Sushant Singh ಹುಟ್ಟುಹಬ್ಬದ ಸವಿ ನೆನಪಲ್ಲಿ ಭಾವುಕ ಪತ್ರ ಬರೆದ ಸಹೋದರಿ ಶ್ವೇತಾ
ಎಸ್‌ಎಸ್‌ಆರ್ ಹುಟ್ಟುಹಬ್ಬ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋ. ಸಹೋರಿ ಪೋಸ್ಟ್ ವೈರಲ್...

2013ರಲ್ಲಿ Kai Po Che ಚಿತ್ರದ ಮೂಲಕ ಬಿ-ಟೌನ್‌ಗೆ ಪಾದಾರ್ಪಣೆ ಮಾಡಿದ ಸುಶಾಂತ್ ಸಿಂಗ್ 13 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2008ರಲ್ಲಿ ಕಿರುತೆರೆ ಜರ್ನಿ ಆರಂಭಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ಸುಶಾಂತ್ ತುಂಬಾ ಬೇಗ ಜನರಿಗೆ ಕನೆಕ್ಟ್ ಆಗುತ್ತಿದ್ದರು. ಆದರೆ ವಿಧಿ ಬೇರೆಯೇ ಇತ್ತು... 2020ರ ಜೂನ್ 14ರಂದು ಸುಶಾಂತ್ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾವಿಗೆ ಕಾರಣವೇನೆಂದು ಈಗಲೂ ತನಿಖೆ ನಡೆಯುತ್ತಿದೆ.....
ಇಂದು ಸುಶಾಂತ್ ಸಿಂಗ್ ರಾಜ್‌ಪುತ್ ಹುಟ್ಟುಹಬ್ಬ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನ ಹಳೆಯ ವಿಡಿಯೋಗಳು ಮತ್ತು ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಂಡು ವಿಶ್ ಮಾಡುತ್ತಿದ್ದಾರೆ. ಸುಶಾಂತ್ ಸಹೋದರಿ ಶ್ವೇತಾ ಪೋಸ್ಟ್ ಕೂಡ ವೈರಲ್ ಆಗಿದೆ. ಸುಶಾಂತ್ ನಗು ಮುಖ ನೋಡಿ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.
ಶ್ವೇತಾ ಪೋಸ್ಟ್:
'ಹ್ಯಾಪಿ ಬರ್ತಡೇ ನನ್ನ ಕ್ಯೂಟ್ ಆಂಡ್ ಸ್ವೀಟ್ ಬರ್ದರ್. ನೀನು ಎಲ್ಲೇ ಇದ್ದರೂ ಖುಷಿಯಾಗಿರು. ಮೇಲಿರುವ ಶಿವ್ ಜೀ ಜೊತೆಗಿರುವ ನೀನು ಎನ್ನುವ ಭಾವನೆ ನನ್ನದು. ಲಕ್ಕ ಮಾಡಲಾಗದಷ್ಟು ನಿನ್ನನ್ನು ಪ್ರೀತಿ ಮಾಡುತ್ತಿರುವೆ. ನಮ್ಮ ಶಕ್ತಿ ನಿನ್ನ ಜೊತೆಗಿರಲಿ. ನೀನು ಒಮ್ಮೆ ಕೆಳಗೆ ಏನಾಗುತ್ತಿದೆ ಎಂದು ನೋಡಬೇಕು, ದೊಡ್ಡ ಮ್ಯಾಜಿಕ್ ಕ್ರಿಯೇಟ್ ಮಾಡಿರುವೆ. ಅದೆಷ್ಟೋ ಸುಶಾಂತ್‌ಗಳಿಗೆ ನೀನು ಜನ್ಮ ಕೊಟ್ಟಿರುವೆ ಅವರಿಗೆಲ್ಲಾ ನಿನ್ನಂತೆ ಚಿನ್ನದಂತ ಮನಸ್ಸು. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಬೇಬಿ' ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಸುಶಾಂತ್ ಮುದ್ದಾಡುತ್ತಿದ್ದಾರೆ.
Sushant Singh case; ನಿಮ್ಮ ಮೇಲೆ ನಂಬಿಕೆ ಇದೆ; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ಸುಶಾಂತ್ ಸಹೋದರಿ ಮಾತು
ಸುಶಾಂತ್ ಹುಟ್ಟುಹಬ್ಬದ ದಿನವೂ #JusticeForSushantSinghRajput ಟ್ರೆಂಡ್ ಆಗುತ್ತಿದೆ. ವಿಶ್ ಮಾಡುತ್ತಾರೆ ಹಾಗೂ ನ್ಯಾಯ ಕೊಡಿಸಿ ಎನ್ನುತ್ತಾರೆ.
