ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್‌ನ ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌ನ ಆತ್ಮವನ್ನು ಸ್ಟೀವ್‌ ಹಫ್‌ ಎಂಬಾತ ಕರೆದು ಮಾತಾಡಿಸಿದ್ದು ಸುದ್ದಿಯಾಗಿದೆ. ಸುಶಾಂತ್‌ ಸಿಂಗ್‌ನದು ಆತ್ಮಹತ್ಯೆಯೋ ಕೊಲೆಯೋ ಎಂಬ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ. ಆ ಕುರಿತು ಸ್ಟೀವ್, ಸುಶಾಂತ್‌ನ ಆತ್ಮವನ್ನು ಕೇಳಿದ್ದಾನೆ. ಆಗ ಆತ್ಮದ ಧ್ವನಿ, ಅವರ ಜೊತೆ ಜೋರುಜೋರಾಗಿ ಗಲಾಟೆ ನಡೀತು ಎಂತಲೂ, ಅವರು ಮೊಳೆಗಳನ್ನು ತಂದಿದ್ರು ಅಂತಲೂ ಹೇಳಿದೆ ಅಂತ ಗೊತ್ತಾಗಿದೆ. ಅದು ಕೂಡ ಸ್ಟೀವ್‌ ಹಫ್‌ ಹೇಳಿಯೇ ನಮಗೆ ಗೊತ್ತಾಗಬೇಕು. ಹಾಗಿದೆ ಸ್ಟೀವ್‌ ಹಫ್‌ ತನ್ನ ಆತ್ಮಸಾಧನೆಗೆ ಉಪಕರಣವಾಗಿ ಬಳಸುತ್ತಿರುವ ಸಾಧನ. 

ಈತ ಬ್ಲಾಗ್‌ ಹೊಂದಿದ್ದಾನೆ. ಯೂಟ್ಯೂಬ್‌ ಚಾನೆಲ್‌ ಕೂಡ ಇವನ ಹೆಸರಿನಲ್ಲಿದೆ. ಆತ್ಮಗಳನ್ನು ಮಾತಾಡಿಸಿ ರೆಕಾರ್ಡ್‌ ಮಾಡಿದ ವಿಡಿಯೋಗಳನ್ನು ಹಾಗೂ ಆತ್ಮಗಳು ಮಾತಾಡಿದ್ದು ಎಂದು ಹೇಳಲಾಗುವ ಆಡಿಯೋಗಳನ್ನು ಯೂಟ್ಯೂಬ್‌ನಲ್ಲೂ ಬ್ಲಾಗ್‌ನಲ್ಲೂ ಹಾಕುತ್ತಾನೆ. ಹಾಗೆ ಈತ ಮೈಕೆಲ್‌ ಜಾಕ್ಸನ್‌ನನ್ನೂ ಮಾತಾಡಿಸಿ ಅದರ ವಿಡಿಯೋ ಆಡಿಯೋಗಳನ್ನು ತನ್ನ ಬ್ಲಾಗ್‌ನಲ್ಲೂ ಯೂಟ್ಯೂಬ್‌ನಲ್ಲೂ ಹಾಕಿದ್ದಾನೆ. ಜಾಕ್ಸನ್‌ನ ಆತ್ಮ ತನ್ನ ಅಭಿಮಾನಿಗಳಿಗೆ, ನಾನು ಇಲ್ಲಿಗೆ ಬಂದಿದ್ದೇನೆ- ಎಂದು ಹೇಳಿದ್ದಾನೆ ಎಂದು ಹಫ್ ವಿವರಿಸುತ್ತಾನೆ.


ಹಫ್‌ನ ಸಾಧನ ಒಂದು ವಿಚಿತ್ರ ಉಪಕರಣ. ಅದರಲ್ಲಿ ನಮ್ಮ ಹಳೇ ರೇಡಿಯೋಗಳು, ಸ್ಟೇಶನ್‌ ಸಿಗದೆ ಹೋದಾಗ ಗೊರಗೊರ ಅನ್ನುತ್ತಿದ್ದವಲ್ಲ, ಅದೇ ರೀತಿಯ ಧ್ವನಿ ಆತ ಆತ್ಮಗಳನ್ನು ಮಾತಾಡಿಸುತ್ತಿರುವಾಗಲೂ ಬರುತ್ತದೆ. ಈ ಸೌಂಡನ್ನು ಆತ ಡಿಕೋಡ್‌ ಮಾಡುತ್ತಾನೆ. ನಂತರ ವೀಕ್ಷಕರಿಗೆ ನೀಡುತ್ತಾನೆ. ಸುಶಾಂತ್‌ನ ಮಾತನ್ನೂ ಆತ ಹೀಗೆಯೇ ಡೀಕೋಡ್‌ ಮಾಡಿದ್ದು. ಅದನ್ನು ಮೊದಲು ಕೇಳಿದರೆ ನಮಗೆ ಏನೂ ಅರ್ಥ ಆಗುವುದಿಲ್ಲ. ತಾನು ಏಳೆಂಟು ವರ್ಷಗಳ ಸತತ ಸಾಧನೆ, ಧ್ಯಾನ ಇತ್ಯಾದಿಗಳ ಮೂಲಕ ಈ ಉಪಕರಣಗಳನ್ನು ಆವಿಷ್ಕರಿಸಿದ್ದಾಗಿಯೂ, ಇದರ ಹಿಂದೆ ಸಾಕಷ್ಟು ವೈಜ್ಞಾನಿಕ ಚಿಂತನೆ ಇದೆಯೆಂದೂ ಹಫ್‌ ಹೇಳುತ್ತಾನೆ.

