Asianet Suvarna News Asianet Suvarna News

ಮೋದಿ ಪಾತ್ರದ ಆಫರ್ ಬಗ್ಗೆ ನಟ ಸತ್ಯರಾಜ್ ಹೇಳಿಕೆಯೀಗ ಭಾರೀ ವೈರಲ್; ಹೀಗಂದ್ರಾ ನಟ?

ಬಡ ಕುಟುಂಬದಲ್ಲಿ ಜನಿಸಿದ್ದ ನರೇಂದ್ರ ದಾಮೋದರ ಮೋದಿಯವರು ತಮ್ಮ ಬಾಲ್ಯ ಜೀವನದಲ್ಲಿ ರೇಲ್ವೇ ಸ್ಟೇಷನ್‌ನಲ್ಲಿ ಟೀ ಮಾರುತ್ತ ತಮ್ಮ ಕುಟುಂಬದ ನಿರ್ವಹಣೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹಾಗೇ ಬೆಳೆಯುತ್ತ ಮೋದಿಯವರು ರಾಜಕೀಯಕ್ಕೆ ಎಂಟ್ರಿ...

Nobody approached me to play PM Modi Role says Kattappa fame actor Sathyaraj srb
Author
First Published May 22, 2024, 6:55 PM IST

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರವನ್ನು ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದ ನಟ ಸತ್ಯರಾಜ್ (Sathyaraj) ಹೇಳಿಕೆಯೊಂದ ಇದೀಗ ಭಾರೀ ವೈರಲ್ ಆಗತೊಡಗಿದೆ. ಇತ್ತೀಚೆಗಷ್ಟೇ ನಟ ಸತ್ಯರಾಜ್ ಅವರು ಬಾಲಿವುಡ್‌ನಲ್ಲಿ ಮುಂಬರಲಿರುವ ಮೋದಿ ಬಯೋಪಿಕ್‌ನಲ್ಲಿ (Modi Biopic)ಮುಖ್ಯ ಪಾತ್ರದಲ್ಲಿ, ಅಂದರೆ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ನಟ ಸತ್ಯರಾಜ್ ಅವರು ಆ ಸುದ್ದಿ ಸುಳ್ಳು ಎಂದಿದ್ದಾರೆ. ಅಲ್ಲಿಗೆ, ಮೋದಿ ಪಾತ್ರದಲ್ಲಿ ಇನ್ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಜಾಸ್ತಿಯಾಗಿದೆ.

ಮೋದಿ ಬಯೋಪಿಕ್‌ನಲ್ಲಿ ನಟ ಸತ್ಯರಾಜ್ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಎಸ್‌ಎಸ್ ರಾಜಮೌಳಿ ನಿರ್ದೇಶನ ಹಾಗೂ ಡಾರ್ಲಿಂಗ್ ಪ್ರಭಾಸ್ ನಟನೆಯ 'ಬಾಹುಬಲಿ' ಸೂಪರ್ ಹಿಟ್ ಚಿತ್ರದಲ್ಲಿ 'ಕಟ್ಟಪ್ಪ' ಪಾತ್ರದಲ್ಲಿ ನಟಿಸಿ ಭಾರೀ ಮಿಂಚಿದ್ದ ನಟ ಸತ್ಯರಾಜ್, ಇದೀಗ ಮುಂಬರಲಿರುವ ಮೋದಿ ಜೀವನ ಚರಿತ್ರೆಯಲ್ಲಿ ಮೋದಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಅಂದರೆ, ಬಾಹುಬಲಿ ಸಿನಿಮಾದಲ್ಲಿ ವಿಲನ್ ಅಗಿದ್ದ ನಟ ಸತ್ಯರಾಜ್ ಮೋದಿ ಬಯೋಪಿಕ್‌ನಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. 

ಮುಂಬರುವ ಮೋದಿ ಬಯೋಪಿಕ್‌ನಲ್ಲಿ 'ಕಟ್ಟಪ್ಪ' ಸತ್ಯರಾಜ್ ನಟನೆ, ಅಧಿಕೃತ ಘೋಷಣೆಯಷ್ಟೇ ಬಾಕಿ!

