Asianet Suvarna News Asianet Suvarna News

ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್​ ಖಾನ್​ ಕಣ್ಣೀರಿಂದೇ ಭಾರಿ ಚರ್ಚೆ!

ಆಮೀರ್​  ಪುತ್ರಿ ಇರಾ ಖಾನ್​ ಅವರ ವಿವಾಹದ ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಆಮೀರ್ ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಟ್ರೋಲಿಗರು ಹೇಳ್ತಿರೋದೇನು?
 

On Ira Khans wedding Aamir Khan is emotional and shed tears video viral suc
Author
First Published Jan 12, 2024, 5:26 PM IST

 ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು  ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಕಳೆದ 3ರಂದು ಮದುವೆಯಾದರು.  2020ರ ಇದೇ ದಿನದಂದು ಅಂದರೆ  ಜನವರಿ 3ರಂದು  ಇರಾ ಮತ್ತು ಶಿಖರೆ ಅವರು ಮೊದಲು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ  ಮದುವೆಯಾಗಿದೆ ಜೋಡಿ.  ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮದುವೆ ಸಂಭ್ರಮ ಮುಗಿದು ವಾರವಾಗಿದ್ದರೂ ಮದುವೆಯ ಒಂದೊಂದೇ ವಿಡಿಯೋಗಳ ವೈರಲ್​ ಆಗುತ್ತಿವೆ. ಇದರಲ್ಲಿ ಗಮನ ಸೆಳೆದಿರುವುದು ಇರಾ ಮತ್ತು ಶಿಖರ್​ ಅವರ ಕ್ರೈಸ್ತ ಸಂಪ್ರದಾಯದಲ್ಲಿ ಮದುವೆ ಹಾಗೂ ಈ ಸಂದರ್ಭದಲ್ಲಿ ಅಪ್ಪ ಆಮೀರ್​ ಖಾನ್​ ಕಣ್ಣೀರು ಹಾಕುತ್ತಿರುವುದು!

ಅಷ್ಟಕ್ಕೂ, ಬಹುತೇಕರಿಗೆ ತಿಳಿದಿರುವಂತೆ ಆಮೀರ್​ ಖಾನ್​ ತಮ್ಮ ಇಬ್ಬರೂ ಪತ್ನಿಯರಿಗೆ ಡಿವೋರ್ಸ್​ ಕೊಟ್ಟಿದ್ದಾರೆ. ಈ ಇಬ್ಬರೂ ಪತ್ನಿಯರೂ ಹಿಂದೂಗಳೇ.   ಆಮೀರ್​ ಖಾನ್​ ಅವರ ಮೊದಲ ಪತ್ನಿ  ರೀನಾ ದತ್ತಾ. ಇರಾ ಖಾನ್​ ಈ ದಂಪತಿ ಪುತ್ರಿ.  ದ್ವಿತೀಯ ಪತ್ನಿ ಹೆಸರು ಕಿರಣ್​ ರಾವ್. ಇದೀಗ  ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಆದರೆ ಮದುವೆಯಲ್ಲಿ ಎರಡನೆಯ ಪತ್ನಿ ಕಿರಣ್​ ಕೂಡ ಹಾಜರಾಗಿ ಗಮನ ಸೆಳೆದಿದ್ದರು.

ಮದ್ವೆಗೆ ಜಿಮ್​ ಡ್ರೆಸ್​, ಪಾರ್ಟಿಗೆ ನೈಟ್​ ಡ್ರೆಸ್​- ಇನ್ನು ಇವ್ರ ಡ್ಯಾನ್ಸ್​ ಅಂತೂ ನೋಡೋಕಾಗ್ತಿಲ್ಲ ಅಂತಿದ್ದಾರೆ ನೆಟ್ಟಿಗರು!
 
ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ, ಇರಾ ಮತ್ತು ನೂಪುರ್​ ಕ್ರೈಸ್ತ ಮಾದರಿಯಲ್ಲಿ ಮದುವೆಯಾಗುತ್ತಿರುವುದನ್ನು ನೋಡಬಹುದು. ಇದಾಗಲೇ ವಿವಾಹದ ಸಂದರ್ಭದಲ್ಲಿ  ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರೆ,   ವರ ಶಿಖರ್​ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿ ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಮಾತ್ರವಲ್ಲದೇ ಮದುವೆಗೆ ಕುದುರೆ ಮೇಲೆ ಬರದೇ  ಜಾಗಿಂಗ್​ ಮಾಡಿಕೊಂಡು ಬಂದಿದ್ದರು. ಆದರೆ ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ಕ್ರೈಸ್ತ ಸಂಪ್ರದಾಯದಂತೆ ಜೋಡಿ ಉಂಗುರ ಬದಲಿಸಿಕೊಳ್ಳುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಆಮೀರ್​ ಖಾನ್​, ಪುತ್ರಿಯ ಮದುವೆ ನೋಡಿ ಭಾವುಕರಾಗಿ ಕಣ್ಣೀರು ಒರೆಸಿಕೊಂಡಿದ್ದಾರೆ. 

ಈ ಇಡೀ ವಿಡಿಯೋದಲ್ಲಿನ ದೃಶ್ಯ ನೋಡಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಹಿಂದೂ-ಮುಸ್ಲಿಂ ದಂಪತಿಯ ಮಗಳಾಗಿರುವ ಇರಾ ಕ್ರೈಸ್ತ ಧರ್ಮದಂತೆ ಮದ್ವೆಯಾಗುತ್ತಿದ್ದಾರೆ. ಆಮೀರ್​ ಖಾನ್​ ಎಷ್ಟು ಜಾತ್ಯತೀತರು ಎಂದು ತಿಳಿಯುತ್ತದೆ ನೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮೂರ್ನಾಲ್ಕು ವರ್ಷ ಇರಾ ಮತ್ತು ಶಿಖರ್​ ಸಂಬಂಧದಲ್ಲಿದ್ದರು, ಇದೀಗ ಮದ್ವೆ ನೋಡುತ್ತಿದ್ದಂತೆಯೇ ಆಮೀರ್ ಖಾನ್​ ಅತ್ತದ್ದು ಯಾಕೆ ಎಂದೇ ತಿಳಿಯುತ್ತಿಲ್ಲ ಎನ್ನುತ್ತಿದ್ದರೆ, ಆ ವಿಡಿಯೋ, ಈ ವಿಡಿಯೋ ಜೊತೆ ಸೇರಿಸಲಾಗಿದೆ. ಎರಡೂ ಸೆಪೆರೇಟ್​ ವಿಡಿಯೋಗಳು ಎಂದು ಮತ್ತೊಂದಿಷ್ಟು ಮಂದಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡುತ್ತಿದ್ದಾರೆ.  ಮಗಳನ್ನು ಅಮ್ಮನ ಮನೆಯಿಂದ ಕಳಿಸುವಾಗ ಅಪ್ಪ ಭಾವುಕರಾಗುವುದು ಸಹಜ. ಇದಕ್ಕೂ ಟೀಕೆ ಮಾಡುವುದು ಸರಿಯಲ್ಲ ಎಂದು ಇನ್ನು ಕೆಲವರು ಆಮೀರ್​ ಪರ ವಕಾಲತ್ತು ವಹಿಸುತ್ತಿದ್ದಾರೆ. 

ಸೂಟ್​-ಬೂಟ್​ ಬದ್ಲು ಚೆಡ್ಡಿ-ಬನಿಯನ್‌ನಲ್ಲಿ ಮದ್ವೆಯಾದ ಗಂಡನ ಬಗ್ಗೆ ಆಮೀರ್​ ಪುತ್ರಿ ಇರಾ ಹೇಳಿದ್ದೇನು?

 

Follow Us:
Download App:
  • android
  • ios