ಸದ್ದಿಲ್ಲದೇ ಬಿಡುಗಡೆಯಾದ ಚಿತ್ರ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2025ರ ಮೊದಲ ಹಿಟ್ ಚಿತ್ರವಾಗಿದೆ. ಈ ಚಿತ್ರ 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ನಾಲ್ಕು ಪಟ್ಟು ಲಾಭ ಗಳಿಸಿದೆ. 500 ಕೋಟಿ ಸಿನಿಮಾದ ಬುಡವನ್ನು ಈ ಚಿತ್ರ ಅಲ್ಲಾಡಿಸಿದೆ.

2025 First Big Hit Movie: ಕೆಲವೊಂದು ಸಿನಿಮಾಗಳು ಶೂಟಿಂಗ್ ಆರಂಭಿಸುತ್ತಲೇ ಸದ್ದು ಮಾಡಲು ಆರಂಭಿಸುತ್ತವೆ. ಅಭಿಮಾನಿಗಳು ಸಹ ಚಿತ್ರದ ಸಣ್ಣ ಅಪ್‌ಡೇಟ್‌ಗೂ ಕಾಯುತ್ತಿರುತ್ತಾರೆ. ಆದ್ರೆ ಸಿನಿಮಾ ಬಿಡುಗಡೆಯಾದಾಗ ಥಿಯೇಟರ್‌ನಿಂದ ಬೇಸರಗೊಂಡು ಬರುತ್ತಾರೆ. ಹೆಚ್ಚು ನಿರೀಕ್ಷೆ ಸೃಷ್ಟಿಸಿ ಮಕಾಡೆ ಮಲಗಿದ ಹಲವು ಸಿನಿಮಾಗಳು ನಮ್ಮ ಮುಂದಿವೆ. ಒಂದಿಷ್ಟು ಸಿನಿಮಾಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಬಿಡುಗಡೆಯಾಗಿ, ಜನರಿಂದಲೇ ಪ್ರಚಾರ ಗಿಟ್ಟಿಸಿಕೊಂಡು ಗೆಲ್ಲುತ್ತವೆ. 2025ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ದಕ್ಷಿಣ ಭಾರತದ ಚಿತ್ರವೊಂದು ಸದ್ದಿಲ್ಲದೇ ಬಿಡುಗಡೆಯಾಗಿ 500 ಕೋಟಿ ಸಿನಿಮಾದ ಬುಡವನ್ನು ಅಲ್ಲಾಡಿಸಿದೆ. ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಪಕರಿಗೆ ನಾಲ್ಕುಪಟ್ಟು ಹಣವನ್ನು ಹಿಂದಿರುಗಿಸಿದೆ. ಇಂದು ಸಹ ಅನೇಕ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಜನರು ಥಿಯೇಟರ್‌ಗೆ ಬರುತ್ತಿರೋ ಹಿನ್ನೆಲೆ OTT ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಈ ಸಿನಿಮಾ ಜನವರಿ 14ರಂದು ದೇಶದಾದ್ಯಂತ ಬಿಡುಗಡೆಯಾಗಿತ್ತು. 64 ವರ್ಷದ ಸೂಪರ್ ಸ್ಟಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನ 'ಸಂಕ್ರಾಂತಿ ವಸ್ಥಾನಂ' ಸಿನಿಮಾ ಜನವರಿ 14 ರಂದು ಬಿಡುಗಡೆಯಾಗಿ ಬಾಕ್ಸ್ ಆಫಿಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡುತ್ತಿದೆ. ಇದಕ್ಕೂ ಮುನ್ನ ಅಂದ್ರೆ 4 ದಿನಗಳ ಮುಂಚೆ ಟಾಲಿವುಡ್‌ನ ಗೇಮ್ ಚೇಂಜರ್ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಾ ಬಿಡುಗಡೆಯಾಗಿತ್ತು. ಆದರೆ ಜನರು ಸೂಪರ್ ಸ್ಟಾರ್ ವೆಂಕಟೇಶ್ ನಟನೆಯ ಸಂಕ್ರಾಂತಿ ವಸ್ಥಾನಂಗೆ ಜೈಕಾರ ಹಾಕಿದ್ದಾರೆ. ವೆಂಕಟೇಶ್‌, ಮೀನಾಕ್ಷಿ ಚೌಧರಿ, ಐಶ್ವರ್ಯ ರಾಜೇಶ್, ಉಪೇಂದ್ರ ಲಿಮಾಯೆ, ಸಾಯಿ ಕುಮಾರ್ ಮತ್ತು ವಿಟಿವಿ ಗಣೇಶ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಸಂಕ್ರಾಂತಿ ವಸ್ಥಾನಂ ಸಿನಿಮಾ ಹೊಂದಿದೆ. 

