ದಕ್ಷಿಣ ಭಾರತದ ಹಲವು ಚಿತ್ರಗಳು ಸೂಪರ್ ಹಿಟ್ ಮೂಲಕ ಇಡೀ ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಇತ್ತ ಬಾಲಿವುಡ್ ಚಿತ್ರಗಳು ಪೈಪೋಟಿ ನೀಡಲು ವಿಫಲವಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಭಾರತದ ಟಾಪ್ 10 ಹಿರೋ ಪಟ್ಟಿ ಬಿಡುಗಡೆಯಾಗಿದೆ. ಇಲ್ಲೂ ಕೂಡ ದಕ್ಷಿಣ ಸ್ಟಾರ್‌ಗಳ ಅಬ್ಬರವೇ ಹೆಚ್ಚಿದೆ. ವಿಶೇಷ ಅಂದರೆ ಸ್ಯಾಂಡಲ್‌ವುಡ್‌ನ ಯಶ್ ಇದೀಗ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದ್ದಾರೆ. 

ನವದೆಹಲಿ(ಸೆ.22): ಭಾರತದ ಸಿನಿಮಾ ರಂಗದಲ್ಲಿ ಇದೀಗ ಬಾಲಿವುಡ್ ಚಿತ್ರಕ್ಕಿಂತ ದಕ್ಷಿಣ ಭಾರತದ ಚಿತ್ರಗಳು ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತದ ಚಿತ್ರಗಳು ಬಹುತೇಕ ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. ಇಷ್ಟೇ ಅಲ್ಲ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ದಕ್ಷಿಣ ಭಾರತ ಚಿತ್ರಗಳ ಮುಂದೆ ಬಾಲಿವುಡ್ ಚಿತ್ರಗಳು ಹರಸಾಹಸ ಪಡುತ್ತಿದೆ. ಈ ಹೊಡೆತದಿಂದ ಮೇಲೇಳಲು ಪರದಾಡುತ್ತಿರುವ ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಕಾರಣ ಆರ್ಮ್ಯಾಕ್ಸ್ ಭಾರತದ ಟಾಪ್ 10 ಹೀರೋ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಾಪ್ 5ರಲ್ಲಿ ದಕ್ಷಿಣ ಭಾರತದ ನಟರೇ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಮೂಲಕ ದೇಶ ವಿದೇಶಗಳಲ್ಲಿ ಸಿನಿಮಾ ಕ್ರೇಜ್ ಹೆಚ್ಚಿಸಿದ ಯಶ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ತೆಲುಗು ನಟ ಮಹೇಶ್ ಬಾಬು, ತಮಿಳು ನಟ ಸೂರ್ಯ ಸೇರಿದಂತೆ ಹಲವು ದಿಗ್ಗಜರನ್ನೇ ಹಿಂದಿಕ್ಕಿದ್ದಾರೆ.

ಆರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ತಮಿಳು ಸ್ಟಾರ್ ವಿಜಯ್ ದಳಪತಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಬಾಹುಬಲಿ ಹೀರೋ ಪ್ರಭಾಸ್ ವಿರಾಜಮಾನರಾಗಿದ್ದಾರೆ. ತೆಲುಗು ಸ್ಟಾರ್ ಜ್ಯೂನಿಯರ್ ಎನ್‌ಟಿಆರ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನದಲ್ಲಿದ್ದರೆ, ಬಾಲಿವುಡ್ ಹಾಗೂ ಟಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕಿರುವ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ 5ನೇ ಸ್ಥಾನ ಅಲಂಕರಿಸಿದ್ದಾರೆ.

ಯಾರು ಕಣ್ಣು ಹಾಕ್ಬೇಡಿ ಕಣ್ರೋ: Radhika Yash ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ

ಆರ್ಮ್ಯಾಕ್ಸ್ ಬಿಡುಗಡೆ ಮಾಡಿದ ಭಾರತದ ಟಾಪ್ 10 ಹೀರೋಗಳ ಪಟ್ಟಿ ವಿವರ:
1. ವಿಜಯ್ ದಳಪತಿ
2. ಪ್ರಭಾಸ್ 
3. ಜ್ಯೂ.ಎನ್‌ಟಿಆರ್
4. ಅಲ್ಲು ಅರ್ಜುನ್
5. ಯಶ್
6. ಅಕ್ಷಯ್ ಕುಮಾರ್
7. ರಾಮ್ ಚರಣ್
8. ಮಹೇಶ್ ಬಾಬು
9. ಸೂರ್ಯ
10. ಅಜಿತ್ ಕುಮಾರ್

ಸ್ಯಾಂಡಲ್‌ವುಡ್‌ನ ಗೂಗ್ಲಿ ಬ್ಯೂಟಿಗೆ ಮದುವೆ ಭಾಗ್ಯ: ಪ್ರೀತಿಸಿದ ಹುಡುಗನನ್ನ ಕೈ ಹಿಡಿಯುತ್ತಿದ್ದಾರೆ ಕೃತಿ!

ಆರ್ಮ್ಯಾಕ್ ಬಿಡುಗಡೆ ಮಾಡಿರುವ ಟಾಪ್ 10 ಪಟ್ಟಿಯಲ್ಲಿ ಆರಂಭಿಕ 5 ಸ್ಥಾನಗಳನ್ನು ದಕ್ಷಿಣ ಭಾರತದ ನಟರೇ ಆಕ್ರಮಿಸಿಕೊಂಡಿದ್ದಾರೆ ಇನ್ನು 6ನೇ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಬಾಲಿವುಡ್ ಸ್ಟಾರ್. ಇನ್ನುಳಿದ 4 ಸ್ಥಾನಗಳು ಮತ್ತೆ ದಕ್ಷಿಣ ಭಾರತದ ಹೀರೋಗಳೇ ಪಡೆದಿದ್ದಾರೆ.

ಬಾಲಿವುಡ್‌ನ ನಂ.1 ನಟ ರಾಕಿಭಾಯ್‌: ಶಾಹಿದ್‌ ಕಪೂರ್‌
‘ಕೆಜಿಎಫ್‌ 2’ ಪ್ಯಾನ್‌ ಇಂಡಿಯಾ ಚಿತ್ರದ ಮೂಲಕ ವಿಶ್ವದ ಗಮನಸೆಳೆದ ಯಶ್‌ ಬಾಲಿವುಡ್‌ನ ನಂಬರ್‌ 1 ಸ್ಟಾರ್‌ ಎಂದು ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಹೇಳಿದ್ದಾರೆ. ಬಾಲಿವುಡ್‌ ನಿರ್ದೇಶಕ, ಜನಪ್ರಿಯ ನಿರೂಪಕ ಕರಣ್‌ ಜೋಹರ್‌ ನಡೆಸಿಕೊಡುವ ‘ಕಾಫಿ ವಿತ್‌ ಕರಣ್‌ ಸೀಸನ್‌ 7’ನ ಸಂದರ್ಶನಲ್ಲಿ ಶಾಹಿದ್‌ ಈ ಮಾತು ಹೇಳಿದ್ದಾರೆ. ಕರಣ್‌ ಕೇಳಿದ ‘ನಿಮ್ಮ ಪ್ರಕಾರ ಈಗ ಬಾಲಿವುಡ್‌ನ ನಂಬರ್‌ 1 ನಟ ಯಾರು’ ಎಂಬ ಪ್ರಶ್ನೆಗೆ ಶಾಹಿದ್‌ ಕಪೂರ್‌, ಯಶ್‌ ಹೆಸರು ಹೇಳಿದ್ದಾರೆ.