ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

ಈ ಚಿತ್ರದ ನಿರ್ಮಾಣಕ್ಕಾಗಿ 100-160 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು. ಮುಸ್ಲಿಂ ನಾಯಕನ ಕಥೆಯನ್ನು ಹೊಂದಿರುವ ಸಿನಿಮಾ ನೋಡಲು ಜನರು ಚಿತ್ರಮಂದಿರಕ್ಕೆ ಬರಲಿಲ್ಲ.

Worlds Biggest Flop Movie The 13th Warrior Why did cinema loss 1083 crore mrq

ಮುಂಬೈ: ಬಾಲಿವುಡ್‌ನಲ್ಲಿ ಯಾವುದೇ ಹೀರೋ ಇರಲಿ, ಆತನ ಹಿಟ್ ಮತ್ತು ಫ್ಲಾಪ್‌ ಸಿನಿಮಾಗಳ ಮೇಲೆ ನಟನಿಗೆ ಅಂಕ ನೀಡಲಾಗುತ್ತದೆ. ಕೆಲವೊಮ್ಮೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗುವ ಸಿನಿಮಾಗಗಳು ನಿರೀಕ್ಷೆಗೂ ಮೀರಿ ಹಣವನ್ನು ಬಾಚಿಕೊಂಡಿರುವ ಉದಾಹರಣೆಗಳು ಭಾರತದ ಸಿನಿ ಅಂಗಳದಲ್ಲಿವೆ. ಮತ್ತೊಂದೆಡೆ ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ, ದೊಡ್ಡಪ್ರಮಾಣದಲ್ಲಿ ಪ್ರಚಾರ ನೀಡಿದ್ರೂ ಚಿತ್ರಗಳು ಸೋತ ಉದಾಹರಣಗಳಿವೆ. ಮತ್ತೊಂದು ರೀತಿ ಕೆಲ ಚಿತ್ರಗಳು ತಮ್ಮ ವಿವಾದದಿಂದಲೇ ಹಿಟ್ ಆದ್ರೆ, ಕೆಲವು ಸೋತು ಸುಣ್ಣವಾಗುತ್ತವೆ. ಹಾಗಾಗಿ ಸಿನಿಮಾಗಳಿಗೆ ಹಣ ಹೂಡಿಕೆ ಮಾಡುವ ನಿರ್ಮಾಪಕರು ತೂಗುಗತ್ತಿ ಮೇಲೆಯೇ ನಿಂತಿರುತ್ತಾರೆ. ಇಂದು ನಾವು  ಹೇಳುತ್ತಿರುವ ಚಿತ್ರ ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ ಆಗಿದೆ. ಇದು ಬಾಲಿವುಡ್ ಅಲ್ಲ, ಹಾಲಿವುಡ್ ಸಿನಿಮಾವಾಗಿದೆ. 

ವಿಶ್ವದ ಅತಿ ದೊಡ್ಡ ಫ್ಲಾಪ್‌ ಸಿನಿಮಾ 1999ರಲ್ಲಿ ಬಿಡುಗಡೆಯಾಗಿತ್ತು. ಅಮೆರಿಕ ಈ ಸಿನಿಮಾ ಹೆಸರು "The 13th Warrior". ಆಕ್ಷನ್ ಫಿಕ್ಷನ್ ಕಥೆಯನ್ನು ಹೊಂದಿರುವ ಚಿತ್ರವನ್ನು ನಿರ್ಮಾಣ ಮಾಡಲು ಇಡೀ  ತಂಡ ಬೆವರಿನ ಹೊಳೆಯನ್ನು  ಹರಿಸಿತ್ತು. ಬಜೆಟ ಮತ್ತು ಮೇಕಿಂಗ್ ನಿಂದಾಗಿ ದುಬಾರಿ ಚಿತ್ರ ಎನಿಸಿಕೊಂಡಿತ್ತು. ಈ ಚಿತ್ರದ ಕತೆ ಬಾಗ್ದಾದ್‌ನ ಪ್ರಯಾಣಿಕ ಅಹ್ಮದ್ ಇಬ್ನ್ ಫಡ್ಲಾನ್ ಅವರ ಜೀವನವನ್ನು ಆಧರಿಸಿದ್ದು, ಇದನ್ನು ಜಾನ್ ಮೆಕ್‌ಟೈರ್ನಾನ್ ನಿರ್ದೇಶಿಸಿದ್ದರು. ಆದ್ರೆ ಚಿತ್ರತಂಡ ಅಂದುಕೊಂಡಂತೆ ಏನೂ ಆಗಲಿಲ್ಲ.

