MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ

ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ

180 flop movies: ಚಿತ್ರರಂಗದ ಈ ಹಿರಿಯ ನಟ ತಮ್ಮ ವೃತ್ತಿಜೀವನದಲ್ಲಿ 180 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ 33 ಸತತ ಫ್ಲಾಪ್ ಸಿನಿಮಾಗಳಿವೆ. ಆದರೂ, ಅವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ.

2 Min read
Mahmad Rafik
Published : Feb 10 2025, 03:34 PM IST
Share this Photo Gallery
  • FB
  • TW
  • Linkdin
  • Whatsapp
17

ಸಿನಿಮಾ ಜಗತ್ತಿನಲ್ಲಿ ಸ್ಟಾರ್ ಆಗೋದು ಅಷ್ಟು ಸುಲಭದ ಮಾತ್ರವಲ್ಲ. ನಟನೆ ಬಂದ ಮಾತ್ರಕ್ಕೆ ಸ್ಟಾರ್‌ಗಿರಿ ಪಟ್ಟ ಸಿಗೋದಿಲ್ಲ. ಕೆಲ ನಟರ ಸತತ ಫ್ಲಾಪ್‌ ಸಿನಿಮಾಗಳನ್ನು ನೀಡಿ ನಂತರ ಸೂಪರ್ ಸ್ಟಾರ್‌ ಮಟ್ಟಕ್ಕೆ ಬೆಳೆದಿರುತ್ತಾರೆ. ಒಮ್ಮೆ ಅದೃಷ್ಟ ಇವರ ಕೈ ಹಿಡಿದ್ರೆ ಇವರನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. 

27
Mithun Chakraborty starrer disco dancer is the first 100 crore movie in indian cinema

Mithun Chakraborty starrer disco dancer is the first 100 crore movie in indian cinema

ಇಂದು ಸಿನಿಮಾ ಅಂಗಳದ ಸೂಪರ್ ಸ್ಟಾರ್‌ ಆಗಿರುವ ಈ ನಟ, ಆರಂಭದಲ್ಲಿ ಸೋಲು ಕಂಡಿದ್ದರು. ಈ ನಟ ತಮ್ಮ ವೃತ್ತಿ ಜೀವನದಲ್ಲಿ ಬರೋಬ್ಬರಿ 180 ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ.  ಅದರಲ್ಲಿ 33 ಸತತ ಫ್ಲಾಪ್‌ ಸಿನಿಮಾಗಳಿವೆ. ಇದರ ಹೊರತಾಗಿಯೂ ಇಂದು ದೇಶ ವಿದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ವೃತ್ತಿ ಜೀವನದಲ್ಲಿ 180 ಚಿತ್ರಗಳು ಸೋತಿವೆ

37

ನಾವು ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಬಗ್ಗೆ ಹೇಳುತ್ತಿದ್ದೇವೆ. ಮಿಥುನ್ ಚಕ್ರವರ್ತಿ ತಮ್ಮ ವೃತ್ತಿಜೀವನದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಇದುವರೆಗೂ ಮಿಥುನ್ ಚಕ್ರವರ್ತಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

47

1998 ರಲ್ಲಿ ಬಿಡುಗಡೆಯಾದ 'ಚಂದಾಲ್' ಚಿತ್ರವು ಪ್ರಮುಖ ಪಾತ್ರದಲ್ಲಿ ನಟಿಸಿದ ಮಿಥುನ್ ಚಕ್ರವರ್ತಿ ಅವರ ಕೊನೆಯ ಸೋಲೋ ಹಿಟ್ ಆಗಿತ್ತು. ಇದರ ನಂತರ ಮಿಥುನ್ ಚಕ್ರವರ್ತಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 1998 ರ ನಂತರ ಬಿಡುಗಡೆಯಾದ ಮಿಥುನ್ ಚಕ್ರವರ್ತಿ ಅವರ ಎಲ್ಲಾ ಚಿತ್ರಗಳು ವಿಫಲವಾದವು.

57

ಗುರು ಮತ್ತು ಗೋಲ್ಮಾಲ್ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸುವ ಮೂಲಕ ಮಿಥುನ್ ಚಕ್ರವರ್ತಿ ಕಮ್ ಬ್ಯಾಕ್ ಮಾಡಿದರು. ಬಾಲಿವುಡ್ ಅಂಗಳದಲ್ಲಿ ದಾದಾ (ಅಣ್ಣ) ಎಂದೇ ಇವರನ್ನು ಕರೆಯಲಾಗುತ್ತದೆ. 
ಗುರು ಮತ್ತು ಗೋಲ್ಮಾಲ್ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸುವ ಮೂಲಕ ಮಿಥುನ್ ಚಕ್ರವರ್ತಿ ಕಮ್ ಬ್ಯಾಕ್ ಮಾಡಿದರು. ಬಾಲಿವುಡ್ ಅಂಗಳದಲ್ಲಿ ದಾದಾ (ಅಣ್ಣ) ಎಂದೇ ಇವರನ್ನು ಕರೆಯಲಾಗುತ್ತದೆ.

67

ಅತಿ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೀಡಿದ ಎಂಬ ಕೆಟ್ಟ ದಾಖಲೆ ಮಿಥುನ್ ಚಕ್ರವರ್ತಿ ಅವರ ಹೆಸರಿನಲ್ಲಿದೆ. ಗೋವಿಂದ ತಮ್ಮ ವೃತ್ತಿಜೀವನದಲ್ಲಿ 76 ಫ್ಲಾಪ್ ಸಿನಿಮಾ ನೀಡದ್ರೆ , ಅಕ್ಷಯ್ ಕುಮಾರ್ ಹೆಸರಿನಲ್ಲಿ 60 ಚಿತ್ರಗಳಿವೆ. ಇವರನ್ನು ಹೊರತುಪಡಿಸಿದ್ರೆ ಅನಿಲ್ ಕಪೂರ್, ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ಹೆಸರಿನಲ್ಲಿಯೂ 50ಕ್ಕೂ ಅಧಿಕ ಫ್ಲಾಪ್ ಸಿನಿಮಾಗಳಿವೆ. 

77

1998 ರಲ್ಲಿ ಚಂದಾಲ್ ಬಿಡುಗಡೆಯಾದ ನಂತರ ಮಿಥುನ್ ಚಕ್ರವರ್ತಿ ಅವರ ಕಳಪೆ ಫಾರ್ಮ್ ಪ್ರಾರಂಭವಾಯಿತು. ನಂತರ 9 ವರ್ಷಗಳಲ್ಲಿ 33  ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಹಿಟ್ಲರ್, ಯಮರಾಜ್, ಗಂಗಾ ಕಿ ಕಸಮ್, ಬಿಲ್ಲಾ ನಂ. 786, ಅಗ್ನಿಪುತ್ರ, ಚಾಲ್ಬಾಜ್, ಎಲಾನ್ ಮತ್ತು ಚಿಂಗಾರಿ ಸೇರಿವೆ. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಆರ್ ಮಾಧವನ್ ನಟನೆಯ ಗುರು ಸಿನಿಮಾ ಮಿಥುನ್ ಚಕ್ರವರ್ತಿಗೆ 9 ವರ್ಷಗಳ ಬಳಿಕ ದೊಡ್ಡ ಹಿಟ್ ನೀಡಿತ್ತು. 
 

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved