ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ವೇಳೆ ದುರ್ಘಟನೆ, ನಟ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯ!
ಬಾಲಿವುಡ್ ಚಿತ್ರ ಹೌಸ್‌ಫುಲ್ 5 ಶೂಟಿಂಗ್ ವೇಳೆ ನಟ ಅಕ್ಷಯ್ ಕುಮಾರ್ ಗಾಯಗೊಂಡಿದ್ದಾರೆ. ಅಕ್ಷಯ್ ಕುಮಾರ್ ಸ್ಟಂಟ್ ಶೂಟಿಂಗ್ ವೇಳೆ ಕಣ್ಣಿಗೆ ಗಾಯವಾಗಿದೆ.
ಮುಂಬೈ(ಡಿ.12) ಬಾಲಿವುಡ್ ನಟ ಅಕ್ಷಯ್ ಕುಮಾರ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಹಲವು ಸ್ಟಾರ್ಸ್ ಅಭಿನಯಿಸುತ್ತಿರುವ ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಅಕ್ಷಯ್ ಕುಮಾರ್ ಖುದ್ದಾಗಿ ಸ್ಟಂಟ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯವಾಗಿದೆ. ತಕ್ಷಣವೇ ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿ ಚಿಕಿತ್ಸೆ ನೀಡಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಸ್ಟಂಟ್ ಶೂಟಿಂಗ್ ಸ್ಛಗಿತಗೊಳಿಸಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಆದರೆ ಹೌಸ್‌ಫುಲ್ ಚಿತ್ರದ ಪ್ರೊಡಕ್ಷನ್ ಹೌಸ್ ನಾಡಿಯಾದ್‌ವಾಲ್ ಗ್ರ್ಯಾಂಡ್‌ಸನ್, ಈ ಕುರಿತು ಸ್ಪಷ್ಟನೆ ನೀಡಿದೆ. ಹೌಸ್‌ಫುಲ್ 5 ಶೂಟಿಂಗ್ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಅಕ್ಷಯ್ ಕುಮಾರ್ ಗಾಯಗೊಂಡಿರುವ ಮಾಹಿತಿಯನ್ನು ಅಲ್ಲಗೆಳೆದಿಲ್ಲ.
ಬಾಲಿವುಡ್‌ನ ಬಹುನಿರೀಕ್ಷಿತ ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ನಡೆಯುತ್ತಿದೆ.ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್,ಜಾಕ್ವಲಿನ್ ಫರ್ನಾಂಡಿಸ್, ಶ್ರೇಯಸ್ ತಲಪಾಡೆ,ನರ್ಗಿಸ್ ಫಾಖ್ರಿ ಸೇರಿದಂತೆ ಹಲವು ಸ್ಟಾರ್ಸ್ಟ್ ಈ ಚಿತ್ರದಲ್ಲಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದೆ. ಇದೀಗ ಮುಂಬೈನಲ್ಲಿ ಅಂತಿಮ ಹಂತದ ಶೂಟಿಂಗ್‌ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಅಕ್ಷಯ್ ಕುಮಾರ್ ಅದೆಂತಾ ಅಪಾಯಕಾರಿ ಸ್ಟಂಟ್ ಇದ್ದರೂ ತಾವೇ ಖುದ್ದಾಗಿ ಮಾಡುತ್ತಾರೆ. ಇದೇ ರೀತಿ ಸ್ಟಂಟ್ ಶೂಟಿಂಗ್ ಮಾಡುವಾಗ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಕ್ಷಯ್ ಕುಮಾರ್ ಜೊತೆ ಸಂಬಂಧದ ಸುದ್ದಿ ಕೇಳಿ ಆಕ್ರೋಶಗೊಂಡಿದ್ದ ಐಶ್ವರ್ಯ ರೈ!
ಸ್ಟಂಟ್ ಮಾಡುತ್ತಿದ್ದಂತೆ ಕಣ್ಣಿಗೆ ಗಾಯವಾಗಿದೆ. ತಕ್ಷಣವೇ ತಜ್ಞ ವೈದ್ಯರ ತಂಡ ಸ್ಥಳಕ್ಕೆ ಆಗಮಿ ಅಕ್ಷಯ್ ಕುಮಾರ್‌ಗೆ ಚಿಕಿತ್ಸೆ ನೀಡಿದೆ. ಕೆಲ ದಿನಗಳ ಕಾಲ ಶೂಟಿಂಗ್‌ನಿಂದ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರೆ. ಅಕ್ಷಯ್ ಕುಮಾರ್ ಗಾಯಗೊಂಡ ಕಾರಣ ಸ್ಟಂಟ್ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.ಆದರೆ ಇತರ ನಟ ನಟಿಯರ ಭಾಗಗಳನ್ನು ಚಿತ್ರೀಕರಣ ಮುಂದುವರಿಸಲಾಗಿದೆ. ಅಕ್ಷಯ್ ಕುಮಾರ್ ಕಣ್ಣಿಗೆ ಗಾಯವಾಗಿದೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಕೆಲ ದಿನಗಳ ವಿಶ್ರಾಂತಿ ಬಳಿಕ ಅಕ್ಷಯ್ ಕುಮಾರ್ ಶೀಘ್ರದಲ್ಲೇ ಶೂಟಿಂಗ್‌ಗೆ ಮರಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಶೂಟಿಂಗ್‌ಗಾಗಿ ಸೆಟ್ ಹಾಕಲಾಗಿದೆ. ಈ ಸೆಟ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಕ್ಷಯ್ ಕುಮಾರ್ ಕಣ್ಣಿಗೆ ಗಾಯಗೊಂಡರೂ ಶೂಟಿಂಗ್‌ನಲ್ಲಿ ಮುಂದುವರಿಯಲು ಆಸಕ್ತಿ ತೋರಿದ್ದಾರೆ. ಕಾರಣ ಶೂಟಿಂಗ್ ಸ್ಥಗಿತಗೊಳಿಸಿದರೆ ಚಿತ್ರ ಮತ್ತಷ್ಟು ವಿಳಂಬವಾಗಲಿದೆ. ತಕ್ಕ ಸಮಯಕ್ಕೆ ಚಿತ್ರ ಬಿಡುಗಡೆಯಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಅನ್ನೋ ಕಾರಣಕ್ಕೆ ಅಕ್ಷಯ್ ಕುಮಾರ್ ಶೂಟಿಂಗ್ ಮುಂದುವರಿಸಲು ಬಯಸಿದ್ದಾರೆ. ಆದರೆ ವೈದ್ಯರು ಹಾಗೂ ಚಿತ್ರತಂಡ ವಿಶ್ರಾಂತಿಗೆ ಸೂಚಿಸಿದ ಕಾರಣ ಅನಿವಾರ್ಯವಾಗಿ ಅಕ್ಷಯ್ ಕುಮಾರ್ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದಾರೆ.
ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ಯೂರೋಪ್ ಸೇರಿದಂತೆ ಹಲವು ಭಾಗದಲ್ಲಿ ಮಾಡಲಾಗಿದೆ. ಇನ್ನು ಹಡಗಿನಲ್ಲಿ 40 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.