ಸಂಕ್ರಾಂತಿ ವಸ್ಥಾನಂ ಸಿನಿಮಾ ವಿವಾಹಿತ ದಂಪತಿಯ ಕಥೆಯನ್ನು ಆಧರಿಸಿದ್ದು, ಪತಿಯ ಮಾಜಿ ಗೆಳತಿ ಕಿಡ್ನ್ಯಾಪ್ ಕೇಸ್ ಪರಿಹರಿಸಲು ಹೋದಾಗ ನಾಯಕನ ಜೀವನದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ನಾಯಕನ ಜೀವನದಲ್ಲಾಗುವ ರೋಚಕ ತಿರುವುಗಳು ನೋಡುಗರಿಗೆ ಥ್ರಿಲ್ ನೋಡುವಲ್ಲಿ ಯಶಸ್ವಿಯಾಗಿವೆ. ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿ ಬಂದ ಸಂಕ್ರಾಂತಿ ವಸ್ತಾನಂ ಸಿನಿಮಾ ಬಿಡುಗಡೆಯಾದ 19 ದಿನಗಳಲ್ಲಿಯೇ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಮೊದಲ ದಿನ 23 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ನಂತರ ಮೊದಲ ವಾರದಲ್ಲಿ 137.3 ಕೋಟಿ, ಎರಡನೇ ವಾರದಲ್ಲಿ 28.3 ಕೋಟಿ ಕಲೆಕ್ಷನ್ ಮಾಡಿತ್ತು.

ಸ್ಯಾಕ್‌ನಿಲ್ಕ್‌ನ ವರದಿ ಪ್ರಕಾರ, ಸಂಕ್ರಾಂತಿ ವಸ್ಥಾನಂ ಸಿನಿಮಾ ಮೂರನೇ ಶುಕ್ರವಾರ 1.35 ಕೋಟಿ ರೂಪಾಯಿ ಮತ್ತು ನಾಲ್ಕನೇ ಶನಿವಾರ 2.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದುವರೆಗೂ ಸಂಕ್ರಾಂತಿ ವಸ್ಥಾನಂ ಸಿನಿಮಾ 230.30 ಕೋಟಿ ಗಳಿಸಿದೆ. ಐಎಂಡಿಬಿ ವರದಿ ಪ್ರಕಾರ, ಸಂಕ್ರಾಂತಿ ವಸ್ಥಾನಂ ಸಿನಿಮಾ 50 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಈಗಾಗಲೇ ಸಿನಿಮಾ 4 ಪಟ್ಟು ಹಣ ಗಳಿಸಿದೆ. ಮುಂದಿನ ವಾರದ ವೇಳೆಗೆ ಸಂಕ್ರಾಂತಿ ವಸ್ಥಾನಂ 250 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಒಂದು ಕ್ಷಣ ಫಾರ್ವರ್ಡ್ ಮಾಡಿದ್ರೂ ಈ ಸಿನ್ಮಾ ಅರ್ಥ ಆಗಲ್ಲ; ಪ್ರತಿ ಸೆಕೆಂಡ್‌ಗೂ ರೋಚಕ ತಿರುವುಗಳು

YouTube video player

ಸಂಕ್ರಾಂತಿ ವಸ್ತಾನಂ 2025 ರ ಮೊದಲ ಬ್ಲಾಕ್ಬಸ್ಟರ್ ತೆಲುಗು ಸಿನಿಮಾವಾಗಿದೆ. ಈಗಾಗಲೇ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ZEE5 30 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಫೆಬ್ರವರಿ 14, 2025 ರಂದು OTTಯಲ್ಲಿ ಸಂಕ್ರಾಂತಿ ವಸ್ತಾನಂ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇಂದಿಗೂ ಚಿತ್ರಮಂದಿರಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ OTT ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

Scroll to load tweet…
Scroll to load tweet…