ಅರೆ ಯಾರ್...ಹಿಂದಿನಿಂದ ತೆಗೆಯಬೇಡಿ, ಇದು ಜಿಮ್‌ಗೆ ತೆರಳಿದ್ದ ನಟಿ ಪಾಪ್ಸ್‌ಗೆ ನೀಡಿದ ಸೂಚನೆ. ಆದರೆ ಪಾಪರಾಜಿಗಳು ಕೇಳಬೇಕಲ್ಲ, ಹೀಗಾಗಿ ಕೈ ಅಡ್ಡ ಹಿಡಿದುಕೊಂಡೆ ನಟಿ ಜಿಮ್‌ಗೆ ತೆರಳಿದ ದೃಶ್ಯ ಸೆರೆಯಾಗಿದೆ. 

ಮುಂಬೈ(ಜು.02) ಹಿಂದಿನಿಂದ ತೆಗಿಬೇಡಿ ಎಂದು ಮನವಿ ಮಾಡಿದರೂ ತೆಗೆದೇ ಬಿಟ್ಟರು. ಬಾಲಿವುಡ್ ಖ್ಯಾತ ನಟ ಹಾಗೂ ನಿರ್ಮಾಪಕನ ಪುತ್ರಿ ಶನಯಾ ಕಪೂರ್ ಜಿಮ್‌ಗೆ ತೆರಳುತ್ತಿದ್ದ ವೇಳೆ ಪಾಪರಾಜಿಗಳು ಸುತ್ತುವರಿದಿದ್ದಾರೆ. ಜಿಮ್ ಸ್ಯೂಟ್‌ನಲ್ಲಿದ್ದ ಶನಯಾ ಕಪೂರ್ ಮುಜಗರಕ್ಕೀಡಾಗಿದ್ದಾರೆ. ಈ ವೇಳೆ ಹಿಂದಿನಿಂದ ತೆಗಯಬೇಡಿ ಎಂದು ಮನವಿ ಮಾಡಿದ್ದಾರೆ. ಬಳಿಕ ನೇರವಾಗಿ ಜಿಮ್‌ಗೆ ತೆರಳಿದ್ದಾರೆ. ಆದರೆ ಪಾಪರಾಜಿಗಳು ಮಾತ್ರ ಕ್ಯಾಮೆರಾ ಆಫ್ ಮಾಡಿಲ್ಲ, ಹೀಗಾಗಿ ಕೈ ಅಡ್ಡ ಹಿಡಿದುಕೊಂಡೆ ಶನಯಾ ಕಪೂರ್ ಜಿಮ್‌ಗೆ ತರಳಿದ ದೃಶ್ಯ ಸೆರೆಯಾಗಿದೆ.

ಬಾಲಿವುಡ್‌ನ ಸೆಲೆಬ್ರೆಟಿ ಸಂಜಯ್ ಕಪೂರ್ ಹಾಗೂ ಮಹದೀಪ್ ಕಪೂರ್ ಪುತ್ರಿ ಶನಯಾ ಕಪೂರ್ ಜಿಮ್‌ಗೆ ತೆರಳುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಶನಯಾ ಕಪೂರ್ ಮನೆಯಿಂದ ಕಾರಿನ ಮೂಲಕ ಜಿಮ್‌ ಅಭ್ಯಾಸಕ್ಕೆ ಆಗಮಿಸಿದ್ದಾರೆ. ಕಪ್ಪು ಬಣ್ಣದ ಜಿಮ್ ಅಥ್ಲೀಶರ್ ಡ್ರೆಸ್ ಧರಿಸಿದ್ದ ಶನಯಾ ಕಾರಿನಿಂದ ಇಳಿದು ಜಿಮ್ ಸೆಂಟರ್‌ಗೆ ನಡೆದುಕೊಂಡು ಸಾಗಿದ್ದಾರೆ.

ಇವತ್ತು ಫುಲ್ ಟೈಟ್-ಬಿಟ್ಟುಬಿಡಿ, ಬ್ಯಾಕ್‌ಲೆಸ್ ಫೋಟೋಗೆ ಮುಗಿಬಿದ್ದ ಪಾಪ್ಸ್‌ಗೆ ಉರ್ಫಿ ಮನವಿ ವೈರಲ್!

ಶನಯಾ ಆಗಮಿಸುತ್ತಿದ್ದಂತೆ ಪಾಪರಾಜಿಗಳು ಸುತ್ತುವರೆದಿದ್ದಾರೆ. ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಹಿಂದಿನಿಂದ ಸೆರೆ ಹಿಡಿದ್ದಾರೆ. ಜಿಮ್ ಸೆಂಟರ್ ಮೆಟ್ಟಲು ಹತ್ತುವ ಮುನ್ನ ಪಾಪರಾಜಿಗಳಿಗೆ ಕೈಬೀಸಿದ ಶನಯಾ ಕಪೂರ್, ದಯವಿಟ್ಟು ಹಿಂದಿನಿಂದ ರೆಕಾರ್ಡ್ ಮಾಡಬೇಡಿ, ಥ್ಯಾಂಕ್ಯೂ ಎಂದಿದ್ದಾರೆ. ಬಳಿಕ ಜಿಮ್ ಸೆಂಟರ್ ಮೆಟ್ಟಿಲು ಹತ್ತಲು ಆರಂಭಿಸಿದ್ದಾರೆ.

View post on Instagram

ಶನಯಾ ಕಪೂರ್ ಮನವಿ ಮಾಡಿದಾಗ ಒಕೆ ಒಕೆ ಎಂದ ಪಾಪರಾಜಿಗಳು ವಿಡಿಯೋ ಹಾಗೂ ಫೋಟೋ ತೆಗೆಯುವುದನ್ನು ನಿಲ್ಲಿಸಿಲ್ಲ. ಹಿಂದಿನಿಂದಲೇ ಫೋಟೋ ಕ್ಲಿಕ್ ಹಾಗೂ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದರಿಂದ ಶನಯಾ ಕಪೂರ್ ಕೈಗಳನ್ನು ಹಿಂಭಾಗಕ್ಕೆ ಅಡ್ಡ ಹಿಡಿದುಕೊಂಡೇ ಮೆಟ್ಟಿಲು ಹತ್ತಿದ್ದಾರೆ. 

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪಾಪರಾಜಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಹಲವು ಬಾರಿ ಸೆಲೆಬ್ರೆಟಿಗಳು ಹಿಂದಿನಿಂದ ಫೋಟೋ, ವಿಡಿಯೋ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ. ಶನಯಾ ಕಪೂರ್ ಮನವಿ ಮಾಡಿದರೂ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದು ಸರಿಯಲ್ಲ, ಅವರ ಅನುಮತಿ ಇಲ್ಲದೆ ಫೋಟೋ, ವಿಡಿಯೋ ತೆಗೆಯುವುದು ತಪ್ಪು. ಅದರಲ್ಲೂ ಈ ರೀತಿ ಹಿಂದಿನಿಂದ ತೆಗೆಯುವುದು ತಪ್ಪ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸೆಲೆಬ್ರೆಟಿಗಳ ಖಾಸಗಿ ತನಕ್ಕೆ ಗೌರವ ನೀಡಿ ಎಂದು ಮತ್ತೆ ಕೆಲವರು ಸೂಚಿಸಿದ್ದಾರೆ.

ನಾನೊಬ್ಳು ಭಾರತೀಯ ನಾರಿ... ಕ್ಯಾಮೆರಾ ಎಲ್ಲೆಲ್ಲೋ ಝೂಮ್​ ಮಾಡ್ಬೇಡಿ... ರಾಖಿ ಗರಂ