ಮುಂಬೈ(ಜು.29) ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಪೊಲೀಸ್ ತನಿಖೆ  ಮುಂದುವರೆದಿದೆ. ಆದರೆ ಮಂಗಳವಾರ ಈ ಪ್ರಕರಣ ಹೊಸ ತಿರುವು ಪಡೆದಿದೆ. ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್‌ರವರರು ನಟಿ ರಿಯಾ ಚಕ್ರವರ್ತಿ ವಿರುದ್ಧ ಮಗನನ್ನು ಆತ್ಮಹತ್ಯೆಗೆ ಪ್ರೇರೇಪಿಸಿರುವ ಪ್ರಕರಣ ದಾಖಲಿಸಿದ್ದಾರೆ. ರಿಯಾ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಅನ್ವಯ ಸುಶಾಂತ್ ತಂದೆ ಹತ್ತು ಶಾಕಿಂಗ್ ಆರೋಪ ಮಾಡಿದ್ದಾರೆ. 

* ಸುಶಾಂತ್ ಸಿಂಗ್ ರಜಪೂತ್ ಸಿನಿ ಕ್ಷೇತ್ರವನ್ನು ತೊರೆಯಲು ಇಚ್ಛಿಸಿದ್ದರು. ಅಲ್ಲದೇ ಕೇರಳಕ್ಕೆ ಶಿಫ್ಟ್ ಆಗಿ ಆರ್ಗೇನಿಕ್ ಕೃಷಿ ಮಾಡುವ ಹಂಬಲದಲ್ಲಿದ್ದರು. ಆದರೆ ರಿಯಾ ಇದನ್ನು ವಿರೋಧಿಸಿದ್ದಳು. ಅಲ್ಲದೇ ತಾನು ಮುಂಬೈನಿಂದ ಬೇರೆಲ್ಲೂ ಬರುವುದಿಲ್ಲ ಎಂದಿದ್ದಳು.

ಸುಶಾಂತ್ ಹಳೆ ಸಿನಿಮಾ ನೋಡೋರಿಗೆ ಕ್ಲಾಸ್ ತೆಗೆದುಕೊಂಡ ನಟಿ!

* ಇನ್ನು ಸುಶಾಂತ್ ಮುಂಬೈನಲ್ಲಿರಲು ಸಿದ್ಧನಿಲ್ಲ ಎಂದು ತಿಳಿಯುತ್ತಿದ್ದಂತೆಯೇ, ರಿಯಾ 2020ರ ಜೂನ್ 6 ರದು ಮನೆಯಲ್ಲಿದ್ದ ನಗದು, ಚಿನ್ನ, ಕ್ರೆಡಿಟ್ ಕಾರ್ಡ್, ಮಹತ್ವಪೂರ್ಣ ದಾಖಲೆಗಳು, ಲ್ಯಾಪ್‌ಟಾಪ್ ಹಾಗೂ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೊರ ಹೋಗಿದ್ದಳು. ಸಾಲದೆಂಬಂತೆ ಆಕೆ ತನ್ನ ಮೊಬೈಲ್‌ನಲ್ಲಿ ಸುಶಾಂತ್ ನಂಬರ್ ಕೂಡಾ ಬ್ಲಾಕ್ ಮಾಡಿದ್ದಳು.

* ಒಂದು ಬಾರಿ ಸುಶಾಂತ್ ತನ್ನ ಸಹೋದರಿಗೆ ರಿಯಾ ಎಲ್ಲಾ ದಾಖಲೆಗಳನ್ನು ಕಂಡೊಯ್ದಿದ್ದಾಳೆಡಂದು ತಿಳಿಸಿದ್ದರು. ಅಲ್ಲದೇ ನೀನು ಹಹುಚ್ಚನಾಗಿದ್ದಿ ಈ ವಿಚಾರವನ್ನು ಮಾಧ್ಯಮದೆದುರು ಬಹಿರಂಗಪಡಿಸಿ ಯಾವುದೇ ಪ್ರಾಜೆಕ್ಟ್ ಸಿಗದಂತೆ ಮಾಡುತ್ತೇನೆಂದು ಸುಶಾಂತ್‌ಗೆ ರಿಯಾ ಬೆದರಿಕೆ ನೀಡಿದ್ದಳು.

* 2019ರಲ್ಲಿ ರಿಯಾಳನ್ನು ಭೇಟಿಯಾಗುವುದಕ್ಕೂ ಮುನ್ನ ಸುಶಾಂತ್ ಯಾವುದೇ ಬಗೆಯ ಮಾನಸಿಕ ರೋಗದಿಂದ ಬಳಲುತ್ತಿರಲಿಲ್ಲ. ಆದರೆ ರಿಯಾ ಭೇಟಿಯಾದ ಬಳಿಕ ಸುಶಾಂತ್ ಮಾನಸಿಕವಾಗಿ ಯಾಕೆ ಕುಗ್ಗಿದ ಎಂಬ ತನಿಖೆ ನಡೆಸಬೇಕು.

ಸುಶಾಂತ್‌ನ ಪ್ರೇಯಸಿಯನ್ನು ಲಪಟಾಯಿಸಿದ್ದರಾ ಮಹೇಶ್‌ ಭಟ್‌?

* ಇನ್ನು ಸುಶಾಂತ್‌ಗೆ ಮಾನಸಿಕ ರೋಗದ ಚಿಕಿತ್ಸೆ ನೀಡುತ್ತಿದ್ದರೆ ಕುಟುಂಬ ಸದಸ್ಯರಿಂದ ಅನುಮತಿ ಯಾಕೆ ಪಡೆಯಲಿಲ್ಲ?

