ಅತಂತ್ರ ಸ್ಥಿತಿಯಲ್ಲಿ ದರ್ಶನ್ ನಂಬಿದ ನಿರ್ಮಾಪಕರು: ಕೋಟಿ ಕೋಟಿ ಹಾಕಿ ಹಣ ಕೈ ಸುಟ್ಟುಕೊಂಡ್ರಾ?

ದರ್ಶನ್ ನಂಬಿ ಹಲವು ನಿರ್ಮಾಪಕರು ಅವರ ಮುಂದಿನ ಸಿನಿಮಾಗಳಿಗೆ ಲಕ್ಷಾಂತರ ರುಪಾಯಿ ಅಡ್ವಾನ್ಸ್ ಕೊಟ್ಟಿದ್ದು ಇದೀಗ ದರ್ಶನ್ ಹೊರಗೆ ಪರದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.  ಡೆವಿಲ್  ನಿರ್ಮಾಪಕ  ಪ್ರಕಾಶ್, ಹಾಗೂ  ಕೆವಿನ್ ಪ್ರೊಡಕ್ಷನ್, ಎರಡೂ ಸಂಸ್ಥೆಗಳು ಇದೀಗ ಆ ಕಷ್ಟದಲ್ಲಿವೆ.
 

darshan film producers precarious situation here details gvd

ಯಾರ ಟೈಮ್ ಯಾವಾಗ ಹೇಗೆ ಬದಲಾಗುತ್ತೋ ದೇವರೇ ಬಲ್ಲ. ಸದ್ಯ ದರ್ಶನ್ 1 ತಿಂಗಳಿನಿಂದ ಜೈಲೂಟ ಮಾಡ್ತಿದ್ದಾರೆ. ರಾಜನಂತೆ ಮೆರೆಯುತ್ತಿದ್ದ ಹೀರೋ ಈಗ ಕೊಲೆ ಕೇಸಿನಲ್ಲಿ ಕತ್ತಲಕೋಣೆಯಲ್ಲಿ ಕಂಬಿ ಎಣಿಸುವಂತಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲದಲಿ ನಟ ದರ್ಶನ್ ಜೈಲು ಪಾಲು ಆಗ ಬರೋಬ್ಬರಿ 33 ದಿನಗಳಾಗಿವೆ. ಬೇಲ್ ಸಿಗೋದು ಕಷ್ಟ ಅಂತ ಈಗಾಗಲೆ ಸ್ಪಷ್ಟವಾಗಿ ಗೊತ್ತಾಗಿ ಹೋಗಿದೆ.  ತಾನಾಗಿ ತಾನು ತಂದು ಕೊಂಡ ಈ ಸ್ಥಿತಿಗೆ ಯಾರೇನು ಮಾಡಬಲ್ಲರು. ಆದರಿಲ್ಲಿ ಹೊಸಾ ಟ್ವಿಸ್ಟ್ ಸಿಕ್ಕಿದೆ ಅದು ದರ್ಶನ್ ಜೈಲು ಸೇರಿದ್ದರಿಂದ ಕನ್ನಡದ ಕೆಲ ನಿರ್ಮಾಪಕರ ಮೇಲಾಗಿರೋ ಎಫೆಕ್ಟ್.

ಹೌದು ದರ್ಶನ್ ನಂಬಿ ಹಲವು ನಿರ್ಮಾಪಕರು ಅವರ ಮುಂದಿನ ಸಿನಿಮಾಗಳಿಗೆ ಲಕ್ಷಾಂತರ ರುಪಾಯಿ ಅಡ್ವಾನ್ಸ್ ಕೊಟ್ಟಿದ್ದು ಇದೀಗ ದರ್ಶನ್ ಹೊರಗೆ ಪರದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.  ಡೆವಿಲ್  ನಿರ್ಮಾಪಕ  ಪ್ರಕಾಶ್, ಹಾಗೂ  ಕೆವಿನ್ ಪ್ರೊಡಕ್ಷನ್, ಎರಡೂ ಸಂಸ್ಥೆಗಳು ಇದೀಗ ಆ ಕಷ್ಟದಲ್ಲಿವೆ. ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್ ಈಗಾಗಲೆ ಶೇ 50 ರಷ್ಟು ಚಿತ್ರೀಕರಣ ಮುಗಿಸಿ ಉಳಿದ ಚಿತ್ರೀಕರಣಕ್ಕಾಗಿ  ದರ್ಶನ್ ಜೈಲಿನಿಂದ ಹೊರಬರುವುದಕ್ಕಾಗಿ ಕಾದು ಕುಂತಿದ್ದಾರೆ. ಈಗಾಗಲೆ ಸಿನಿಮಾ ಮೇಲೆ  30 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆನ್ನಲಾಗಿದೆ. ಹಾಗೇಯೆ ಕೆವಿಎನ್ ಪ್ರೊಡಕ್ಷನ್ ಜೋಗಿ ಪ್ರೇಮ್ ಕಾಂಬಿನೇಷನ್ ಮುಂದಿನ ಸಿನಿಮಾಗೆ ಅಡ್ವಾನ್ಸ್ ಪಡೆದಿದ್ದಾರೆನ್ನಲಾಗಿದ್ದು.. ಈಗ ಆ  ಹಣದ ಸಮಾಚಾರವೇನು ಎನ್ನುವಂತಾಗಿದೆ.

