Parineeti Chopra pregnant: ಬಾಲಿವುಡ್ ಪ್ರಸಿದ್ಧ ನಟಿ ಪರಿಣೀತಿ ಚೋಪ್ರಾ ಅಮ್ಮನಾಗ್ತಿದ್ದಾರೆ. ತಾವು ಪ್ರೆಗ್ನೆಂಟ್ ಎಂಬ ಖುಷಿ ಸುದ್ದಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. 

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮೊದಲ ಬಾರಿ ತಾಯಿ ಆಗ್ತಿದ್ದಾರೆ. ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪರಿಣೀತಿ ಮತ್ತು ಅವರ ಪತಿ ರಾಘವ್ ಚಡ್ಡಾ ತಾವು ಪಾಲಕರಾಗ್ತಿರುವ ಸಂತೋಷದ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ನ ಅತ್ಯಂತ ಮುದ್ದಾದ ದಂಪತಿ ಪಟ್ಟಿಯಲ್ಲಿರುವ ಪರಿಣೀತಿ ಮತ್ತು ರಾಘವ್ ನೀಡಿರುವ ಸಂತೋಷದ ಸುದ್ದಿ ಕೇಳಿ ಬಾಲಿವುಡ್ ಸ್ಟಾರ್ಸ್ ಹಾಗೂ ಫ್ಯಾನ್ಸ್ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ಶುಭ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ನಾವು ಪಾಲಕರಾಗ್ತಿದ್ದೇವೆ ಎಂಬುದನ್ನು ಇಬ್ಬರು ತಿಳಿಸಿದ್ದಾರೆ. ಆ ಫೋಟೋದಲ್ಲಿ ಮಗುವಿನ ಪುಟ್ಟ ಪಾದವಿದೆ. ಅದ್ರ ಕೆಳಗೆ 1+1=3 ಎಂದು ಬರೆಯಲಾಗಿದೆ. ಫೋಟೋ ಹಂಚಿಕೊಂಡ ಪರಿಣೀತಿ ಹಾಗೂ ರಾಘವ್ ಚಡ್ಡಾ, ನಮ್ಮ ಪುಟ್ಟ ಪ್ರಪಂಚ ಬರ್ತಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. ಅಲ್ದೆ ಇಬ್ಬರು ಕೈ ಕೈ ಹಿಡಿದು ರಸ್ತೆಯಲ್ಲಿ ಹೋಗ್ತಿರುವ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಹಿಂಭಾಗವನ್ನು ನೀವು ಕಾಣಬಹುದು. ಪರಿಣೀತಿ ತಮ್ಮ ಹೊಟ್ಟೆಯನ್ನು ವಿಡಿಯೋದಲ್ಲಿ ತೋರಿಸಿಲ್ಲ. ಪರಿಣೀತಿ ಹಾಗೂ ರಾಘವ್ ಚಡ್ಡಾ ನೀಡಿರುವ ಈ ಸುದ್ದಿಗೆ ಬಾಲಿವುಡ್ ಖುಷಿಯಾಗಿದೆ. ಸೋನಮ್ ಕಪೂರ್, ನೇಹಾ ಧೂಪಿಯಾ, ರಾಕುಲ್ ಪ್ರೀತ್, ಭೂಮಿ ಪೆಡ್ನೇಕರ್ ಅವರಂತಹ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ರಾಘವ್ ಚಡ್ಡಾ ಈ ಬಗ್ಗೆ ಸುಳಿವು ನೀಡಿದ್ದರು. ಪರಿಣೀತಿ ಗರ್ಭಿಣಿ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರ್ತಾ ಇತ್ತು. ಕಪಿಲ್ ಶರ್ಮಾ ಶೋನಲ್ಲಿ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವುದಾಗಿ ರಾಘವ್ ಭರವಸೆ ನೀಡಿದ್ದರು. ಈಗ ಪರಿಣೀತಿ ಗರ್ಭಿಣಿ ಎನ್ನುವ ಸುದ್ದಿಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಸದಾ ಗಮನ ಸೆಳೆಯುವ ಜೋಡಿಗಳಲ್ಲಿ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸೇರಿದ್ದಾರೆ. ಅವರಿಬ್ಬರ ಬಾಂಧವ್ಯ ಅಭಿಮಾನಿಗಳ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಯಾವುದೇ ರಾಜಕಾರಣಿಯನ್ನು ಎಂದಿಗೂ ಮದುವೆಯಾಗಬಾರದು ಅಂದ್ಕೊಂಡಿದ್ದ ಪರಿಣೀತಿ ಅಂತಿಮವಾಗಿ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಮದುವೆಯಾದ್ರು. 2023 ರಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಸುಮಾರು ಎರಡು ವರ್ಷಗಳ ನಂತ್ರ, ದಂಪತಿ ತಮ್ಮ ಜೀವನದ ಅತ್ಯಂತ ಖುಷಿ ಸುದ್ದಿಯನ್ನು ಎಲ್ಲರ ಮುಂದಿಟ್ಟಿದ್ದಾರೆ.

ಜುಲೈ 2023 ರಲ್ಲಿ ಪರಿಣೀತಿ ಹಾಗೂ ಚಡ್ಡಾ ನಿಶ್ಚಿತಾರ್ಥವಾಗ್ತಿದ್ದಂತೆ ಅವರು ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಡಿತ್ತು. ಆಸ್ಪತ್ರೆಯಲ್ಲಿ ಪರಿಣೀತಿ ನೋಡಿದ್ದ ಜನರು ಸುದ್ದಿ ಹಬ್ಬಿಸಿದ್ರು. ಇದನ್ನು ಕೂಲ್ ಆಗಿ ತೆಗೆದುಕೊಂಡಿದ್ದ ಪರಿಣೀತಿ, ನನ್ನ ತೂಕ ಹೆಚ್ಚಾಗ್ತಿದೆ, ಹಾಗಾಗಿ ಆಸ್ಪತ್ರೆಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಮದುವೆ ಆದ್ಮೇಲೆ ಇಬ್ಬರೂ ತಮ್ಮ ಕೆಲ್ಸದಲ್ಲಿ ಬ್ಯುಸಿಯಾಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ದಂಪತಿ, ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ.

View post on Instagram