ಮದುವೆಯ ದಿನ  ಸೂಟ್​-ಬೂಟ್​ ಬದ್ಲು ಚೆಡ್ಡಿ-ಬನಿಯನ್‌ನಲ್ಲಿ ಬಂದ ಪತಿ ನೂಪುರ ಶಿಖರೆ ಕುರಿತು ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಹೇಳಿದ್ದೇನು?  

 ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಕಳೆದ 3ರಂದು ಮದುವೆಯಾದರು. 2020ರ ಇದೇ ದಿನದಂದು ಅಂದರೆ ಜನವರಿ 3ರಂದು ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ ಮದುವೆಯಾಗಿದೆ ಜೋಡಿ. ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ ನಟ ನಟಿಯರ, ಅವರ ಮಕ್ಕಳ ವಿವಾಹ ಎಂದರೆ ಎಲ್ಲರ ಕಣ್ಣೂ ಅವರು ಏನು ಧರಿಸಿದ್ದರು, ಅದನ್ನು ಯಾರು ಡಿಸೈನ್ ಮಾಡಿದ್ದು, ಯಾವೆಲ್ಲ ಆಭರಣ ಹಾಕಿದ್ದಾರೆ ಇತ್ಯಾದಿಗಳ ಮೇಲಿರುತ್ತದೆ. ಆ ಬಗ್ಗೆ ಸಾಕಷ್ಟು ಫ್ಯಾಷನ್ ಸುದ್ದಿಯೂ ಆಗುತ್ತದೆ. ಫ್ಯಾಷನ್ ವಿಷಯದಲ್ಲಿ ತಾವು ಸಾಮಾನ್ಯರ ಐಕಾನ್ ಆಗಬೇಕೆಂದು ಬಾಲಿವುಡ್ ಮಂದಿಯೂ ಬಯಸುತ್ತಾರೆ. 

ಆದರೆ, ಇರಾ- ನೂಪುರ್ ವಿವಾಹ ಸಮಾರಂಭದಲ್ಲಿ ಮಾತ್ರ ನೂಪುರ್ ಧರಿಸಿದ್ದ ಬಟ್ಟೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಅದೇನು ಬಹಳ ಚೆನ್ನಾಗಿತ್ತೆಂದಲ್ಲ, ಬದಲಿಗೆ ವಿಚಿತ್ರವಾಗಿತ್ತು ಎಂಬ ಕಾರಣಕ್ಕೆ. ಆಮೀರ್ ಖಾನ್ ಕುಟುಂಬವಷ್ಟೇ ಅಲ್ಲ, ಅಂಬಾನಿ ಕುಟುಂಬವೂ ಭಾಗವಹಿಸಿದ್ದಂತ ವಿವಾಹ ಸಮಾರಂಭದಲ್ಲಿ ಆಮೀರ್ ಅಳಿಯ ಯಾರಿಗೂ ಕೇರ್ ಮಾಡದೆ ಚೆಡ್ಡಿ ಬನಿಯನ್ ಧರಿಸಿ ವಿವಾಹ ನೋಂದಣಿ ಕಾರ್ಯ ಪೂರೈಸಿದ್ದರು. ಇದರ ವಿಡಿಯೋ ಸಕತ್​ ವೈರಲ್​ ಆದ ಬೆನ್ನಲ್ಲೇ ಹಲವರು ಟ್ರೋಲ್​ ಕೂಡ ಮಾಡಿದ್ದರು.

ಮದ್ವೆ ಎಂಟ್ರಿ ಅಂದ್ರೆ ಇದಪ್ಪಾ...! ಮದುಮಕ್ಕಳನ್ನು ಬಿಟ್ಟು ಅಂಬಾನಿ ದಂಪತಿಯನ್ನೇ ನೋಡಿದ ಅತಿಥಿಗಳು!


ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್, ಆತನ ಪತ್ನಿಯರು ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದಿದು ಬಹಳ ವಿಚಿತ್ರವಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್‌ಗಳು ಥಹರೇವಾರಿ ಕಮೆಂಟ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಇರಾ ಖಾನ್​. ಟ್ರೋಲಿಗರು ಮಾಡಿರುವ ಟ್ರೋಲಿಗೆ ಸೀರಿಯಸ್​ ಅಥ್ವಾ ಕೋಪದಿಂದ ಉತ್ತರಿಸಿದ ಇರಾ, ಒಂದೇ ವಾಕ್ಯದಲ್ಲಿ ಉತ್ತರ ನೀಡಿದ್ದಾರೆ. ಅದೇನೆಂದರೆ, ನೂಪುರ್ ಅವರು ಕುದುರೆ ಹತ್ತಿ ದಿಬ್ಬಣದಲ್ಲಿ ಬರಲಿಲ್ಲ. ಮದುವೆ ಸ್ಥಳಕ್ಕೆ ಅವರು ಜಾಗಿಂಗ್​ ಮಾಡಿಕೊಂಡು ಬಂದಿದ್ದರು. ಇದೇ ಕಾರಣಕ್ಕೆ ಬನಿಯನ್​-ಚೆಡ್ಡಿ ಧರಿಸಿದ್ದರು ಎಂದಿದ್ದಾರೆ. ಇದರ ಫೋಟೋಗಳನ್ನೂ ಅವರು ಶೇರ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನೂಪುರ್​ ಇರಾಳನ್ನು ಪ್ರಪೋಸ್​ ಮಾಡುವಾಗಲೂ ಇದೇ ರೀತಿ ಕಾಣಿಸಿಕೊಂಡಿದ್ದರಿಂದ ಮದುವೆಯ ದಿನವೂ ಹೀಗೆಯೇ ಕಾಣಿಸಿಕೊಳ್ಲಬೇಕು ಎಂದು ಈ ರೀತಿಯ ಡ್ರೆಸ್​ ಹಾಕಿಕೊಂಡು ಬಂದಿದ್ದರು ಎನ್ನಲಾಗಿದೆ. 

ಮದುವೆ ಮನೆಯಲ್ಲಿ ಮದುಮಗನ ಡ್ರೆಸ್​ ಗಮನ ಸೆಳೆದಂತೆ, ಮತ್ತೊಂದು ಗಮನ ಸೆಳೆದದ್ದು ಆಮೀರ್​ ಖಾನ್​ ಅವರ ಇಬ್ಬರು ಮಾಜಿ ಪತ್ನಿಯರು. ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮದ್ವೆಯಾಗಿದ್ದರೆ, ದ್ವಿತೀಯ ಪತ್ನಿ ಕಿರಣ್​ ರಾವ್​ ಕೂಡ ಗಮನ ಸೆಳೆದರು. ಇರಾ ಖಾನ್​ ನಟ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ. ಅಂದಹಾಗೆ ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಗೆ ಮೊದಲ ಪತ್ನಿ ಕಿರಣ್​ ಕೂಡ ಹಾಜರಾಗಿದ್ದಾರೆ. ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 

ಮಗಳ ಮದ್ವೆ ದಿನ ಆಮೀರ್​ ಖಾನ್​ ಕಿಸ್​ ಕೊಟ್ರೆ ಗುಟ್ಟಾಗಿ ​ಕೆನ್ನೆ ಒರೆಸಿಕೊಂಡ ಮಾಜಿ ಪತ್ನಿ! ಕ್ಯಾಮೆರಾ ಕಣ್ಣಿಗೆ ಬೀಳದೇ ಇರುತ್ತಾ?