ಮದುವೆಯಾಗಿ 10 ತಿಂಗಳಲ್ಲೇ ಮನಸ್ತಾಪ ? ನಟಿ ಪರಿಣಿತಿ ಚೋಪ್ರಾ ಮನದಾಳದ ಮಾತು
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಪೋಸ್ಟ್ ಒಂದು ಅನುಮಾನಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಚೋಪ್ರಾ ನಂತ್ರ ಪರಿಣಿತಿ ರಹಸ್ಯ ಪೋಸ್ಟ್ ಹಂಚಿಕೊಂಡಿದ್ದು, ಮದುವೆಯಾದ್ಮೇಲೆ ಪರಿಣಿತಿ ಸಮಸ್ಯೆಯಲ್ಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮದುವೆಯಾಗಿ ಹತ್ತು ತಿಂಗಳು ಕಳೆದಿದೆ. ಆಗ್ಲೇ ಬಾಲಿವುಡ್ ನಟಿಗೆ ಬೇಸರ ಬಂದಂತಿದೆ. ಖುಷಿ ಖುಷಿಯಾಗಿ ಓಡಾಡಿಕೊಂಡಿರುವ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಮೂಡ್ ಆಫ್ ಮಾಡಿಕೊಂಡಿದ್ದಾರೆ. ಬೇಸರದಲ್ಲಿರುವ ಅವರ ವಿಡಿಯೋ ಹಾಗೂ ರಹಸ್ಯ ಪೋಸ್ಟ್ ಒಂದು ಎಲ್ಲರನ್ನು ಆಘಾತಗೊಳಿಸಿದೆ. ಪತಿ ಹಾಗೂ ಪರಿಣಿತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆಯಾ ಎಂದು ಅಭಿಮಾನಿಗಳು ಪ್ರಶ್ನೆ ಕೇಳುವಂತೆ ಮಾಡಿದೆ.
ಪರಿಣಿತಿ ಚೋಪ್ರಾ (Parineeti Chopra) ದೋಣಿಯೊಂದರ ಮೇಲೆ ಕುಳಿತುಕೊಂಡಿದ್ದಾರೆ. ಅವರ ಮುಖ ಬಾಡಿದೆ. ಮನಸ್ಸಿನಲ್ಲಿ ಸಾಕಷ್ಟು ನೋವಿದ್ದಂತೆ ಕಾಡುತ್ತದೆ. ಮೇಕಪ್ (Makeup) ಇಲ್ಲದೆ ಚಿಂತಿತ ಮುಖದಲ್ಲಿರುವ ಪರಿಣಿಚಿ ಚೋಪ್ರಾ, ಸುದೀರ್ಘ ಪೋಸ್ಟ್ (Post) ಒಂದನ್ನು ಹಾಕಿದ್ದಾರೆ. ತಮ್ಮ ಸಂತೋಷದ ಬಗ್ಗೆ ಮಾತನಾಡಿರುವ ಪರಿಣಿತಿ, ಯಾರಿಂದಲೋ ತಮಗೆ ನೋವಾಗಿದೆ ಎಂಬುದನ್ನು ಈ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅತಂತ್ರ ಸ್ಥಿತಿಯಲ್ಲಿ ದರ್ಶನ್ ನಂಬಿದ ನಿರ್ಮಾಪಕರು: ಕೋಟಿ ಕೋಟಿ ಹಾಕಿ ಹಣ ಕೈ ಸುಟ್ಟುಕೊಂಡ್ರಾ?
ಪರಿಣಿತಿ ಚೋಪ್ರಾ ಪೋಸ್ಟ್ ನಲ್ಲಿ ಏನಿದೆ? : ಈ ತಿಂಗಳು ನಾನು ಸ್ವಲ್ಪ ನಿಂತು ಜೀವನದ ಬಗ್ಗೆ ಆಲೋಚನೆ ಮಾಡಿದೆ. ಅದು ನನ್ನ ನಂಬಿಕೆಯನ್ನು ಪುನರುಚ್ಛರಿಸಿದೆ. ಮನಸ್ಥಿತಿಯೇ ಎಲ್ಲವು. ಮುಖ್ಯವಲ್ಲ ವಿಷ್ಯ (ಜನರಿಗೆ) ಮಹತ್ವ ನೀಡಬೇಡಿ. ಒಂದು ಸೆಕೆಂಡ್ ಕೂಡ ಹಾಳು ಮಾಡಬೇಡಿ. ಜೀವನ ಟಿಕ್ ಟಿಕ್ ಮಾಡುವ ಒಂದು ಗಡಿಯಾರದಂತೆ. ಪ್ರತಿ ಕ್ಷಣ ನಿಮಗಿಷ್ಟವಾಗಬೇಕು. ದಯವಿಟ್ಟು ಇತರರಿಗಾಗಿ ಬದುಕಬೇಡಿ ಎಂದು ಪರಿಣಿತಿ ಬರೆದಿದ್ದಾರೆ.