ಶ್ವಾನ ನಿಧನ:
ಸುಶಾಂತ್ ಸಿಂಗ್ ಪ್ರೀತಿಯ ನಾಯಿ ಫಡ್ಜ್ ನಿಧನಹೊಂದಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಫಡ್ಜ್ ನಿಧನ ಹೊಂದಿದೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಸುಶಾಂತ್ ಮುದ್ದಿನ ನಾಯಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಫಡ್ಜ್ ಜೊತೆ ಇರುವ ಸುಶಾಂತ್ ಸಿಂಗ್ ಫೋಟೋಗಳನ್ನು ಶೇರ್ ಮಾಡಿ ಪ್ರಿಯಾಂಕಾ ಸಿಂಗ್ ಸ್ನೇಹಿತನ ಜೊತೆ ನೀನು ಕೂಡ ಸ್ವರ್ಗ ಸೇರಿದೆ ಎಂದು ಹೇಳಿದ್ದಾರೆ. ಇಷ್ಟು ಕಾಲ ಫಡ್ಜ್. ನೀನು ಕೂಡ ನಿನ್ನ ಸ್ನೇಹಿತನ ಸ್ವರ್ಗದ ಟೆರಿಟರಿ ಸೇರಿಕೊಂಡೆ. ಶೀಘ್ರದಲ್ಲೇ ಅನುಸರಿಸಲಾಗುವುದು. ನಮ್ಮ ಛಿದ್ರವಾಗಿದೆ' ಎಂದು ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ 'ಆತ್ಮ'ಕ್ಕೆ ಹೆದರಿ ಫ್ಲ್ಯಾಟ್ ಖಾಲಿ! ಎರಡೂವರೆ ವರ್ಷದ ಬಳಿಕ ಸಿಕ್ಕ ಟೆನೆಂಟ್!
ಸುಶಾಂತ್ ಮನೆ ಬಾಡಿಗೆ:
ಇವರ ಸಾವಿನ ಬಗ್ಗೆ ಭಾರಿ ಸುದ್ದಿಯಾಗುತ್ತಲೇ ಅಪಾರ್ಟ್ಮೆಂಟ್ ಬಳಿ ಬರಲು ಜನರು ಹೆದರುತ್ತಿದ್ದಾರೆ. ಸುಶಾಂತ್ ಸಿಂಗ್ ಅವರ ಆತ್ಮ ಅಲ್ಲಿಯೇ ಅಲೆದಾಡುತ್ತಿರಬಹುದು ಎಂದು ನಂಬಿರುವ ಜನರು, ಬಾಡಿಗೆಗೆ ಈ ಮನೆಗೆ ಬರಲು ಹಿಂದೇಟು ಹಾಕುತ್ತಿದ್ದ ಕಾರಣ ಕಳೆದ ಎರಡೂವರೆ ವರ್ಷಗಳಿಂದ ಮನೆ ಖಾಲಿಯೇ ಇದೆ. ಧೈರ್ಯ ಮಾಡಿ ಕೆಲವರು ತಾವು ಬಾಡಿಗೆಗೆ ಬರುತ್ತೇವೆ ಎಂದು ಹೇಳುತ್ತಿದ್ದರೂ ಅದ್ಯಾಕೋ ಕೊನೆ ಕ್ಷಣದಲ್ಲಿ ಬರಲು ನಿರಾಕರಿಸಿರುವ ಘಟನೆಗಳೂ ನಡೆಯುತ್ತಿವೆ. ಸುಮಾರು 2,500 ಚದರ ಅಡಿಯ ಈ ಅಪಾರ್ಟ್ಮೆಂಟ್ ನಾಲ್ಕು ಬೆಡ್ರೂಮ್ಗಳನ್ನು ಹೊಂದಿದ್ದು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇಂಥ ಐಷಾರಾಮಿ ಅಪಾರ್ಟ್ಮೆಂಟ್ಗಳಿಗೆ, ಅದರಲ್ಲಿಯೂ ಚಿತ್ರನಟನೊಬ್ಬ ನೆಲೆಸಿರುವ ಮನೆಗೆ ಅಭಿಮಾನಿಗಳು ಮುಗಿಬಿದ್ದು ಬಾಡಿಗೆಗೆ ಬರುವುದು ಸಾಮಾನ್ಯ. ಆದರೆ ಸುಶಾಂತ್ ಸಿಂಗ್ ಅವರ ಸಾವಿನ ನಂತರದ ಭಯದಿಂದಾಗಿ ಇಲ್ಲಿ ಮಾತ್ರ ಬಾಡಿಗೆದಾರರು ಯಾರೂ ಬರುತ್ತಿಲ್ಲ.