ಮೆಹಂದಿ ನೋಡಿಯೇ, ಶೋಭಿತಾ- ನಾಗಚೈತನ್ಯ ದಾಂಪತ್ಯ ಜೀವನ ಡಿಸೈಡ್ ಮಾಡಿಬಿಟ್ರಲ್ಲಾ ನೆಟ್ಟಿಗರು!
ಮೆಹಂದಿ ನೋಡಿಯೇ, ಶೋಭಿತಾ- ನಾಗಚೈತನ್ಯ ದಾಂಪತ್ಯ ಜೀವನ ಡಿಸೈಡ್ ಮಾಡಿಬಿಟ್ರಲ್ಲಾ ನೆಟ್ಟಿಗರು! ಮೆಹಂದಿ ಟ್ರೋಲ್ ಆಗ್ತಿರೋದ್ಯಾಕೆ?
ಶೋಭಿತಾ ಧೂಳಿಪಾಳ ಮತ್ತು ನಟ ನಾಗ ಚೈತನ್ಯ ನಡುವಿನ ಪ್ರೀತಿ, ಪ್ರೇಮ, ಮದುವೆ ಎಲ್ಲಾ ಸುದ್ದಿಗಳಿಗೂ ತೆರೆ ಬಿಟ್ಟಿದೆ. ಡಿಸೆಂಬರ್ 4 ರಂದು ಜೋಡಿ ವಿವಾಹ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದೆ. ತೆಲುಗು ಹುಡುಗಿ ಶೋಭಿತಾ ಧೂಳಿಪಾಳ ಅಕ್ಕಿನೇನಿ ಕುಟುಂಬದ ಸೊಸೆಯಾಗಿದ್ದಾರೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಈ ಜೋಡಿ ರಿಲೇಷನ್‌ಶಿಪ್‌ನಲ್ಲಿದ್ದರೂ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಬಳಿಕ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ನಾಗಾರ್ಜುನ ನಿವಾಸದಲ್ಲಿ ಅತ್ಯಂತ ಸರಳವಾಗಿ ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥ ನೆರವೇರಿತು. ಇದೀಗ ಸರಳವಾಗಿಯೇ ಮದುವೆ ನಡೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರೀತಿಸಿ ಮದುವೆಯಾದ ಸಮಂತಾಗೆ ವಿಚ್ಛೇದನ ನೀಡಿದ ನಂತರ ಶೋಭಿತಾ ಜೊತೆ ಏಳು ಹೆಜ್ಜೆ ಹಾಕಿದ್ದಾರೆ ನಾಗ ಚೈತನ್ಯ.
ಆದರೆ ಇದರ ಮಧ್ಯೆಯೇ, ಈ ಮದುವೆ, ನಾಗ ಚೈತನ್ಯ ಅವರ ಮೊದಲ ಪತ್ನಿ ನಟಿ ಸಮಂತಾ ಅವರ ಅಭಿಮಾನಿಗಳಿಗೆ ಕಿರಿಕಿರಿ ತರಿಸಿದೆ. ಇಂಥ ಸುಂದರ, ಒಳ್ಳೆಯ, ಬಂಗಾರದ ಪತ್ನಿಯನ್ನು ಬಿಟ್ಟು ಅವರು ಬೇರೊಬ್ಬಳ ಕೈ ಹಿಡಿದಿರುವುದು ಸರಿಯಲ್ಲ ಎಂದೇ ಹೇಳಲಾಗುತ್ತಿದೆ. ಸಮಂತಾ ಕೂಡ ಈ ಬಗ್ಗೆ ನೋವು ಕೂಡ ತೋಡಿಕೊಂಡಿದ್ದರೂ, ಈಗ ಮೌನಕ್ಕೆ ಜಾರಿದ್ದಾರೆ. ಆದರೆ ಇದೀಗ ಸಮಂತಾ ಅಭಿಮಾನಿಗಳು ಸೇರಿದಂತೆ ಹಲವು ನೆಟ್ಟಿಗರ ಕಣ್ಣು ಶೋಭಿತಾ ಅವರ ಮೆಹಂದಿಯ ಮೇಲೆ ಹೋಗಿದೆ! ಹೌದು. ಸಾಮಾನ್ಯವಾಗಿ ಒಂದು ಮಾತಿದೆ. ಅದೇನೆಂದರೆ, ಮದುವೆ ಸಮಯದಲ್ಲಿ ಮೆಹಂದಿಯ ಬಣ್ಣ ಎಷ್ಟು ಗಾಢವಾಗಿ ಬರುತ್ತದೆಯೋ ಅಷ್ಟು ಗಾಢವಾಗಿ ಗಂಡ ಪ್ರೀತಿಸುತ್ತಾನೆ ಎಂದು. ಇದು ತಲೆ ತಲಾಂತರಗಳಿಂದ ಬಂದಿರುವ ಮಾತು. ಇದು ಕೇವಲ ಮಾತಷ್ಟೇ ಎನ್ನುವುದು ನಿಜವಾದರೂ ಈ ಮದುವೆಯನ್ನು ಸಹಿಸದವರು, ಶೋಭಿತಾ ಅವರ ಡಲ್ ಆಗಿರುವ ಮೆಹಂದಿ ನೋಡಿ ನಿಮ್ಮ ಭವಿಷ್ಯ ಗೊತ್ತಾಯ್ತು ಬಿಡಿ ಎನ್ನುತ್ತಿದ್ದಾರೆ!
ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್ ಕುರಿತು ಬಾಲಿವುಡ್ ನಟಿ ಹೇಳಿದ್ದೇನು?
ಮದುವೆಯ ಸಂದರ್ಭದಲ್ಲಿ ಸಾಕಷ್ಟು ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣುತ್ತಿದ್ದ ಶೋಭಿತಾ ಅವರಿಗೆ ಹಚ್ಚಿದ್ದ ಮೆಹಂದಿ ಮಾತ್ರ ಯಾಕೋ ಕಲರ್‍ಫುಲ್ ಆಗಿರಲಿಲ್ಲ. ಅದು ಮಸುಕು ಬಣ್ಣ ಬಿಟ್ಟಿದೆ. ಇದೇ ಕಾರಣಕ್ಕೆ ಮೆಹಂದಿ ಈಗ ಟ್ರೋಲ್ ಆಗುತ್ತಿದೆ. ಮೊದಲ ಪತ್ನಿಗೆ ಕೈಕೊಟ್ಟಂತೆ ನಿಮ್ಮ ಜೀವನದ ಕಥೆಯೂ ಆಗುತ್ತದೇ ಎಂದೇ ನೆಗೆಟಿವ್ ಆಗಿ ಹೇಳುತ್ತಿದ್ದಾರೆ ನೆಟ್ಟಿಗರು.
ಇನ್ನು ಶೋಭಿತಾ ಅವರ ಕುರಿತು ಹೇಳುವುದಾದರೆ, ಶೋಭಿತಾ ಅವರಿಗೆ ವೃತ್ತಿಜೀವನದ ಆರಂಭದಲ್ಲಿ ಹಲವಾರು ಅವಮಾನಗಳನ್ನು ಎದುರಿಸಬೇಕಾಯಿತಂತೆ. ನೀನು ಸುಂದರಿಯಲ್ಲ, ನೀನು ಮಾಡೆಲ್ ಆಗಲು ಯೋಗ್ಯರಲ್ಲ ಎಂದು ಅವಮಾನಿಸಿದ್ದಾರಂತೆ. ನಾನು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರೀತಿ ನಾಗ ಚೈತನ್ಯ ರೂಪದಲ್ಲಿ ಸಿಕ್ಕಿತು. ಅವರು ಪತಿಯಾಗಿ ಬಂದಿದ್ದು ನನ್ನ ಅದೃಷ್ಟ. ನಾಗ ಚೈತನ್ಯ ಅವರ ಸರಳತೆ, ದಯೆ, ಕಾಳಜಿ ನನಗೆ ತುಂಬಾ ಇಷ್ಟ ಎಂದಿದ್ದರು ಅವರು. ಶೋಭಿತಾ ಬಾಲಿವುಡ್‌ನಲ್ಲಿ ನಾಯಕಿಯಾಗಿ ಪರಿಚಯವಾದರು. ತೆಲುಗಿನಲ್ಲಿ ಶೋಭಿತಾ ಕೇವಲ ಎರಡು ಚಿತ್ರಗಳನ್ನು ಮಾಡಿದ್ದಾರೆ. ಗೂಢಚಾರಿ, ಮೇಜರ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಹೆಂಗಿದ್ದ ವೈಷ್ಣವಿ ಗೌಡ ಕೈಗೆ ದುಡ್ಡು ಬಂದ ಮೇಲೆ ಹೆಂಗಾಗೋದ್ಲು ನೋಡಿ! 'ಸೀತಾ' ಫೋಟೋ ವೈರಲ್