ಅಷ್ಟೇ ಅಲ್ಲ, ನಿಮ್ಮವರನ್ನು ಹುಡುಕಿ. ವಿಷಕಾರಿ ಜನರನ್ನು ನಿಮ್ಮ ಜೀವನದಿಂದ ದೂರವಿಡಲು ಹೆದರಬೇಡಿ. ಸಮಾಜ ಏನು ಯೋಚಿಸುತ್ತೆ ಎಂಬುದನ್ನು ಚಿಂತಿಸಬೇಡಿ. ಸನ್ನಿವೇಷಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ನಿಮ್ಮ ವಿಧಾನವನ್ನು ಬದಲಿಸಿ. ಜೀವನ ಸೀಮಿತ. ಹಾಗಾಗಿ ನೀವು ಹೇಗಿರಬೇಕೆಂದು ಬಯಸುತ್ತೀರೋ ಹಾಗೆ ಬದುಕಿ ಎಂದು ಪರಿಣಿತಿ ಚೋಪ್ರಾ ದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಪರಿಣಿತಿ ಚೋಪ್ರಾ ಈ ಪೋಸ್ಟ್ ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನೀವು ಹುಷಾರಾಗಿದ್ದೀರಿ ಅಲ್ವಾ, ನಿಮ್ಮ ಬೆಂಬಲಕ್ಕೆ ನಾವು ಸದಾ ಇದ್ದೇವೆ ಎಂದು ಒಬ್ಬರು ಬರೆದಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಬರೆದಿದ್ದೀರಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಮದುವೆಯಾದ ನಂತ್ರ ನಿಮಗೆ ಈ ಚಿಂತೆ ಕಾಡಲು ಶುರುವಾಗಿದೆಯಾ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್ ಅನೇಕರು ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ಮನುಷ್ಯ ಇಂಥ ಸಮಸ್ಯೆಗಳನ್ನು ಎದುರಿಸುತ್ತಾನೆ. ಅದರಿಂದ ಹೊರಗೆ ಬರುವುದನ್ನು ಕಲಿಯಬೇಕು. ದುಷ್ಟರಿಗಾಗಿ ನಮ್ಮ ಒಂದು ಕ್ಷಣವನ್ನೂ ಹಾಳು ಮಾಡಬಾರದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಪರಿಣಿತಿ ಚೋಪ್ರಾ ಕಳೆದ ವರ್ಷ ಸೆಪ್ಟೆಂಬರ್ 24ರಂದು ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಮದುವೆಯಾಗಿದ್ದಾರೆ. ಆಗಾಗ ಪರಿಣಿತಿ ಪತಿ ಜೊತೆಗಿರುವ ಫೋಟೋ ಹಂಚಿಕೊಳ್ತಾರೆ. ರಾಘವ್ ಚಡ್ಡಾ ಫೋನ್ ಹಿಡಿದು ಕುಳಿತಿರುವ ಫೋಟೋವನ್ನು ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದರು.
ಮಾರ್ಟಿನ್‌ನಲ್ಲಿ ಧ್ರುವ ಸರ್ಜಾ ಹೀರೋನಾ ವಿಲನ್ನಾ?: ಕೆಜಿಎಫ್ ದಾಖಲೆ ಮುರಿಯುತ್ತಾ ಪ್ಯಾನ್ ಇಂಡಿಯಾ ಸಿನಿಮಾ?
ಪರಿಣಿತಿ ಚೋಪ್ರಾ ಕೊನೆಯದಾಗಿ ಅಮರ್ ಸಿಂಗ್ ಚಮ್ಕಿಲಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ರಜೆಯ ಮಜಾ ಆನಂದಿಸುತ್ತಿದ್ದಾರೆ. ಯುಕೆಯಲ್ಲಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ವಿಂಬಲ್ಡನ್ 2024 ರ ಫೈನಲ್‌ನಲ್ಲಿ ತಮ್ಮ ಪತಿ ರಾಘವ್ ಚಡ್ಡಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ ಪರಿಣಿತಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಯುಕೆ ರಸ್ತೆಗಳಲ್ಲಿ ನಡೆದಾಡುವ ವಿಡಿಯೋ, ಫೋಟೋಗಳನ್ನು ಕೂಡ ಅವರು ಪೋಸ್ಟ್ ಮಾಡಿದ್ದರು. ಪರಿಣಿತಿ ಪತಿ ರಾಘವ್ ಚಡ್ಡಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಯುಕೆಯಲ್ಲಿ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಹಾಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಗೈರಾಗಿದ್ದರು.