Asianet Suvarna News Asianet Suvarna News

ಮಗಳ ಬಿಕಿನಿ ಫೋಟೋ ಕಳುಹಿಸಿ ಜೀವ ಬೆದರಿಕೆ ಹಾಕ್ತಿದ್ದಾರೆ; ಶಾರುಖ್ ಅಭಿಮಾನಿಗಳ ವಿರುದ್ಧ ಆಗ್ನಿಹೋತ್ರಿ ಆರೋಪ

ಶಾರುಖ್ ಖಾನ್ ಅಭಿಮಾನಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿವೇಕ್ ಅಗ್ನಿಹೋತ್ರಿ ಗಂಭೀರ ಆರೋಪ ಮಾಡಿದ್ದಾರೆ. 

Pathaan Vivek Agnihotri receives death threats from Shah Rukh Khan's fans sgk
Author
First Published Jan 2, 2023, 5:32 PM IST

ಬಾಲಿವುಡ್ ನಲ್ಲಿ ಈಗ ಪಠಾಣ್ ಸಿನಿಮಾದೆ ಚರ್ಚೆ. ಬೇಷರಂ ರಂಗ್ ಹಾಡು ಬಿಡುಗಡೆಯಾದ ಬಳಿಕ ಶಾರುಖ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಣಿಸಿಕೊಂಡಿದ್ದ ಬೇಷರಂ ರಂಗ್ ಹಾಡು ವಿವಾದ ಸುಳಿಯಲ್ಲಿ ಸಿಲುಕಿದೆ. ಈ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ. ಅನೇಕ ಸಿನಿಮಾ ಗಣ್ಯರು ಬೇಷರಂ ರಂಗ್ ಹಾಡಿನ ವಿರುದ್ಧ ಕಿಡಿ ಕಾರಿದ್ದರು. ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲಿ ಬಾಲಿವುಡ್ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಕೂಡ. ಬೇಷರಂ ರಂಗ್ ಹಾಡನ್ನು ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದರು. ಹಾಡಿನ ವಿರುದ್ಧ ಆಕ್ರೋಶ ಹೊರ ಹಾಕಿದ ನಂತರ ಬೆದರಿಕೆ ಕರೆಗಲು ಬರ್ತಿವೆ ಎಂದು ಅಗ್ನಿಹೋತ್ರಿ ಆರೋಪ ಮಾಡಿದ್ದಾರೆ. 

ಕೇಸರಿ ಬಿಕಿನಿ ಧರಿಸಿದ್ದ ದೀಪಿಕಾ ಭಾರಿ ವಿವಾದಕ್ಕೆ ಗುರಿಯಾಗಿದ್ದರು. ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದು ಹೇಳಿದ್ದರು ಅಂತ ದೀಪಿಕಾ ವಿರುದ್ಧ ಅನೇಕರು ರೊಚ್ಚಿಗೆದ್ದಿದ್ದರು. ಅಗ್ನಿಹೋತ್ರಿ ಪಠಾಣ್ ವಿರುದ್ಧ ಕಾಮೆಂಟ್ ಮಾಡುತ್ತಿದ್ದಂತೆ ಅವರ ಮಗಳು ಕೇಸರಿ ಬಿಕಿನಿ ಧರಿಸಿ ಬೀಚ್ ನಲ್ಲಿ ಕುಳಿತು ಪೋಸ್ ನೀಡಿದ್ದ  ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಅಗ್ನಿಹೋತ್ರಿ ಮಗಳ ಬಿಕಿನಿ ಫೋಟೋ ಶೇರ್ ಮಾಡಿ ಕಿಡಿ ಕಾರುತ್ತಿದ್ದಾರೆ. 'ನಿಮ್ಮ ಮಗಳೇ ಬಿಕಿನಿ ಧರಿಸಿ ಶೋ ಮಾಡ್ತಿದ್ದಾರೆ ಶಾರುಖ್‌ನಾ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ' ಎಂದು ಪ್ರಶ್ನೆ ಮಾಡುತ್ತಿದ್ದಾರೆ.  

ದೀಪಿಕಾ ಮಾತ್ರವಲ್ಲ, ಕೇಸರಿ ಬಿಕನಿಯಲ್ಲಿ ಬೋಲ್ಡ್ ಫೋಸ್ ಕೊಟ್ಟ ನಟಿಯರು!

ಈ ಬಗ್ಗೆ ಅಗ್ನಿ ಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾರುಖ್ ವಿರುದ್ಧ ಮಾಡಿದ್ದ ಟ್ವೀಟ್ ಡಿಲೀಟ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಸ್ಕ್ರೀನ್ ಶಾಟ್ ಶೇರ್ ಮಾಡಿ, ಬಾದ್‌ಶಾ ಹೇಳಿದ್ದು ಸರ್ ಎಂದು ಹೇಳಿದ್ದಾರೆ. 'ಬಾದ್‌ಶಾ ಹೇಳಿದ್ದು ಸರಿ. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಇದೆ. ಆದರೆ ನಾವು ಸಕಾರಾತ್ಮಕವಾಗಿದ್ದೇವೆ' ಎಂದು ಹೇಳಿದ್ದಾರೆ.

Pathan; ಬೇಷರಂ ರಂಗ್ ವಿವಾದ; ದೀಪಿಕಾ ಪರ ಬ್ಯಾಟ್ ಬೀಸಿದ ನಟ ಪ್ರಕಾಶ್ ರಾಜ್

ಪಠಾಣ್, ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ. ಅನೇಕ ವರ್ಷಗಳ ಬಳಿಕ ಶಾರುಖ್ ಪಠಾಣ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ದೀಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಜನವರಿ 25 ಪಠಾಣ್ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. 

  

Follow Us:
Download App:
  • android
  • ios