ಸದ್ದಿಲ್ಲದೆ ದರ್ಶನ್ ಭೇಟಿ ಮಾಡಿದ ತೆಲುಗಿನ ಖ್ಯಾತ ನಟ ನಾಗಶೌರ್ಯ: ಜೈಲಿನಲ್ಲಿ ನಡೆದ ಮಾತುಕತೆಯೇನು?

ಇನ್ನು ದರ್ಶನ್ಗೆ ಹೀಗೆ ಅಡ್ವಾನ್ಸ್ ಕೊಟ್ಟು ಈಗ ಕಂಗಾಲಾಗಿರೋ ನಿರ್ಮಾಪಕರ ಲಿಸ್ಟ್ನಲ್ಲಿ  ಇನ್ನೂ ಹಲವರಿದ್ದಾರೆ.ರಾಘವೇಂದ್ರ ಹೆಗಡೆ, ಕನ್ನಡದ ನಿರ್ಮಾಪಕ ಸೂರಪ್ಪ ಬಾಬು, ತಮಿಳಿನ ರಮೇಶ್, ಪಿ ಪಿಳ್ಲೈ, ತೆಲುಗಿನ ಪ್ರಸಾದ್ ದರ್ಶನ್ ಗೆ ಕೋಟಿ ಕೋಟಿ ಅಡ್ವಾನ್ ಹಣ ಕೊಟ್ಟ ಕಣ್ ಕಣ್ ಬಿಡುವ ಪರಿಸ್ಥಿತಿ ನಿರ್ಮಾಣವಾಘಿದೆಯಂತೆ. ಸುದೀಪ್ ಜೊತೆಗೆ ಕೋಟಿಗೊಬ್ಬ 3 ನಂತ್ರ ದರ್ಶನ್ ಸಿನಿಮಾ ಅನೌನ್ಸ್ ಮಾಡಿದ್ದರು ಸೂರಪ್ಪ ಬಾಬು ಈಗಾಗಲೇ ಈ ಚಿತ್ರಕ್ಕೆ ಎರಡು ಕೋಟಿ ಅಡ್ವಾನ್ಸ್ ಕೊಟ್ಟಿದ್ದಾರಂತೆ  ನಿರ್ಮಾಪಕ ಸೂರಪ್ಪ ಬಾಬು ಇನ್ನು ಕಳೆದ ವರ್ಷ ದರ್ಶನ್ ಗೆ ಒಂದು ಕೋಟಿ ಅಡ್ವಾನ್ಸ್ ಕೊಟ್ಟಿದ್ದಾರಂತೆ.

ತಮಿಳಿನ ಖ್ಯಾತ ನಿರ್ಮಾಪಕ ರಮೇಶ್ ಪಿ.ಪಿಳ್ಳೈ.ಡೆವಿಲ್ ಚಿತ್ರದ ಹೈದ್ರಾಬಾದ್ ಶೆಡ್ಯೂಲ್ ವೇಳೆ ಕತೆ  ಹೇಳಿಸುವಂತೆ ಹೇಳಿದ್ದರಂತೆ ದರ್ಶನ್.ಅಷ್ಟರಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ ದರ್ಶನ್.ಇದಲ್ಲದೆ ಎರಡು ವರ್ಷಗಳ ಹಿಂದೆ ದರ್ಶನ್ ಗೆ ಒಂದು ಕೋಟಿ ಅಡ್ವಾನ್ಸ್ ಮಾಡಿರುವ ನಿರ್ಮಾಪಕರೂ ಲಿಸ್ಟ್ನಲ್ಲಿದ್ದಾರಂತೆ.  ಈಗ ಈ ನಿರ್ಮಾಪಕರು ಕೋಟಿ ಗಳೆದುಕೊಂಡು ಕೈ ಹಿಸುಕಿಕೊಳ್ಳುತ್ತಿದ್ದಾರಂತೆ. ಮತ್ತೊಂದು ಕಡೆ ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ಗೆ ಜೈಲು ವಾಸ ಕಷ್ಟವಾಗಿದೆ. ಮನೆ ಊಟಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಈಗಾಗಲೆ ನಡೆದಿದ್ದು ‘ಅನಾರೋಗ್ಯದಂತಹ ವಿಶೇಷ ಸಂದರ್ಭದಲ್ಲಿ ಮಾತ್ರ ವಿಶೇಷ ಆಹಾರ ನೀಡಲು ಅವಕಾಶ ಇದೆ. 

