ಹೆಂಡ್ತಿ ಬಗ್ಗೆ ಆನ್‌ಲೈನಲ್ಲೂ ಆಫ್‌ ಲೈನಲ್ಲೂ ಜೋಕ್‌ಗಳು ಕಾಮನ್. ಇದಕ್ಕೆ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಗಂಡನೂ ಹೊರತಲ್ಲ. ಆದರೆ ಗಂಡ ಹೊಡೆದ ಒಂದು ಜೋಕ್‌ಗೆ ಈ ನಟಿ ಮುಖ ಊದಿಸಿಕೊಂಡಿದ್ದಾರೆ. ಅಂಥದ್ದೇನು ಹೇಳಿದ್ರು ರಾಘವ್‌? 

ಆಪ್‌ ಕಿ ಅದಾಲತ್ ಸಖತ್ ಫೇಮಸ್ ಶೋ. ಇದರಲ್ಲಿ ಮ್ಯಾರೇಜ್‌, ಲೈಫು ಇಂಥದ್ದರ ಬಗೆಗೆಲ್ಲ ಲೈಟ್‌ ಹ್ಯೂಮರ್‌ನಿಂದ ಮಾತಾಡ್ತಾರೆ. ಈ ಶೋವನ್ನು ನಡೆಸಿಕೊಡೋದು ರಜತ್ ಶರ್ಮಾ. ಇದರಲ್ಲಿ ಈ ಬಾರಿ ಪಾಲ್ಗೊಂಡಿದ್ದು ಕೆಲ ಸಮಯದ ಹಿಂದೆ ಮದುವೆಯಾದ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಮತ್ತವಳ ಗಂಡ ರಾಘವ್‌ ಚಡ್ಡ. ಈ ಶೋನಲ್ಲಿ ರಾಘವ್ ಚಡ್ಡಾ ಆಡಿರುವ ಮಾತುಗಳು ಇದೀಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದಿಷ್ಟು ಮಂದಿ ಇದಕ್ಕೆ ತಗಾದೆ ತೆಗೆದಿದ್ದಾರೆ. 'ಹೆಂಡತಿ ಬಗೆಗೆ ಅದದೇ ಹಳಸಲು ಜೋಕ್‌ಗಳನ್ನು ಹೇಳುವ ಮೂಲಕ ರಾಘವ್ ಗೊಣಗೋ ಅಂಕಲ್‌ಗಳ ಪಾರ್ಟಿ ಸೇರಿದ್ದಾರೆ. ಅವರೂ ಒಬ್ಬ ಗೊಣಗೋ ಅಂಕಲ್ ಆಗಿ ಬದಲಾಗಿದ್ದಾರೆ' ಅಂತ ಒಂದಿಷ್ಟು ಮಂದಿ ಮಾತನಾಡುತ್ತಿದ್ದಾರೆ. ಅದರ ಜೊತೆಗೆ ಇವರ ಜೋಕ್‌ ಅನ್ನು ಕೆಲವರು ಎನ್‌ಜಾಯ್ ಸಹ ಮಾಡಿದ್ದಾರೆ. ಆದರೆ ಅನಾದಿ ಕಾಲದಿಂದಲೂ ಹೆಂಡತಿ ಬಗ್ಗೆ ಜೋಕ್ ಮಾಡೋ ಗಂಡಂದಿರಿಗೇನೂ ಕೊರತೆ ಇಲ್ಲ. 

