್ಸ್​ ಮಾಡಿದ್ದಾರೆ. ಇದರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಲೇ ಇದೆ. ಇದು  ಫ್ಯಾನ್ಸ್​ಗಳು (Fans) ಚಿತ್ರದ ಮೇಲಿಟ್ಟಿರುವ  ನಿರೀಕ್ಷೆ ತೋರಿಸುತ್ತದೆ. 

'ಜೈ ಹಿಂದ್‌...' (Jai Hind) ಎನ್ನುತ್ತ ಶಾರುಖ್ ಖಾನ್​ ಅಬ್ಬರಿಸುವ ದೃಶ್ಯ ಚಿತ್ರದಲ್ಲಿದೆ. ಇದು ಚಿತ್ರದಲ್ಲಿ ಶಾರುಖ್​ ಖಾನ್​ ಅವರಿಗೆ ದೇಶದ ಮೇಲೆ ಇರುವ ಪ್ರೀತಿಯ ಸಂಕೇತವಾಗಿದೆ. ಚಿತ್ರದಲ್ಲಿ ಇವರು ರಾ ಏಜೆಂಟ್​ (Raw Agent) ಆಗಿ ಮಿಂಚಿದ್ದಾರೆ. ದೇಶದ ಮೇಲೆ ದಾಳಿ ಮಾಡಲು ಸಂಚು ರೂಪಿಸುವ ಉಗ್ರನ ವಿರುದ್ಧ ಹೋರಾಡುವ ರಾ ಏಜೆಂಟ್ ಪಾತ್ರದಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಾಹಂ  ವಿಲನ್ ಪಾತ್ರದಲ್ಲಿ  ನಟಿಸಿದ್ದಾರೆ. ಮೊದಲೇ ಹೇಳಿದ ಹಾಗೆ ಟ್ರೇಲರ್​ ಪೂರ್ತಿ ಆ್ಯಕ್ಷನ್​ನಿಂದ ತುಂಬಿದ್ದು, ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿ ಫೈಟಿಂಗ್​ ದೃಶ್ಯ,  ಕಾರ್ ಚೇಸಿಂಗ್ ದೃಶ್ಯ ರೋಮಾಂಚನಗೊಳ್ಳುವಂತಿದೆ.

ನಾಳೆ ಪಾರ್ನ್ ಸಿನಿಮಾನೂ ಮಾಡ್ತೀರಿ; ಶಾರುಖ್ 'ಪಠಾಣ್' ವಿರುದ್ಧ 'ಶಕ್ತಿಮಾನ್' ಮುಖೇಶ್ ಖನ್ನಾ ಕಿಡಿ

ಅಂದಹಾಗೆ ಈ ಚಿತ್ರದ ಕಥೆ ದೇಶಪ್ರೇಮಕ್ಕೆ ಸಂಬಂಧಿಸಿದ್ದು. ವಿಲನ್​ ಆಗಿ ನಟಿಸಿರುವ ಜಾನ್ ಅಬ್ರಾಹಂ (Jahn Abrahim) ಔಟ್​ಪುಟ್ ಎಕ್ಸ್ ಎಂಬ ಹೆಸರಿನ ಉಗ್ರ ಸಂಘಟನೆ ನಡೆಸುತ್ತಿರುತ್ತಾರೆ. ದಾಳಿ ನಡೆಸಲು ಇವರು ಗುತ್ತಿಗೆ ಪಡೆದುಕೊಳ್ಳುತ್ತಿರುತ್ತಾರೆ. ಈ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೇಗೆ ಹೋರಾಡುತ್ತಾರೆ, ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎನ್ನುವುದು  ಸಿನಿಮಾದ ಕಥೆ. ಶಾರುಖ್ ಖಾನ್ ಅವರು 2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಕ ಕೆಲ ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ  ‘ಪಠಾಣ್​’ ಮೂಲಕ ವಾಪಸ್​ ಬಂದಿದ್ದಾರೆ. ವಾಪಸ್​ ಬರುತ್ತಲೇ ಬೈಕಾಟ್​ ಬಿಸಿಯನ್ನೂ ಅನುಭವಿಸುತ್ತಿದ್ದಾರೆ. ಜನವರಿ 25ರಂದು ‘ಪಠಾಣ್​’ ರಿಲೀಸ್ ಆಗಲಿದ್ದು ಟ್ರೇಲರ್​ನಷ್ಟೇ ಉತ್ಸಾಹದಲ್ಲಿ ಅಭಿಮಾನಿಗಳು ಚಿತ್ರ ನೋಡುತ್ತಾರೆಯೇ ಎಂದು ಕಾದುನೋಡಬೇಕಿದೆ.

ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ (Salman Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಷ್ಯಾದ ಸೈನ್ಯದಿಂದ ನಾಯಕ ಶಾರುಖ್​ ಖಾನ್​ ಅವರನ್ನು ರಕ್ಷಿಸಲು  ಸಲ್ಮಾನ್ ಖಾನ್​ ವೀರೋಚಿತವಾಗಿ ಆಗಮಿಸುವ ಪಾತ್ರ ಈ ಚಿತ್ರದಲ್ಲಿದೆ. ಅಶುತೋಷ್ ರಾಣಾ, ಗೌತಮ್ ರೊಡೆ, ಡಿಂಪಲ್ ಕಪಾಡಿಯಾ, ಸಿದ್ದಾರ್ಥ್ ಘೆಗ್ದಾಮಾಲ್‌, ಶಾಜಿ ಚೌಧರಿ ಮುಂತಾದವರು ನಟಿಸಿದ್ದಾರೆ. 

Follow Us:
Download App:
  • android
  • ios