ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿ ಭಾರೀ ಚರ್ಚೆಗಳು ನಡೆಯುತ್ತಲೇ ಇವೆ. ಯುವ ನಟನ ಆತ್ಮಹತ್ಯೆ ಬಾಲಿವುಡ್‌ನ ಸ್ವಜನ ಪಕ್ಷಪಾತದ ಕಡೆಗೂ ಬೆಳಕು ಚೆಲ್ಲಿತು.

ನಟಿ ಕಂಗನಾ ರಣಾವತ್ ಈ ಬಗ್ಗೆ ಸರಣಿಯಾಗಿ ಟ್ವೀಟ್, ವಿಡಿಯೋ ಹಾಕುತ್ತಲೇ ಇದ್ದಾರೆ. ಇದೀಗ ಸುಶಾಂತ್ ವಿಚಾರವಾಗಿ ನಟಿ ದೀಪಿಕಾ ಪಡುಕೋಣೆ ಹೆಸರು ತೆಗೆದಿದ್ದಾರೆ ಕಂಗನಾ.

ಜೆಎನ್‌ಯುಗೆ ಹೋಗಿದ್ದ ದೀಪಿಕಾ ಖಾತೆಗೆ 5 ಕೋಟಿ ರೂ.?: ನಟಿ ವಿರುದ್ಧ ಭುಗಿಲೆದ್ದ ಆಕ್ರೋಶ!

ಸುಶಾಂತ್ ಸಿಂಗ್ರಜಪೂತ್ ಜೂನ್.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬೆನ್ನಲ್ಲೇ ಸುಶಾಂತ್ ಆತ್ಮಹತ್ಯೆಗೆ ಡಿಪ್ರೆಷನ್ ಕಾರಣ ಎಂದು ನಟ ಸ್ನೇಹಿತರು ಹೇಳಿದ್ದರು. ಬಾಲಿವುಡ್ ನೆಪೊಟಿಸಂ ಸುಶಾಂತ್ ಆತ್ಮಹತ್ಯೆಗೆ ಕಾರಣ ಎಂದು ನಟಿ ಕಂಗನಾ ಹೇಳುತ್ತಲೇ ಬಂದಿದ್ದಾರೆ. ನಟನ ಆತ್ಮಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸುಮಾರು 35 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ.

ಸುಶಾಂತ್ ತಂದೆ ಕೆಕೆ ಸಿಂಗ್ ನಟನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದು ದೊಡ್ಡ ಸುದ್ದಿಯಾಯ್ತು. ಈ ಸಂಬಂಧ ಕಂಗನಾ ಟ್ವೀಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದೆ. ಟ್ವೀಟ್‌ನಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿದ್ದೇ ಈ ಟ್ವೀಟ್ ವೈರಲ್ ಆಗುವುದಕ್ಕೆ ಕಾರಣವಾಗಿದೆ.

ನಟ ಸುಶಾಂತ್ ಸಿಂಗ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗೆಳತಿ ರಿಯಾಗೆ ಆತಂಕ!

ಸುಶಾಂತ್ ಫ್ಯಾಮಿಲಿ ಈಗಾಗಲೇ ಬಾಲಿವುಡ್ ನಂಬಲ್ಲ ಎಂದಿದ್ದಾರೆ. ಡಿಪ್ರೆಷನ್‌ಗೆ ಕಾರಣವಾದವರು ದಂಡ ತೆರಲೇ ಬೇಕು. ಅವರ ವಿಚಾರಣೆಯಾಗಬೇಕು ಎಂದು ದೀಪಿಕಾ ಪಡುಕೋಣೆಯನ್ನು ಟ್ಯಾಗ್ ಮಾಡಲಾಗಿದೆ. 

ಈ ಪೋಸ್ಟ್‌ಗೆ ಬಹಳಷ್ಟು ಕಮೆಂಟ್‌ಗಳು ಬಂದಿದ್ದು, ಬಹುತೇಇಕ ಕಮೆಂಟ್‌ಗಳೂ ಕಂಗನಾಗೆ ಸಪೋರ್ಟ್ ಮಾಡಿವೆ. ದೀಪಿಕಾಳನ್ನು ಅರೆಸ್ಟ್ ಮಾಡಿ, ಡಿಪ್ರೆಶನ್ ಕಡೆ ಘಟನೆ ತಿರುಗಿಸಿದ್ದು ಅವರೇ. ಸಂತಾಪ ಸೂಚಿಸಲು ದೀಪಿಕಾಗೆ ಸಮಯವಿರಲಿಲ್ಲ, ಡಿಪ್ರೆಷನ್ ಬಗ್ಗೆ ಭಾಷಣ ಮಾಡುವುದಕ್ಕೆ ಸಮಯವಿತ್ತು ಎಂದು ಜನ ಟ್ವೀಟ್ ಮಾಡಿದ್ದಾರೆ.