* ಚಿಕಿತ್ಸೆ ಸಂದರ್ಭದಲ್ಲಿ ರಿಯಾ ಸುಶಾಂತ್‌ನನ್ನು ತನ್ನ ಮನೆಗೆ ಕರೆದೊಯ್ದಿದ್ದಳು. ಔಷಧಿ ಓವರ್ ಡೋಸ್ ಆದ ಕಾರಣ ಸುಶಾಂತ್ ಆರೋಗ್ಯ ಹದಗೆಟ್ಟಿತ್ತು. ಆದರೆ ರಿಯಾ ಮಾತ್ರ ಎಲ್ಲರಲ್ಲೂ ಸುಶಾಂತ್‌ಗೆ ಡೆಂಗ್ಯೂ ಬಂದಿದೆ ಎಂದಿದ್ದಳು.

* ರಿಯಾ ಸುಶಾಂತ್‌ಗೆ ಯಾವ ಸಿನಿಮಾಗೂ ಸಹಿ ಹಾಕಲು ಬಿಡುತ್ತಿರಲಿಲ್ಲ. ಸಿನಿಮಾ ಪ್ರೊಪೋಸಲ್ ಬಂದಾಗೆಲ್ಲಾ ಆ ಸಿನಿಮಾ ನಾಯಕ ನಟಿಯ ಪಾತ್ರದಲ್ಲಿ ತನ್ನನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಳು. ಅಲ್ಲದೇ ಈ ಶರತ್ತು ಹಾಕಿ ಸಿನಿಮಾ ಪ್ರಾಜೆಕ್ಟ್ ಪಡೆದುಕೊಳ್ಳುವಂತೆ ಸೂಚಿಸಿದ್ದಳು.

* ಸುಶಾಂತ್ ಸಿಂಗ್ ನಂಬಿಕಸ್ಥ ಹಾಗೂ ಹಳೆ ಸಿಬ್ಬಂದಿಯನ್ನೆಲ್ಲಾ ರಿಯಾ ಬದಲಾಯಿಸಿದ್ದಳು. ಅವರ ಬದಲಿಗೆ ರಿಯಾ ತನಗೆ ಗೊತ್ತು ಪರಿಚಯವಿದ್ದ ಜನರನ್ನು ಕೆಲಸಕ್ಕಿಟ್ಟಿದ್ದಳು. ಈ ಮೂಲಕ ಸುಶಾಂತ್‌ನನ್ನು ಎಲ್ಲಾ ರೀತಿಯಲ್ಲಿ ಕಂಟ್ರೋಲ್ ಮಾಡಲು ಯತ್ನಿಸಿದ್ದಳು.

* ಸುಶಾಂತ್ ತನ್ನ ಕುಟುಂಬ ಸದಸ್ಯರು ಹಾಗೂ ಗೆಳೆಯರೊಂದಿಗೆ ಹೆಚ್ಚು ಮಾತನಾಡದಿರುವಂತೆ 2019ರ ಡಿಸೆಂಬರ್‌ನಲ್ಲಿ ರಿಯಾ ಮೊಬೈಲ್‌ ನಂಬರ್ ಬದಲಾಯಿಸುವಂತೆ ಮಾಡಿದ್ದಳು. ಅಲ್ಲದೇ ಪಾಟ್ನಾದಲ್ಲಿದ್ದ ಸುಶಾಂತ್ ಕುಟುಂಬ ಸದಸ್ಯರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲ.

ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು

* 2019ರಲ್ಲಿ ಸುಶಾಂತ್ ಖಾತೆಯಲ್ಲಿ 17 ಕೋಟಿ ರೂ. ಇತ್ತು. ಆದರೆ ತಿಂಗಳೊಳಗೇ 15 ಕೋಟಿ ಮೊತ್ತವನ್ನು ಸುಶಾಂತ್‌ಗೆ ಸಂಬಂಧವಿಲ್ಲದ ಖಾತೆಗಳಿಗೆ ವರ್ಗಾವಣೆ ಮಾಡಲಾಯ್ತು. ಹೀಗಾಗಿ ಆ ಹಣವನ್ನು ರಿಯಾ ಹಾಗೂ ಆಕೆಯ ಸಹಯೋಗಿಗಳು ಹೇಗೆ ಮೋಸದಿಂದ ಲಪಟಾಯಿಸಿದರು ಎಂಬ ತನಿಖೆ ನಡೆಸಬೇಕು.

ಇನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ತಿಂಗಳು ಜೂನ್ 14 ರಂದು ಮುಂಬೈನಲ್ಲಿರುವ ತನ್ನ ಪ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದರು. ಅವರ ಸಾವಿನ ಬೆನ್ನಲ್ಲೇ ಲವಾರು ವಿಚಾರಗಳು ಸದ್ದು ಮಾಡಿದ್ದು ಬಾಲಿವುಡ್‌ನಲ್ಲಿರುವ ನೆಪೋಟಿಸಂ ಕೂಡಾ ಬಹಿರಂಗವವಾಯ್ತು. ಅನೇಕ ದೊಡ್ಡ ದೊಡ್ಡ ನಿರ್ದೇಶಕರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಿರುವಾಗ ಸುಶಾಂತ್ ತಂದೆ ಮಗನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಆರೋಪ ಮಾಡಿ, ಪ್ರಕರಣದ ದಿಕ್ಕನ್ನೇ ಬದಲಾಯಿಸಿದ್ದಾರೆ.