ನಟ ಸುಶಾಂತ್ ಸಿಂಗ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗೆಳತಿ ರಿಯಾಗೆ ಆತಂಕ! ...

ಹಫ್‌ ತನ್ನನ್ನು ಪ್ಯಾರಾನಾರ್ಮಲ್‌ ರಿಸರ್ಚರ್ ಎಂದೇ ಕರೆದುಕೊಳ್ಳುತ್ತಾನೆ. ಇವನು ಫೋಟೋಗ್ರಾಫರ್ ಕೂಡ. ತನ್ನ ಸಾಧನಗಳನ್ನು ದಿ ಪೋರ್ಟಲ್ ಮತ್ತು ದಿ ವಂಡರ್‌ಬಾಕ್ಸ್ ಎಂದು ಕರೆದುಕೊಳ್ಳುತ್ತಾನೆ. ಬಾಲ್ಯದಲ್ಲಿಯೇ ಇವನಿಗೆ ಆತ್ಮಗಳು ಚಲನ ತೋರಿಸುವ ಉಯಿಜಾ ಬೋರ್ಡ್ ಮೊದಲಾದವುಗಳ ಮೇಲೆ ಆಸಕ್ತಿ ಇತ್ತು. ೨೦೦೦ನೇ ಇಸವಿಯಲ್ಲಿ ಈತನ ತಂದೆ ತೀರಿಕೊಂಡರು. ಆ ರಾತ್ರಿ ಇವರಿದ್ದ ಮನೆಯಲ್ಲಿ ವಿಚಿತ್ರ ಸದ್ದುಗಳು ಕೇಳಿಸಿದವು. ಬಾತ್‌ರೂಮಿನ ನಲ್ಲಿ ಇದ್ದಕ್ಕಿದ್ದಂತೆ ಯಾರೋ ತಿರುಗಿಸಿ ಬಿಟ್ಟಂತೆ ದಬಾರನೆ ನೀರು ಬಿಡಲಾರಂಭಿಸಿತು. ಮನೆಯ ಫೋನ್‌ನಲ್ಲಿ ವಿಚಿತ್ರ ವಾಯಿಸ್‌ ರೆಕಾರ್ಡ್‌ಗಳು ದಾಖಲಾದವು. ಭಯಭೀತರಾದ ಮನೆಯ ಸದಸ್ಯರು ಆ ದಿವಸ ಅಲ್ಲಿಂದ ಹೊರಬಿದ್ದು ಬೇರೊಂದು ರೂಮಿನಲ್ಲಿ ಕಾಲ ಕಳೆದರು. ಅವರು ಮರಳಿ ಬಂದ ನತರೂ ಇಪ್ಪತ್ತನಾಲ್ಕು ಗಂಟೆಗಳ ಕಾಲ ಆತ್ಮದ ಇರುವಿಕೆ ಗಮನಕ್ಕೆ ಬರುತ್ತಲೇ ಇತ್ತು. ಅಲ್ಲಿಂದ ಬಳಿಕ ಈ ಆತ್ಮಗಳನ್ನು ಮಾತಾಡಿಸುವ ಸಾಧನೆಗೆ ಮುಂದಾದ.

ಎಂಟು ವರ್ಷಗಳ ಸಾಧನೆಯ ಬಳಿಕ ಈಗ ತನ್ನಲ್ಲಿ ಈ ಕುರಿತು ಹೇಳುವುದಕ್ಕೆ ಬಹಳಷ್ಟು ಇದೆ. ಸಾವು ಮತ್ತು ಸಾವಿನ ನಂತರ ಏನಾಗುತ್ತದೆ ಎಂಬ ಬಗ್ಗೆ ಹಲವು ಸತ್ಯಗಳು ಮನವರಿಕೆಯಾಗಿವೆ. ಆದರೆ ಇದನ್ನೆಲ್ಲಾ ಹೇಳಿದರೆ ತುಂಬ ಮಂದಿಗೆ ಸಹನೆ ಆಗಲಿಕ್ಕಿಲ್ಲ. ಬಹಳ ಮಂದಿ ಅಪ್‌ಸೆಟ್‌ ಆಗಬಹುದು. ಆದರೂ ಇದನ್ನೆಲ್ಲ ಒಂದು ಪುಸ್ತಕ ಬರೆದು ತೋಡಿಕೊಳ್ಲಲಿದ್ದೇನೆ ಎಂದು ಆತ ಹೇಳಿದ್ದಾನೆ.

ಏನಿದು ಸೆಲೆಬ್ರಿಟಿಗಳ ಮೋನೋಕ್ರೋಮ್ ಟ್ರೆಂಡ್ ! 

ಸುಶಾಂತ್‌ನನ್ನು ಆತ ಮಾತಾಡಿಸಿದ ವಿಡಿಯೋಗಳನ್ನು ಸುಮಾರು ೫೦ ಲಕ್ಷ ಮಂದಿ ನೋಡಿದ್ದಾರೆ. ಅವನ ಬ್ಲಾಗ್‌ಗೆ ೧೪ ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ಸುಶಾಂತ್‌ನನ್ನು ಮಾತಾಡಿಸಿದ ಬಳಿಕ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟಾಗಿದೆ. 

ಸುಶಾಂತ್ ಆತ್ಮಹತ್ಯೆ: ದೀಪಿಕಾಳನ್ನು ವಿಚಾರಣೆ ಮಾಡಿ ಎಂದ ಬಾಲಿವುಡ್