2018ರಲ್ಲಿ ಬಿಡುಗಡೆಯಾದ ಈ ಸಿನಿಮಾ 500 ಕೋಟಿಗೂ ಹೆಚ್ಚು ಹಣ ಗಳಿಸಿ, 44 ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕ-ನಾಯಕಿಯರ ಸಾವಿನಿಂದಾಗಿ ವೀಕ್ಷಕರು ಭಾರವಾದ ಹೃದಯದಿಂದ ಥಿಯೇಟರ್‌ನಿಂದ ಹೊರಬಂದರು.
500 Crore Collection Bollywood Cinema: ಗಟ್ಟಿ ಕಥೆಯ ಸಿನಿಮಾಗಳು ಸೋಲಲ್ಲ ಎಂಬ ಮಾತಿಗೆ ಈ ಚಿತ್ರ ಉದಾಹರಣೆಯಾಗಿದೆ. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ ದೇಶದಲ್ಲೆಲ್ಲಾ ಸಂಚಲನ ಸೃಷ್ಟಿಸಿತ್ತು. ಚಿತ್ರೀಕರಣ ಆರಂಭದಿಂದ ಬಿಡುಗಡೆಯವರೆಗೂ ಒಂದಿಲ್ಲವೊಂದು ಕಾರಣಕ್ಕೆ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಸಿನಿಮಾ ಬಿಡುಗಡೆ ಬಳಿಕ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡ ಕಾರಣ ಬಾಕ್ಸ್ ಆಫಿಸ್‌ನಲ್ಲಿ 500 ಕೋಟಿಗೂ ಅಧಿಕ ಹಣ ಸಂಪಾದನೆ ಮಾಡಿತು. ಕ್ಲೈಮ್ಯಾಕ್ಸ್‌ನಲ್ಲಿ ಕಥಾ ನಾಯಕಿ ಮತ್ತು ನಾಯಕಿ ಸಾವನ್ನಪ್ಪುತ್ತಾರೆ. ನಾಯಕಿಯ ಸಾವಿನ ದೃಶ್ಯದಿಂದ ಸಿನಿಮಾ ಕೊನೆಯಾಗುತ್ತದೆ. ಹಾಗಾಗಿ ವೀಕ್ಷಕರು ಭಾರವಾದ ಹೃದಯದಿಂದ ಥಿಯೇಟರ್‌ನಿಂದ ಹೊರ ಬಂದಿದ್ದರು. ಈ ಸಿನಿಮಾ ವಿವಿಧ ವಿಭಾಗಗಳಲ್ಲಿ 44ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 2018ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಗೆ ಈ ಚಿತ್ರ ಸಹ ಸೇರ್ಪಡೆಯಾಗಿತ್ತು.
ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಪದ್ಮಾವತ್ ಸಿನಿಮಾ (Padmaavat) ಬಾಲಿವುಡ್ ಅಂಗಳದಲ್ಲಿ ಹೊಸ ಇತಿಹಾಸವನ್ನೇ ಕ್ರಿಯೇಟ್ ಮಾಡಿತ್ತು. ರಣ್‌ವೀರ್ ಸಿಂಗ್, ಶಾಹಿದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‌ವೀರ್ ಸಿಂಗ್, ಮಹಾರಾವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಮತ್ತು ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರು. ರಿಲೀಸ್ ಬಳಿಕ ಚಿತ್ರಮಂದಿರಗಳು ತುಂಬಿ ತುಳುಕಿದ್ದವು. ಐಎಂಡಿಬಿ ವರದಿ ಪ್ರಕಾರ, ಪದ್ಮಾವತ್ ಸಿನಿಮಾ 44 ಪ್ರಶಸ್ತಿಗಳನ್ನು ತೆಗೆದುಕೊಂಡಿದೆ.
ಈ ಸಿನಿಮಾ ಬಳಿಕ ರಣ್‌ವೀರ್ ಸಿಂಗ್ ಸೇರಿದಂತೆ ಚಿತ್ರದ ಎಲ್ಲಾ ಕಲಾವಿದರ ಜನಪ್ರಿಯತೆ ಹೆಚ್ಚಾಗಿತ್ತು. ಸಿನಿಮಾದಲ್ಲಿಯ ತಮ್ಮ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ರಣ್‌ವೀರ್ ಸಿಂಗ್ ಮನೆಯಿಂದ ಹೊರ ಬಂದಿರಲಿಲ್ಲ. ಸುಮಾರು 21 ದಿನಗಳವರೆಗೆ ಮನೆಯಿಂದ ಹೊರ ಬಂದಿರಲಿಲ್ಲ. ಎಲ್ಲಾ ಚಿತ್ರಗಳಲ್ಲಿ ಕೊನೆಗೆ ವಿಲನ್ ಸಾಯುತ್ತಾನೆ. ಆದ್ರೆ ಇಲ್ಲಿ ನಾಯಕ ಮತ್ತು ನಾಯಕಿಯ ಸಾವು ಆಗುತ್ತದೆ. ವಿಶ್ವದಾದ್ಯಂತ ಪದ್ಮಾವತ್ ಸಿನಿಮಾ 571.98 ಕೋಟಿ ರೂ. ಗಳಿಸಿತ್ತು. ಈ ಚಿತ್ರ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು.
ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!
ಪದ್ಮಾವತ್ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದ್ದು, ವೀಕ್ಷಿಸಬಹುದಾಗಿದೆ. ಅದಿತಿ ರಾವ್ ಹೈದರಿ, ಜಿಮ್ ಸರ್ಭ್, ರಾಜಾ ಮುರಾದ್, ಅನುಪ್ರಿಯಾ ಗೊಯೆಂಕ್, ಉಜ್ವಲ್ ಚೋಪ್ರಾ, ಭವಾನಿ ಮುಝಾಮಿ, ದೀಪಕ್ ಶ್ರೀಮಾಲಿ ಸೇರಿದಂತೆ ಹಲವು ಕಲಾವಿದರು ಪದ್ಮಾವತ್ ಸಿನಿಮಾದಲ್ಲಿ ನಟಿಸಿದ್ದಾರೆ. ಪದ್ಮಾವತ್ ಸಿನಿಮಾದ ಹಾಡುಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿರುತ್ತವೆ. ಚಿತ್ರದ ಘೂಮರ್ ಹಾಡು ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಇದೇ ಫೆಬ್ರವರಿ 6ರಂದು ಸಿನಿಮಾ ರೀ ರಿಲೀಸ್ ಆಗುತ್ತಿದೆ.
ಇದಕ್ಕೂ ಮೊದಲು ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್‌ಲ್ಲಿ 'ಗೋಲಿಯೋಂ ಕೀ ರಾಸಲೀಲಾ ರಾಮ್‌ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ ಎರಡು ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾವೂ ಸಹ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುತ್ತಲೇ ದೀಪಿಕಾ ಮತ್ತು ರಣ್‌ವೀರ್ ನಡುವೆ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿ: ಸದ್ದಿಲ್ಲದೇ ಬಿಡುಗಡೆಯಾಗಿ 500 ಕೋಟಿ ಸಿನ್ಮಾದ ಬುಡ ಅಲ್ಲಾಡಿಸಿದ ಚಿತ್ರ; 4 ಪಟ್ಟು ಕಲೆಕ್ಷನ್, 2025ರ ಹಿಟ್ ಮೂವಿ


