Pathan; ಬೇಷರಂ ರಂಗ್ ವಿವಾದ; ದೀಪಿಕಾ ಪರ ಬ್ಯಾಟ್ ಬೀಸಿದ ನಟ ಪ್ರಕಾಶ್ ರಾಜ್

ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿವಾದದ ನಡುವೆಯೂ ಫಿಫಾ ವಿಶ್ವ ಕಮ್ ಟ್ರೋಫಿ ಅನಾವರಣ ಮಾಡಿದ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

Prakash Raj says Will Besharam Bigots ban FIFA World Cup? sgk

ಬಾಲಿವುಡ್ ಸ್ಟಾರ್ ಶಾರುಖ್​ ಖಾನ್  ಮತ್ತು ದೀಪಿಕಾ ಪಡುಕೋಣೆ ನಟನೆಯ‘ಪಠಾಣ್’ ಸಿನಿಮಾದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಬೇಷರಂ ರಂಗ್ ಹಾಡನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ, ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದು ಹೇಳಿದ್ದಾರೆ, ಇದು ಆತಿಯಾಯಿತು, ಪಠಾಣ್ ಸಿನಿಮಾ ಬ್ಯಾನ್ ಮಾಡಬೇಕು ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೇಷರಂ ರಂಗ್ ಹಾಡಿನ ವಿವಾದ ದೊಡ್ಡಮಟ್ಟದಲ್ಲಿ ಇರುವಾಗಲೇ ನಟಿ ದೀಪಿಕಾ ಪಡುಕೋಣೆ FIFA ವಿಶ್ವ ಕಪ್ ಟ್ರೋಫಿ ಅನಾವರಣ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ. ಭಾನುವಾರ ನಡೆದ ರೋಚಕ ಫೈನಲ್ ಪಂದ್ಯಕ್ಕೂ ಮೊದಲು ನಟಿ ದೀಪಿಕಾ ಪಡುಕೋಣೆ ಟ್ರೋಪಿ ಅನಾವರಣ ಮಾಡಿದರು. ಈ ಮೂಲಕ ದೀಪಿಕಾ ಇತಿಹಾಸ ಸೃಷ್ಟಿಸಿದರು. 

ದೀಪಿಕಾ ಅವರಿಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು ಹಾಗೂ ಸಿನಿಮಾ ಸ್ಟಾರ್‌ಗಳೂ ಸಹ ದೀಪಿಕಾಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಜಾಗತಿಕ ಸ್ಟಾರ್. ಮೊದಲ ಬಾರಿಗೆ ಭಾರತದ ವ್ಯಕ್ತಿ FIFA ವಿಶ್ವ ಕಪ್ ಟ್ರೋಪಿ ಅನಾವರಣ ಮಾಡಿದ್ದು   ಭಾರತೀಯರಿಗೆ ಹಾಗೂ ಅವರ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದೆ. ಈ ಬಗ್ಗೆ ಸೌತ್ ಸ್ಟಾರ್ ನಟ ಪ್ರಕಾಶ್ ರಾಜ್ ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ವಿವಾದದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬೇಷರಂ ಹಾಡಿನ ಬಗ್ಗೆ ವಿವಾದ ಮಾಡುವರಿಗೆ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಡಿರುವ ಪ್ರಕಾಶ್ ರಾಜ್, 'ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ ದೀಪಿಕಾ ಪಡೋಣೆ.  ನಾಚಿಕೆ ಇಲ್ಲದ ಮತಾಂಧರು ಈಗ ಫಿಫಾ ವಿಶ್ವಕಪ್ ಅನ್ನು ನಿಷೇಧಿಸುತ್ತಾರಾ. ಖೇಲಾ ಹೋಬ್' ಎಂದು ಹೇಳಿದ್ದಾರೆ.  

FIFA world cup 2022: ಖುಷಿಗೆ ಡಿಪ್ಪಿ ಹಗ್ ಮಾಡಿದ ರಣವೀರ್ ಫೋಟೋ ವೈರಲ್!

ಲುಸೈಲ್ ಸ್ಟೇಡಿಯಂನಲ್ಲಿ ದೀಪಿಕಾ ಪಡುಕೋಣೆ ಮಾಜಿ ಫುಟ್ಬಾಲ್ ಆಟಗಾರ, ಲೆಜೆಂಡ್ ಸ್ಪ್ಯಾನಿಷ್ ನ ಇಕರ್ ಕ್ಯಾಸಿಲಾಸ್ ಫರ್ನಾಂಡಿಸ್ ಜೊತೆ ನಡೆದುಕೊಂಡು ಬಂದರು. ಬಿಳಿ ಡ್ರೆಸ್ ಮೇಲೆ ಕೋಟ್ ಧರಿಸಿ ಅದಕ್ಕೊಂದು ಕಪ್ಪು ಬೆಲ್ಟ್ ಹಾಕಿದ್ದ ದೀಪಿಕಾ, ಇಕರ್ ಕ್ಯಾಸಿಲಾಸ್ ಫರ್ನಾಂಡಿಸ್ ಜೊತೆ ಮಿಲಿಯನ್ ಡಾಲರ್ ನಗು ಬೀರುತ್ತಾ ಎಂಟ್ರಿ ಕೊಟ್ಟರು. ಕಿಕ್ಕಿರುದು ತುಂಬಿದ್ದ ಕ್ರೀಡಾಂಗಣದಲ್ಲಿ ದೀಪಿಕಾ ಎಲ್ಲರ ಗಮನ ತನ್ನತ್ತ ಸೆಳೆದರು. ಟ್ರೋಫಿ ಹಿಡಿದು ಬಂದ ದೀಪಿಕಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ದೀಪಿಕಾ ಸಾಧನೆಯ ಮತ್ತೊಂದು ಹೈಲೆಟ್ ಆಗಿದೆ.

ಅಂದಹಾಗೆ ಪ್ರಕಾಶ್ ಈ ಮೊದಲು ಕೂಡ ಟ್ವೀಟ್ ಮಾಡಿ ದೀಪಿಕಾ ಪರ ಬ್ಯಾಟ್ ಬೀಸಿದ್ದರು. ಇದೀಗ ಮತ್ತೆ ದೀಪಿಕಾಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ವಿವಾದ ಮಾಡುವವರಿಗೆ ವ್ಯಂಗ್ಯವಾಡಿದ್ದಾರೆ.

FIFA ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿ ಇತಿಹಾಸ ಸೃಷ್ಟಿಸಿದ ನಟಿ ದೀಪಿಕಾ ಪಡುಕೋಣೆ

ಪಠಾಣ್ ಸಿನಿಮಾದ ಬಗ್ಗೆ

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
 

Latest Videos
Follow Us:
Download App:
  • android
  • ios