ನಟ ಸುಶಾಂತ್​ ಸಿಂಗ್​ ಜನ್ಮದಿನಕ್ಕೆ ಗೆಳತಿ ರಿಯಾ ಚಕ್ರವರ್ತಿ ಭಾವುಕವಾಗಿ ಪೋಸ್ಟ್​ ಮಾಡಿದ್ದು ಅದರಲ್ಲೇನಿದೆ? 

ಮುಂಬೈ: ಇಂದು (ಜ.21) ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajaput) ಅವರ ಜನ್ಮದಿನ. ಸುಶಾಂತ್​ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅವರನ್ನು ನೆನಪಿಸಿಕೊಂಡು ಇಂದು ಭಾವುಕರಾಗುತ್ತಿದ್ದಾರೆ. ಇಂದು ಸುಶಾಂತ್​ ಬದುಕಿರುತ್ತಿದ್ದರೆ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ನಿಗೂಢವಾಗಿ ಅವರು ಸಾವನ್ನಪ್ಪಿದರು. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗೆಗಿನ ಚರ್ಚೆ ಇನ್ನೂ ಮುಂದುವರೆದೇ ಇದೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್​ಮೆಂಟ್​ನಲ್ಲಿ (Apartment) ನಿಗೂಢವಾಗಿ ಸಾವನ್ನಪ್ಪಿದುದರ ಹಿಂದಿನ ರಹಸ್ಯ ಮಾತ್ರ ಇದುವರೆಗೂ ಯಾರಿಗೂ ಕಂಡುಹಿಡಿಯಲು ಆಗುತ್ತಲೇ ಇಲ್ಲ. ಸುಶಾಂತ್​ ಅವರು ಮೃತಪಟ್ಟು ಎರಡೂವರೆ ವರ್ಷಗಳಾಗುತ್ತಾ ಬಂದರೂ ಅವರ ಸಾವಿನ ಕುರಿತು ಇನ್ನೂ ಹಲವು ವಿಚಾರಗಳು ಬರುತ್ತಲೇ ಇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆಯೇ, ಸುಶಾಂತ್​ ಸಿಂಗ್​ ಅವರ ಸಾವಿನ ಬಳಿಕ ಭಾರಿ ಸುದ್ದಿಯಲ್ಲಿದ ನಟಿ, ಕೆಲವು ವರ್ಷಗಳ ಕಾಲ ಸುಶಾಂತ್​ ಜೊತೆಗೆ ಡೇಟಿಂಗ್ ಮಾಡಿದ ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ ಅವರ ಹುಟ್ಟುಹಬ್ಬದ ನಿಮಿತ್ತ ಈ ಪೋಸ್ಟ್​ ಶೇರ್​ ಮಾಡಲಾಗಿದೆ. ರಿಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ (Instagram) ಪ್ರೊಫೈಲ್‌ನಲ್ಲಿ ಸುಶಾಂತ್​ ಸಿಂಗ್​ ಅವರ ಜೊತೆಗಿರುವ ಕೆಲವು ಥ್ರೋಬ್ಯಾಕ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 

Sushant Singh ಹುಟ್ಟುಹಬ್ಬದ ಸವಿ ನೆನಪಲ್ಲಿ ಭಾವುಕ ಪತ್ರ ಬರೆದ ಸಹೋದರಿ ಶ್ವೇತಾ

ಶೀರ್ಷಿಕೆಯಲ್ಲಿ, ನಟಿ ಸರಳವಾಗಿ ಇನ್ಫಿನಿಟಿ ಎಮೋಜಿಯನ್ನು (Infinity emogy) ಸೇರಿಸಿದ್ದಾರೆ ಮತ್ತು "+1" ಎಂದು ಬರೆದಿದ್ದಾರೆ. ಈ ಪೋಸ್ಟ್​ನಲ್ಲಿ ನಟಿ ರಿಯಾ, ಸುಶಾಂತ್​ ಅವರನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಒಂದು ಫೋಟೋದಲ್ಲಿ ಇಬ್ಬರೂ ತಮ್ಮ ಮುಖಗಳನ್ನು ಕಾಫಿ ಮಗ್‌ಗಳ ಹಿಂದೆ ಮರೆಮಾಡಿದ್ದಾರೆ. ಇದನ್ನು ಶೇರ್​ ಮಾಡಿಕೊಂಡಿರುವ ನಟಿ ರಿಯಾ, 'ಇನ್ಫಿನಿಟಿ + 1' ಎಂದು ಶೀರ್ಷಿಕೆ ನೀಡಿದ್ದಾರೆ. ತಮ್ಮ ಪ್ರೀತಿ ಅನಂತವಾದದ್ದು, ಅದಕ್ಕೆ ಇನ್ನೊಂದು ವರ್ಷ ಎಂದು ಚುಟುಕಾಗಿ ಭಾವುಕರಾಗಿ ಈ ಪೋಸ್ಟ್​ ಮಾಡಿದ್ದಾರೆ.