ಸಾಮಾನ್ಯವಾಗಿ ಒಂದು ಜಾತಿಯನ್ನು, ವರ್ಗದವರನ್ನು ತಮಾಷೆ ಮಾಡಿದರೆ ಅದು ಅಫೆನ್ಸ್ ಅನಿಸಿಕೊಳ್ಳುತ್ತೆ. ಆದರೆ ಇದ್ಯಾವುದೂ ಅನ್ವಯ ಆಗದೇ ಇರೋದು ಹೆಂಡತಿಗೆ. ಹೆಂಡತಿ ಬಗ್ಗೆ ಜೋಕ್‌ ಮಾಡೋ ಅವಕಾಶ ಸಿಕ್ಕಾಗಲೆಲ್ಲ ಹೆಚ್ಚಿನ ಯಾವ ಗಂಡಸರೂ ಈ ಅವಕಾಶವನ್ನು ಮಿಸ್ ಮಾಡಲ್ಲ. ಇಂಥಾ ಜೋಕ್‌ಗಳನ್ನು 'ತಲೆ ಮಾಸಿದ ಅಂಕಲ್‌ಗಳ ಗೊಣಗಾಟ' ಅಂತ ಹೆಣ್ಮಕ್ಕಳು ಗೇಲಿ ಮಾಡ್ತಾರೆ. ಆದರೆ ಇದೆಲ್ಲ ಅಂಥಾ ಸೆನ್ಸಿಟಿವ್ ಆಗಿಲ್ಲದೇ ಇರುವ ಮಂದಿಗೆ ಹೆಚ್ಚೇನೂ ತಾಗೋದಿಲ್ಲ. ಬಹುಶಃ ರಾಘವ್ ಚಡ್ಡಾನೂ ಇದಕ್ಕೆ ಹೊರತಾಗಿಲ್ಲ ಅನ್ನೋ ಮಾತನ್ನು ಸೋಷಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಹೆಣ್ಮಕ್ಕಳು ಕಾಮೆಂಟ್ ಮೂಲಕ ಹೇಳುತ್ತ ಇದ್ದಾರೆ. 

ರಾಘವ್ ಚಡ್ಡಾ ಒಬ್ಬ ರಾಜಕಾರಣಿಯಾಗಿ ಗುರುತಿಸಿಕೊಂಡವರು. ಸಾಕಷ್ಟು ಸಮಯ ಪರಿಣಿತಿ ಚೋಪ್ರಾ ಜೊತೆಗೆ ಓಡಾಡಿ ಆ ಬಳಿಕ ಪಬ್ಲಿಕ್‌ನಲ್ಲಿ ಕಾಣಿಸಿಕೊಂಡು ಆಮೇಲೆ ಎಂಗೇಜ್‌ಮೆಂಟ್, ಮದುವೆ ಎಲ್ಲ ಆದಮೇಲೆ ಇದೀಗ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಓಲ್ಡ್‌ ಕಪಲ್ ಕೂಡ ಆಗಿದ್ದಾರೆ ಅನ್ನೋದಕ್ಕೆ ಅವರು ರಜತ್ ಕಾರ್ಯಕ್ರಮದಲ್ಲಿ ಆಡಿದ ಮಾತುಗಳೇ ಸಾಕ್ಷಿ. ಅಲ್ಲಿ ಆರಂಭದಲ್ಲೇ ರಜತ್ ಪರಿಣೀತಿ ಮತ್ತು ರಾಘವ್ ಜೋಡಿಯನ್ನು ಮಾತಾಡಿಸಿದೆ. 'ಹೇಗಿದೆ ಮ್ಯಾರೀಡ್ ಲೈಫ್‌?' ಅಂತ ಕೇಳಿದ್ದಾರೆ. ಅದಕ್ಕೆ ರಾಘವ್, 'ಅವಳು ಖುಷಿಯಾಗಿದ್ದಾಳೆ, ನಾನು ಮದುವೆ ಆಗಿದ್ದೀನಿ' ಅನ್ನೋ ಮಾತನ್ನು ಆಡಿ ಶುರುವಲ್ಲೇ ಹೆಂಡತಿ ಮುಖ ಊದಿಸುವಂತೆ ಮಾಡಿದ್ದಾರೆ. ಅವರ ಹೆಂಡತಿಯನ್ನು ಅಪಹಾಸ್ಯ ಮಾಡೋ ಮಾತುಗಳು ರಾಜಕೀಯ ಭಾಷಣದ ಹಾಗೆ ಓತಪ್ರೋತವಾಗಿ ಮುಂದುವರಿದಿದೆ. ಇತ್ತ ಪರಿಣಿತಿ ದುರುಗುಟ್ಟಿ ಗಂಡನನ್ನು ನೊಡೋದು ಜೋರಾಗಿದೆ. ಆದರೆ ಆಕೆಯ ಉರಿ ನೋಟವನ್ನೂ ಲೆಕ್ಕಿಸದೇ ರಾಘವ್ ಜೋಕ್ ಮಾಡುತ್ತಲೇ ಹೋಗಿದ್ದಾರೆ. 'ಜಗಳ ಆದಾಗ ನಾನು ಕಾಂಪ್ರಮೈನ್‌ ಮಾಡಿಕೊಳ್ತೀನಿ. ನನ್ನ ತಪ್ಪನ್ನು ಅವಳು ಅಂಗೀಕರಿಸುತ್ತಾಳೆ' , 'ಹ್ಯಾಪಿ ವೈಫ್‌, ಹ್ಯಾಪಿ ಲೈಫ್‌', 'ಮದುವೆಯಲ್ಲಿ ಒಬ್ಬ ವ್ಯಕ್ತಿ ಹೇಳಿದ್ದು ಯಾವಾಗಲೂ ಸರಿಯಾಗಿರುತ್ತದೆ, ಮತ್ತೊಬ್ಬ ವ್ಯಕ್ತಿ ಗಂಡ ಆಗಿರ್ತಾನೆ'.. ಈ ಥರ ರಾಘವ್ ಜೋಕ್ ಹಾರಿಸಿ ಹೆಂಡತಿ ಮಾತ್ರ ಅಲ್ಲ, ಸುಮಾರು ಜನ ಹೆಂಗಸರ ಕೆಂಗಣ್ಣಿಗೂ ತುತ್ತಾಗಿದ್ದಾರೆ. 

ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ವೇಳೆ ದುರ್ಘಟನೆ, ನಟ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯ!

ಆದರೆ ಪರಿಣಿತಿ ಗುರಾಯಿಸಿಕೊಂಡು ನೋಡುತ್ತಿದ್ದದ್ದನ್ನು ನೋಡಿ ಒಂದಿಷ್ಟು ಮಂದಿ, 'ಮಗ್ನೇ, ಮಾತಾಡು ಮಾತಾಡು, ಮನೆಗೆ ಹೋದ್ಮೇಲೆ ನಿಂಗೈತೆ..' ಅಂತಿದ್ದಾರೆ. ಒಟ್ಟಿನಲ್ಲಿ ರಾಘವ್ ಚಡ್ಡಾ ಅವರ ಈ ಬಗೆಯ ಮಾತನ್ನು ಇಲ್ಲೀವರೆಗೆ ಕೇಳಿಲ್ಲದ ನೆಟ್ಟಿಗರು, 'ರಾಜಕೀಯ ಭಾಷಣಕ್ಕಿಂತ ಇದು ಪರವಾಗಿಲ್ಲ' ಅಂತ ಕಾಮೆಂಟ್ ಮಾಡ್ತಿದ್ದಾರೆ. 

ಮೆಹಂದಿ ನೋಡಿಯೇ, ಶೋಭಿತಾ- ನಾಗಚೈತನ್ಯ ದಾಂಪತ್ಯ ಜೀವನ ಡಿಸೈಡ್‌ ಮಾಡಿಬಿಟ್ರಲ್ಲಾ ನೆಟ್ಟಿಗರು!

ಒಟ್ಟಾರೆ ಹೊರಗೆ ಎಂಥಾ ಸೆಲೆಬ್ರಿಟಿಯಾದ್ರೂ ಮನೆಯಲ್ಲಿ ಬಡಪಾಯಿ ಗಂಡ ಅನ್ನೋ ಹೊಸ ಗಾದೆ ಈ ರಾಘವ್ ಮಾತಿಂದ ಸೃಷ್ಟಿಯಾಗೋ ಎಲ್ಲ ಲಕ್ಷಣ ಕಾಣ್ತಿದೆ.

View post on Instagram