ಯಾರು ಮೊದಲು ಶುರು ಮಾಡಿದರೋ ಗೊತ್ತಿಲ್ಲ. ಎಲ್ಲಿಂದ ಶುರುವಾಯಿತೋ ತಿಳಿಯದು. ಬಹುಶಃ ಲಾಲ್‌ಏಂಜಲೀಸ್‌ನ ಹಾಲಿವುಡ್‌ನ ಸ್ಟುಡಿಯೋಗಳಿಂದ ಹುಟ್ಟಿದ್ದರೂ ಹುಟ್ಟಿರಬಹುದು. ಅಥವಾ ಮುಂಬಯಿಯ ಬಾಂದ್ರಾ ಬ್ಯಾಂಡ್‌ ಸ್ಟಾಂಡ್‌ ಸ್ಟುಡಿಯೋಗಳಿಂದ ಬಂದಿದ್ದರೂ ಬಂದಿರಬಹುದು. ಇನ್‌ಸ್ಟಗ್ರಾಮ್‌ನ ತುಂಬ ಮೋನೋಕ್ರೋಮ್‌ ಫೋಟೋಗಳದೇ ಸುಗ್ಗಿ. ಸಾಲಾಗಿ ಕಪ್ಪು- ಬಿಳಿ ಫೋಟೋಗಳ ಸರದಿ. 

ಮೋನೋಕ್ರೋಮ್‌ ಅಂದರೆ ಒಂದೇ ಕಲರ್‌ ಅಂತ ಅರ್ಥ. ಐಸ್‌ ಬಕೆಟ್‌ ಚಾಲೆಂಜ್‌, ಕವರ್ ಪೇಜ್‌ ಚಾಲೆಂಜ್‌ ಇರೋ ಥರಾ ಇದೂ ಒಂದು ಸೋಶಿಯಲ್‌ ಸೈಟ್‌ ಚಾಲೆಂಜ್‌. ಸೆಲೆಬ್ರಿಟಿಗಳು ತಮ್ಮದೊಂದು ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೋವನ್ನು ತಮ್ಮ ಅಕೌಂಟ್‌ನಲ್ಲಿ ಹಾಕುತ್ತಾರೆ. ನಂತರ ಅದಕ್ಕೆ ಇನ್ಯಾರನ್ನಾದರೂ ಟ್ಯಾಗ್‌ ಮಾಡಿ, ನೀವೂ ನಿಮ್ಮ ಒಂದು ಮೋನೋಕ್ರೋಮ್‌ ಫೋಟೋ ಹಾಕಿ ಎಂದು ಚಾಲೆಂಜ್‌ ಹಾಕುತ್ತಾರೆ. ಇದು ಹೀಗೇ ಮುಂದುವರಿದಿದೆ. ಸದಾ ಕಲರ್‌ ಕಲರ್‌ ದಿರಿಸು ಧರಿಸಿ ಮಿಂಚುವ, ಕೆಲವೊಮ್ಮೆ ಮೈಮೇಲೆ ಬಟ್ಟೆಯೇ ಇಲ್ಲದೆ ಫಳಫಳ ಮಿನುಗಿ ಪಡ್ಡೆ ಹುಡುಗರ ಹೃದಯಕ್ಕೆ ಬೆಂಕಿ ಇಡುವ ಈ ಸೆಲೆಬ್ರಿಟಿಗಳು ಬ್ಲ್ಯಾಕ್‌ ಆಂಡ್‌ ವೈಟ್‌ ಅಥವಾ ಸಿಂಗಲ್‌ ಕಲರ್‌ನಲ್ಲಿ ಕೂಲಾಗಿ ಕಾಣಿಸುವುದನ್ನು ನೋಡುವುದೇ ಒಂದು ಸೊಗಸು. 

ಪೋರ್ನ್ ತಾರೆ ರೆನೀ ಗ್ರೇಸಿ ಮತ್ತೆ ಕಾರ್‌ ರೇಸಿಗೆ ಬರ್ತಾಳಂತೆ! 

