ಇವರ ಮದುವೆ ತುಂಬಾ ಸರಳವಾಗಿ ನಡೆದಿದೆ. ಶಾಂತಾ ಮಕ್ವಾನಾ ಮತ್ತು ರಮೇಶ್ ದಂಗರ್ ವಿವಾಹ ಸಿಂಪಲ್ ಆಗಿ ನಡೆದರೂ ನಂತರ ಬಹಳಷ್ಟು ಜನರ ಪ್ರೀತಿಗೆ ಪಾತ್ರವಾಗಿದೆ. ಈ ಮದುವೆ ಗುಜರಾತ್‌ನ ಜುನಾಗಧ್‌ನಲ್ಲಿ ಮಾತಿನ ವಿಷಯವಾಗಿದೆ.

ಇವರಿಬ್ಬರ ಹೈಟ್ ಸ್ವಲ್ಪಾನೂ ಮ್ಯಾಚ್ ಆಗಲ್ಲ, ವಯಸೂ ಮ್ಯಾಚ್ ಆಗಲ್ಲ, ಆದ್ರೆ ಮನಸು ಮಾತ್ರ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ. ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ.. ಈತ ಪ್ರೀತಿಸಿದ ಹುಡುಗಿಗೂ ಕಣ್ಣಿಲ್ಲ.

ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

ಮಖ್ವಾನಾ ನೀಳ ಸುಂದರಿ. ಈಕೆಯ ಹೈಟ್ 5.5 ಫೀಟ್ ಆದರೆ ಮದುವೆಯಾಗಿದ್ದೋ.. ಆಕೆಯ ಮೊಣಕಾಲಿನಷ್ಟೂ ಉದ್ದವಿಲ್ಲದ 2.5 ಫೀಟ್‌ನ ಯುವಕನನ್ನು. ಈ ಜೋಡಿಯ ವಯಸ್ಸಿನ ಅಂತರ 7 ವರ್ಷಗಳು. ಇದು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಅಂತಾರಲ್ಲ, ಅದೇ ರೀತಿ

ಕೇರಳ - ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಟ್ಟ ಮಧುಮಗಳು!

ನಾನು ಈ ಮದುವೆಯಿಂದ ಖುಷಿಯಾಗಿದ್ದೇನೆ. ನನಗೆ ಹುಟ್ಟಿನಿಂದಲೇ ಕಣ್ಣು ಕಾಣುವುದಿಲ್ಲ. ನನ್ನ ಪತಿ ಕುಳ್ಳಗಿರಬಹುದು. ಆದರೆ ಅವರ ಮನಸು ದೊಡ್ಡದು. ಅವರು ಒಳ್ಳೆಯ ವ್ಯಕ್ತಿ. ನಾವಿಬ್ಬರೂ ಒಂದೇ ಸಮುದಾಯದವರು. ಚೆನ್ನಾಗಿ ದುಡಿಯುತ್ತಾರೆ ಎಂದಿದ್ದಾರೆ 29 ವರ್ಷದ ಮಖ್ವಾನಾ. ಗಂಡನಂತೆ ತಾನೂ ಟೀಚರ್ ಆಗ್ಬೇಕು ಅಂತಾರೆ ಆಕೆ

ಜುನಾಗಢ್‌ನ ರಾಜೇಸರ್ ಹಳ್ಳಿಯ ಮಖ್ವಾನಾ, ನನ್ನ ಶಿಕ್ಷಣ ಮುಗಿಸಿ ನಾನೂ ಶಿಕ್ಷಕಿಯಾಗಬೇಕು ಎಂದಿದ್ದಾರೆ. ಸದ್ಯ ಇವರು ಬಿ.ಎಡ್ ಮಾಡುತ್ತಿದ್ದಾರೆ. ನಾನು ನನ್ನ ಪತ್ನಿಯ ಕನಸು ನನಸು ಮಾಡೋಕೆ ಎಲ್ಲವನ್ನೂ ಮಾಡುತ್ತೇನೆ. ನನ್ನದೇ ಕೆಲಸಕ್ಕೆ ಆಕೆಯೂಸೇರೋದು ಖುಷಿ ವಿಷಯ ಎನ್ನುತ್ತಾರೆ ವರ ಬುತವಾದರ್ ಗ್ರಾಮದ 38 ವರ್ಷದ ದಂಗರ್. ಸದ್ಯ ಇವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.

ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!

ಇವರಿಬ್ಬರೂ ಸುಶಿಕ್ಷಿತರು. ಇಬ್ಬರಿಗೂ ಸಂಗಾತಿ ಹುಡುಕೋದು ಕಷ್ಟವಾಗಿತ್ತು. ಇದು ಹಿರಿಯರು ಮಾತಾಡಿ ಮಾಡಿದ ಮದುವೆ. ಎರಡೂ ಕುಟುಂಬದ ಹಿರಿಯರು ಮಾತನಾಡಿ ಫಿಕ್ಸ್ ಮಾಡಿದ್ದಾರೆ ಎಂದಿದ್ದಾರೆ ವರನ ಸಹೋದರ ರಾಮ್ ದಂಗರ್