ಓಟಿಟಿಯಲ್ಲಿ ನೋಡಲೇಬೇಕಾದ ಮೂರು ಕೊರಿಯನ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು

90ರ ದಶಕದಲ್ಲಿ  ಜಾನ್ ಮೆಕ್‌ಟೈರ್ನಾನ್ ಓರ್ವ ಫೇಮಸ್ ಆಕ್ಷನ್ ಸಿನಿಮಾ ನಿರ್ದೇಶಕರು ಅಂತಾನೇ ಗುರುತಿಸಿಕೊಂಡಿದ್ದರು. ಪ್ರತಿ  ನಟರನ್ನು ತುಂಬಾನೇ ಅಳೆದುತೂಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಂಟೋನಿಯೊ ಬಂಡೆರಾಸ್, ವೇಲ್, ವ್ಲಾಡಿಮಿರ್ ಕುಲಿಚ್ ಮತ್ತು ಡೆನಿಸ್ ಖ್ಯಾತ ನಟರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಂದಿನ ಸಮಯದಲ್ಲಿಯೇ ಚಿತ್ರಕ್ಕಾಗಿ 100-160 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು. ಇಷ್ಟು ಅದ್ಧೂರಿಯಾಗಿ ನಿರ್ಮಾಣವಾದ ಈ ಚಿತ್ರ ಗಳಿಸಿದ್ದು ಕೇವಲ 60 ಮಿಲಿಯನ್ ಡಾಲರ್. ಹಾಗಾಗಿಯೇ ಇದನ್ನು ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ ಎಂದು ಕರೆಯಲಾಗುತ್ತದೆ.

ಹಾಗಾದ್ರೆ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಸೋಲಲು ಏನು ಕಾರಣ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಚಿತ್ರದ ಕಥೆಯೇ ಈ ಸಿನಿಮಾದ ಸೋಲಿಗೆ ಕಾರಣ ಎಂದು ವಿಶ್ಲೇಷಕರು ವಿವರಿಸುತ್ತಾರೆ. ಅಮೆರಿಕದ ಈ ಸಿನಿಮಾ ಮುಸ್ಲಿಂ ಹೀರೋನ ಕಥೆಯನ್ನು ಒಳಗೊಂಡಿತ್ತು. ಹಾಗಾಗಿ ಈ ಸಿನಿಮಾವನ್ನು ಅಂದಿನ ಅಮೆರಿಕನ್ನರು ಇಷ್ಟಪಡಲಿಲ್ಲ. ಚಿತ್ರದ ನಾಯಕನನ್ನು ಮುಸ್ಲಿಂ ಪಾತ್ರದಲ್ಲಿ ನೋಡಲು ಇಷ್ಟಪಡದ ಕಾರಣ ಜನರು ಥಿಯೇಟರ್‌ಗೆ ಬರಲಿಲ್ಲ. ಅತ್ಯಂತ  ಅದ್ಧೂರಿಯಾಗಿ, ಭರಪೂರ ಆಕ್ಷನ್ ದೃಶ್ಯಗಳನ್ನು ಹೊಂದಿದ್ದರೂ ಚಿತ್ರ ಸೋಲು ಕಂಡಿತ್ತು.

ಈ ಮೂರು ಸಿನಿಮಾಗಳು ಹಾರ್ಟ್‌ಬೀಟ್ ಹೆಚ್ಚಿಸುತ್ತೆ! ಹುಷಾರ್, ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು!

Latest Videos
Follow Us:
Download App:
  • android
  • ios