ಈ ಚಾಲೆಂಜ್‌ನಲ್ಲಿ ಪ್ರಮುಖ ತಾರೆಯರೆಲ್ಲ ಕಾಣಿಸಿಕೊಂಡಿದ್ದಾರೆ. ಈಗ ಕಂಪ್ಲೀಟ್ ವೇಗನ್‌ ಆಗಿರುವ ಶಿಲ್ಪಾ ಶೆಟ್ಟಿ ಕೈಯಲ್ಲೊಂದು ಕಪ್‌ ಹಿಡಿದುಕೊಂಡು ಶಾಲು ಹೊದ್ದುಕೊಂಡು ತುಟಿ ಮುಂದೆ ಚಾಚಿ ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್‌ ಮಗಳು ನೋವಾ ಜೊತೆ ಕೈ ಹಿಡಿದುಕೊಂಡು ಬೀಚ್‌ನಲ್ಲಿ ಹೆಜ್ಜೆ ಹಾಕುತ್ತ ಹಿಂದಿನಿಂದ ಫೋಟೋ ತೆಗೆಸಿ ಹಾಕಿಕೊಂಡಿದ್ದಾರೆ. ಬಿಳೀ ಡ್ರೆಸ್‌ನಲ್ಲಿರುವ ಸಾನಿಯಾ ಮಿರ್ಜಾ ತಮ್ಮ ತಲೆಕೂದಲನ್ನು ಮುಂಧಕ್ಕೆ ಹರಡಿಕೊಂಡು ಜಾರ್ಜಿಯಸ್ ಆಗಿ ಕಾಣಿಸುತ್ತಿದ್ದಾರೆ. ತಮನ್ನಾ ಭಾಟಿಯಾ ತಮ್ಮ ಫೋಟೋದ ಜೊತೆಗೆ ಹಾಕಿರುವ ಕ್ಯಾಪ್ಷನ್- ಸ್ಟ್ರಾಂಗ್‌ ವುಮನ್‌ ಅಪ್‌ಲಿಫ್ಟ್‌ ಈಚ್‌ ಅದರ್- ಸಕತ್ತಾಗಿದೆ. ಶಾಲಾ ಹುಡುಗಿಯಂತೆ ಕಾಣಿಸಿಕೊಂಡಿರುವ ತಾಪಸಿ ಪನ್ನು ಭಂಗಿ ಚಿತ್ತಾಕರ್ಷಕವಾಗಿದೆ. ಅವರ ಕ್ಯಾಪ್ಷನ್- ನಿಮ್ಮ ಯಶಸ್ಸಿನ ಮೂಲಕ ಅವರನ್ನ ಸಾಯಿಸಿ! ಮತ್ತು ನಿಮ್ಮ ನಗುವಿನಿಂದ ಅವರನ್ನು ಹೂಳಿ! 

ಸಹೋದರಿಗೆ ಸುಶಾಂತ್ ಸಿಂಗ್ ಮಾಡಿದ್ದ ಕೊನೆಯ ಮೆಸೇಜ್ ವೈರಲ್! 

ಮೈಮೇಲೆ ಅಕ್ಕಮಹಾದೇವಿಯತೆ ತಲೆಕೂದಲನ್ನು ಹರಡಿಕೊಂಡಿರುವ ಶ್ರುತಿ ಹಾಸನ್‌ ಅವರ ಮುಖದ ಮೇಲೆ ಮುಂಗುರುಳುಗಳು ಕೊಂಚ ಹೆಚ್ಚೇ ಲಾಸ್ಯವಾಡುತ್ತಿವೆ. ಗಿಡಗಳ ನಡುವೆ ನಿಂತು ಪೋಸ್‌ ನೀಡಿರುವ ಸೋನಾಕ್ಷಿ ಸಿನ್ಹಾ ಅವರ ಭಂಗಿ, ಮುಖದ ಮೇಲೆ ಹಾಗೂ ಗಿಡಗಳ ಮೇಲೆ ಬಿದ್ದಿರುವ ಸೂರ್ಯನ ಬೆಳಕಿಗೆ ಥಳಥಳ ಹೊಳೆಯುತ್ತಿದೆ. ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಮಲೈಕಾ ಅರೋರಾ ಎಂದಿನಂತೆ ವೆರಿ ವೆರಿ ಹಾಟ್‌. ಸೋನಂ ಕಪೂರ್ ಕ್ಯಾನೆ ಚಿತ್ರೋತ್ಸವದಲ್ಲಿ ತೆಗೆಸಿಕೊಂಡ ಫೋಟೋವನ್ನು ಮೋನೋಕ್ರೋಮ್ ಮಾಡಿ ಹಾಕಿದ್ದಾರೆ- ಜೊತೆಗೆ, ಇದು ಭಾರತದ ಬಗ್ಗೆ ನನಗಿರುವ ಪ್ರೀತಿಯನ್ನು ರೆಪ್ರೆಸೆಂಟ್‌ ಮಾಡುತ್ತೆ ಅಂತ ಬರೆದುಕೊಂಡಿದ್ದಾರೆ. ಬಿಪಾಶಾ ಬಸು ತನ್ನದೂ ಅಲ್ಲದೆ ಬಾಯ್‌ಫ್ರೆಂಡ್‌ ಜೊತೆಗಿರುವ ಫೋಟೋವನ್ನೂ ಹಾಕಿದ್ದಾಳೆ. ಕರಿಷ್ಮಾ ಕಪೂರ್‌ ಅಂತೂ ಕಪ್ಪಿ ಉಡುಗೆಯಲ್ಲಿ ಥಳಥಳ. 

ಮೈಕಲ್‌ ಏಂಜಲೋ ಮತ್ತು ಕೆಲಸಕ್ಕೆ ಬರದ ಶಿಲೆ!
ಅಂತೂ ಇಂಥ ಬಾಲಿವುಡ್ಡೆಲ್ಲ ಮೋನೋಕ್ರೋಮ್‌ ಆಗುವ ಹೊತ್ತು ಬಂದಿದೆ. ಇನ್ನೂ ಅನೇಕ ಸೆಲೆಬ್ರಿಟಿಗಳಿಗೆ ಚಾಲೆಂಜ್‌ ಮಾಡಲಾಗಿದೆ. ಇನ್ನು ಕೆಲವು ದಿನಗಳ ಮೋನೋಕ್ರೋಮ್‌ಗಳದೇ ದೀಪಾವಳಿ. ಯಾರ್ಯಾರ ಅವತಾರ ಏನೇನು ಕಾದು ನೋಡೋಣ.