ಅಂದ ಹಾಗೆ, ಸುಶಾಂತ್​ ಸಿಂಗ್​ ಸಾವು ಕೊಲೆ ಎಂಬ ಶಂಕೆ ವ್ಯಕ್ತವಾಗುತ್ತಲೇ ಅನೇಕ ಮಂದಿಯ ವಿಚಾರಣೆ ನಡೆಸಲಾಗಿತ್ತು. ಸುಶಾಂತ್​ ಸಿಂಗ್​ ಅವರ ಕೊನೆಯ ದಿನಗಳಲ್ಲಿ ಜೊತೆಯಾಗಿದ್ದ, ಸುಶಾಂತ್ ಸಿಂಗ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live in relationship) ನಟಿ ರಿಯಾ ಚಕ್ರವರ್ತಿಯವರ ವಿಚಾರಣೆಯೂ ನಡೆದಿತ್ತು. ಸುಶಾಂತ್‌ ಸಿಂಗ್‌ ಸಾವಿನ ನಂತರ ಬಾಲಿವುಡ್‌ನಲ್ಲಿ ಇರುವ ಮಾದಕ ವಸ್ತು ಜಾಲ ಬೆಳಕಿಗೆ ಬಂದಿತ್ತು. ಸಾರಾ ಅಲಿ ಖಾನ್‌, ದೀಪಿಕಾ ಪಡುಕೋಣೆ, ರಾಕುಲ್‌ ಪ್ರೀತ್‌ ಸಿಂಗ್‌, ಶ್ರದ್ಧಾ ಕಪೂರ್‌, ಭಾರತಿ ಸಿಂಗ್ ಸೇರಿದಂತೆ ಅನೇಕರನ್ನು ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ಸಂದರ್ಭದಲ್ಲಿನ ವಿಚಾರಣೆ ವೇಳೆ ನಟಿ ರಿಯಾ ಚಕ್ರವರ್ತಿ ಅವರು ಡ್ರಗ್‌ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ವಿಚಾರ ಅವರ ವಾಟ್ಸ್​ಆ್ಯಪ್​ ಸಂದೇಶಗಳಿಂದ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ ಅಧಿಕಾರಿಗಳು ರಿಯಾ ವಿರುದ್ಧ ಕ್ರಿಮಿನಲ್‌ ಕೇಸ್‌ (Criminal case) ದಾಖಲು ಮಾಡಿ, ತನಿಖೆ ಚುರುಕುಗೊಳಿಸಿದ್ದರು.

ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ

ಸುಶಾಂತ್ ಸಾಯುವ ಸಮಯದ ಕೆಲ ದಿನಗಳಿಗೂ ಮುಂಚೆ ರಿಯಾ ಅವರು ಆ ಅಪಾರ್ಟ್‌ಮೆಂಟ್‌ನಿಂದ ಹೊರಬಿದ್ದಿರೋದು ಇನ್ನಷ್ಟು ಅನುಮಾನ ಮೂಡಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಒಂದು ತಿಂಗಳ ಜೈಲು ವಾಸದ ನಂತರ ರಿಯಾ ಅವರು ಮುಂಬೈ ಹೈಕೋರ್ಟ್‌ನಿಂದ (High court) ಜಾಮೀನು ಪಡೆದು ಹೊರಬಂದಿದ್ದರು. ಆದರೆ ತಮಗೂ ಈ ಸಾವಿಗೂ ಸಂಬಂಧವಿಲ್ಲ ಎಂದು ರಿಯಾ ಹೇಳುತ್ತಲೇ ಬಂದಿದ್ದರು. ಸುಶಾಂತ್​ ಸಾವಿನ ಬಳಿಕ ಕುಗ್ಗಿ ಹೋಗಿದ್ದ ರಿಯಾ, ಸುಶಾಂತ್​ ಅವರನ್ನು ನೆನೆದು ಮೇಲಿಂದ ಮೇಲೆ ಭಾವುಕರಾಗಿ ಪೋಸ್ಟ್​ (Post) ಮಾಡುತ್ತಲೇ ಬಂದಿದ್ದಾರೆ. 

View post on Instagram