ದಿನವೂ ಬಿರಿಯಾನಿ ತಿನ್ನಲು ನಿಯಮದಲ್ಲಿ ಅವಕಾಶವಿಲ್ಲ’ ಎಂದು ಪೊಲೀಸರ ಪರ ವಕೀಲರು ವಾದಿಸಿದ್ದಾರೆ. ಇದರ ತೀರ್ಪು ಜುಲೈ 25ಕ್ಕೆ ಬರಲಿದೆ. ‘ಸ್ಟಾರ್ ಎಂಬ ಕಾರಣಕ್ಕೆ ಕೈದಿಯ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹಾಗಾಗಿ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ‘ಸ್ಟಾರ್ ಎಂಬ ಕಾರಣಕ್ಕೆ ನಿರಾಕರಿಸುತ್ತಿಲ್ಲ. ಕೊಲೆ ಆರೋಪಿಯಾದ ಕಾರಣಕ್ಕೆ ನಿರಾಕರಿಸಬೇಕು’ ಎಂದು ಪೊಲೀಸರ ಪರ‌ ವಕೀಲರು ವಾದ ಮುಂದಿಟ್ಟರು. ಜೈಲು ಊಟದ‌ ಜೊತೆಗೆ ಹೆಚ್ಚಿನ ಪ್ರೊಟೀನ್ ಬೇಕು ಎಂದು ದರ್ಶನ್ ಕೇಳಿದ್ದಾರೆ. 

ಮಾರ್ಟಿನ್‌ನಲ್ಲಿ ಧ್ರುವ ಸರ್ಜಾ ಹೀರೋನಾ ವಿಲನ್ನಾ?: ಕೆಜಿಎಫ್ ದಾಖಲೆ ಮುರಿಯುತ್ತಾ ಪ್ಯಾನ್ ಇಂಡಿಯಾ ಸಿನಿಮಾ?

ವ್ಯಾಯಾಮ ಮಾಡುತ್ತಿರುವುದರಿಂದ‌ ಪ್ರೊಟೀನ್ ಬೇಕೆಂದು ಕೇಳಿದ್ದಾರೆ‌. ತಮ್ಮ ದೇಹದ ತೂಕ 10 ಕೆಜಿ ಇಳಿದಿದೆ, ಹೀಗಾಗಿ‌ ಮನೆ‌ ಊಟ ಬೇಕು ಎಂದು ಅವರು ಕೋರಿದ್ದಾರೆ. ‘ಜೈಲಿನಲ್ಲಿ ಇರುವವರಿಗೆ ಎಲ್ಲಾ‌ ಮೂಲಭೂತ ಹಕ್ಕು ಸಿಗುವುದಿಲ್ಲ. ಮೂಲಭೂತ ಹಕ್ಕಿನ‌ ಕೆಲ ಅಂಶಗಳು ಮಾತ್ರ ಸಿಗುತ್ತವೆ’ ಎಂದು ಸುಪ್ರೀಂ ಕೋರ್ಟ್ನ ತೀರ್ಪು ಉಲ್ಲೇಖಿಸಿ ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.ಚಾರ್ಲ್ಸ್‌ ಶೋಭರಾಜ್ ತೀರ್ಪಿನಲ್ಲೂ ಸಂಪೂರ್ಣ ಹಕ್ಕುಗಳಿಲ್ಲ ಎಂದು ಹೇಳಲಾಗಿದೆ. ಜೈಲು ಕೈಪಿಡಿಯಲ್ಲಿ‌ ಮನೆ‌ ಊಟಕ್ಕೆ ಅವಕಾಶವಿಲ್ಲ. ಬಡವ, ಶ್ರೀಮಂತ, ಹೀರೋ, ಸ್ಟಾರ್ ಎಲ್ಲರೂ ಸಮಾನರೇ. ಸಿನಿಮಾ ಸ್ಟಾರ್ ಎಂದು ತಾರತಮ್ಯ ಮಾಡುವಂತಿಲ್ಲ. ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಹೀಗಾಗಿ ಈ ಕೇಸಿನಲ್ಲಿ ಯಾವುದೇ ವಿಶೇಷ ವಿನಾಯಿತಿ ನೀಡದಂತೆ ಪ್ರಸನ್ನ ಕುಮಾರ್ ಮನವಿ ಮಾಡಿದರು.

Latest Videos
Follow Us:
Download App:
  • android
  • ios