Asianet Suvarna News Asianet Suvarna News

Pathaan; ಹೈದರಾಬಾದ್‌‌ಗೆ ಬನ್ನಿ ಎಂದ ಅಭಿಮಾನಿಗೆ ಒಂದು ಕಂಡೀಷನ್ ಹಾಕಿದ ಶಾರುಖ್ ಖಾನ್

ಹೈದರಾಬಾದ್‌‌ ಚಿತ್ರಮಂದಿರಕ್ಕೆ ಬಗ್ಗೆ ಎಂದು ಕರೆದ ಅಭಿಮಾನಿಗೆ ಪಠಾಣ್ ಸ್ಟಾರ್ ಶಾರುಖ್ ಖಾನ್ ಒಂದು ಕಂಡೀಷನ್ ಹಾಕಿದ್ದಾರೆ. 

Pathaan star shah rukh khan says he will visit cinema halls in Hyderabad if Ram Charan takes me sgk
Author
First Published Jan 23, 2023, 1:35 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬಹು ನಿರೀಕ್ಷೆಯ ಪಠಾಣ್ ಸಿನಿಮಾ ಇದೇ ತಿಂಗಳು 25ರಂದು ರಿಲೀಸ್ ಆಗುತ್ತಿದೆ. ಅನೇಕ ವರ್ಷಗಳ ಬಳಿಕ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕಿಂಗ್ ಖಾನ್ ಅನ್ನು ತೆರೆಮೇಲೆ ನೋಡಿ ಆನಂದಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್ ಸಿನಿಮಾಗಾಗಿ ಶಾರುಖ್ ವಿದೇಶಗಳಲ್ಲೂ ಪ್ರಮೋಷನ್ ಮಾಡುತ್ತಿದ್ದಾರೆ. 

ಶಾರುಖ್ ಖಾನ್ ಪಠಾಣ್ ಸಿನಿಮಾ ಪ್ರಮೋಷನ್‌ಗೆ ದಕ್ಷಿಣ ಭಾರತದ ಕಡೆ ಬಂದಿಲ್ಲ. ಪಠಾಣ್ ಸಿನಿಮಾ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗುತ್ತಿದೆ. ಆದರೆ ಶಾರುಖ್ ದಕ್ಷಿಣ ಭಾರತದ ಕಡೆ ಬಂದಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ತೆಲುಗು ಅಭಿಮಾನಿಯೊಬ್ಬ ಶಾರುಖ್ ಖಾನ್‌ಗೆ ಹೈದರಾಬಾದ್‌ಗೆ ಬರುವ ಬಗ್ಗೆ ಟ್ವಿಟ್ಟರ್ ‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದಾರೆ. 

ಸಿನಿಮಾ ರಿಲೀಸ್ ದಿನ ಹೈದರಾಬಾದ್‌ನ ಯಾವುದಾದರೂ ಚಿತ್ರಮಂದಿರಕ್ಕೆ ಭೇಟಿ ನೀಡುತ್ತೀರಾ? ಎಂದು ಕೇಳಿದ್ದಾರೆ. ಇದಕ್ಕೆ ಶಾರುಖ್ ನೇರವಾಗಿ  ಉತ್ತರ ನೀಡಿದ್ದಾರೆ. ಒಂದು ಕಂಡೀಷನ್ ಕೂಡ ಹಾಕಿದ್ದಾರೆ. 'ರಾಮ್ ಚರಣ್ ಕರೆದುಕೊಂಡು ಹೋದರೆ ಖಂಡಿತ ಬರುತ್ತೇನೆ' ಎಂದು ಹೇಳಿದ್ದಾರೆ. 

ಶಾರುಖ್ ಖಾನ್ ಅಭಿಮಾನಿಗಳನ್ನು ನೇರವಾಗಿ ಹೋಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿ ಇದ್ದಾರೆ. ಟ್ವಿಟ್ಟರ್‌ನಲ್ಲಿ ಶಾರುಖ್ ಆಗಾಗ 'ಆಸ್ಕ್ ಮಿ ಎನಿಥಿಂಗ್' ಸೆಷನ್ ನಡೆಸುತ್ತಿರುತ್ತಾರೆ.ಆಘ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಅನೇಕ ಪ್ರಶ್ನೆಗಳು ಹರಿದುಬರುತ್ತವೆ. ಶಾರುಖ್ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.

ಆಸ್ಕರ್ ತಂದಾಗ ದಯವಿಟ್ಟು ನನಗೂ ಸ್ವಲ್ಪ ಮುಟ್ಟಲು ಕೊಡಿ; RRR ಸ್ಟಾರ್ ರಾಮ್ ಚರಣ್‌ಗೆ ಶಾರುಖ್ ವಿಶೇಷ ಮನವಿ

ರಾಮ್ ಚರಣ್ ಮತ್ತು ಶಾರುಖ್ ಇಬ್ಬರೂ ಉತ್ತಮ ಸ್ನೇಹಿತರು. ಇತ್ತೀಚಿಗೆ ದಕ್ಷಿಣ ಮತ್ತು ಬಾಲಿವುಡ್ ಎನ್ನುವ ಚರ್ಚೆ ಜೋರಾಗಿದೆ. ಈ ನಡುವೆ ದಕ್ಷಿಣ ಭಾರತದ ಅನೇಕ ಸ್ಟಾರ್‌ಗಳ ಜೊತೆ ಬಾಲಿವುಡ್ ಕಲಾವಿದರು ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಆಗಾಗ ಟ್ವೀಟ್ ಮೂಲಕ ಮಾತುಕತೆ ನಡೆಸುತ್ತಾರೆ. ಶಾರುಖ್ ಸಿನಿಮಾದ ಟ್ರೈಲರ್ ಅನ್ನು ನೋಡಿ ರಾಮ್ ಚರಣ್ ಮೆಚ್ಚಿಕೊಂಡಿದ್ದರು. ಟ್ವಿಟರ್ ಮೂಲಕ ಹಾಡಿ ಹೊಗಳಿದ್ದರು. ಬಳಿಕ ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದರು. 

'ಆಸ್ಕರ್​ ಪ್ರಶಸ್ತಿಯನ್ನು ಆರ್​ಆರ್​ಆರ್​ ಚಿತ್ರತಂಡ ಭಾರತಕ್ಕೆ ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್​’ ಎಂದು ಶಾರುಖ್​ ಖಾನ್​ ಮನವಿ ಮಾಡಿದ್ದರು. ಶಾರುಖ್ ಖಾನ್ ಮಾತಿಗೆ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿ. 'ಖಂಡಿತವಾಗಿಯೂ ಶಾರುಖ್​ ಸರ್​. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು’ ಎಂದು ಹೇಳಿದ್ದರು. ನಟರಿಬ್ಬರ ಟ್ವಿಟರ್​ ಮಾತುಕತೆ ವೈರಲ್​ ಆಗಿತ್ತು. 

ಶಾರುಖ್‌ ಖಾನ್‌ ನನಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ರು ಎಂದ ಅಸ್ಸಾಂ ಸಿಎಂ..!

ಪಠಾಣ್ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಹಾಡು ಮತ್ತು ಟ್ರೈಲರ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಬ್ಬರ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ. ಶಾರುಖ್ ಮತ್ತು ದೀಪಿಕಾ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಪಠಾಣ್ ಮೂಡಿಬಂದಿದೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳು ಟ್ರೈಲರ್ ನಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಜನವರಿ 25ರಂದು ತೆರೆ ಬೀಳಲಿದೆ. 

Follow Us:
Download App:
  • android
  • ios