ಈಗಾಗಲೇ ಮೋದಿ ಜೀವನ ಚರಿತ್ರೆ ಆಧಾರಿತ ಬಯೋಪಿಕ್ ಚಿತ್ರವೊಂದು ನಟ ವಿವೇಕ್ ಒಬೆರಾಯ್ ನಾಯಕತ್ವದಲ್ಲಿ 2019ರಲ್ಲಿ ತೆರೆಗೆ ಬಂದಿತ್ತು. ಸದ್ಯ ಮುಂಬರುವ ಚಿತ್ರದ ಮಾತುಕತೆ ಹಾಗು ತಾರಾಗಣದ ಆಯ್ಕೆಗಳು ನಡೆಯುತ್ತಿದ್ದು, ಯಾರು ಮೋದಿ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿತ್ತು. ಅದಕ್ಕೆ ನಟ ಸತ್ಯರಾಜ್ ಈ ಪಾತ್ರದ ಪೋಷಣೆ ಮಾಡಲಿದ್ದಾರೆ ಎಂಬ ಉತ್ತರ ದೊರಕಿತ್ತು. ಆದರೆ, ಅದೀಗ ಸುಳ್ಳಾಗಿದೆ. 

ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್‌ ಮುಂದೂಡಿದ ಟೀಮ್!

ಬಡ ಕುಟುಂಬದಲ್ಲಿ ಜನಿಸಿದ್ದ ನರೇಂದ್ರ ದಾಮೋದರ ಮೋದಿಯವರು ತಮ್ಮ ಬಾಲ್ಯ ಜೀವನದಲ್ಲಿ ರೇಲ್ವೇ ಸ್ಟೇಷನ್‌ನಲ್ಲಿ ಟೀ ಮಾರುತ್ತ ತಮ್ಮ ಕುಟುಂಬದ ನಿರ್ವಹಣೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹಾಗೇ ಬೆಳೆಯುತ್ತ ಮೋದಿಯವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಆಡಳಿತ ನಡೆಸಿ ಜನಪ್ರಿಯ ನಾಯಕರಾಗಿ ಬೆಳೆದರು. ಬಳಿಕ ಅವರು ಭಾರತದ 14ನೇ ಪ್ರಧಾನಮಂತ್ರಿಯಾಗಿ ಈಗ ಎರಡನೇ ಅವಧಿಗೆ ಆಡಳಿತ ನಡೆಸುತ್ತಿದ್ದಾರೆ. 

ಹರಿಹರಪುರ ಕ್ಷೇತ್ರಕ್ಕೆ 'ಕಾಂತಾರ' ಖ್ಯಾತಿಯ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಭೇಟಿ, ಫ್ಯಾನ್ಸ್ ಥ್ರಿಲ್!

ಇಂಥ ಮಹಾನ್ ವ್ಯಕ್ತಿ ನರೇಂದ್ರ ಮೋದಿಯವರ ಜೀವನ ಆಧಾರಿತ 'ಮೋದಿ ಬಯೋಪಿಕ್' 2019ರಲ್ಲಿ ವಿವೇಕ್ ಒಬೆರಾಯ್ ಮುಖ್ಯ ಭೂಮಿಕೆಯಲ್ಲಿ ತೆರೆಗೆ ಬಂದಿತ್ತು. ಆ ಚಿತ್ರವನ್ನು ಒಮಂಗ್ ಕುಮಾರ್ (Omung Kumar) ನಿರ್ದೇಶನ ಮಾಡಿದ್ದರು. ಈ ಚಿತ್ರವು 24 ಮೇ 2019ರಲ್ಲಿ ತೆರೆಗೆ ಬಂದು ಭರ್ಜರಿ ರೆಸ್ಪಾನ್ಸ್ ಪಡೆದಿತ್ತು. 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮೋದಿ ಬಯೋಪಿಕ್ ನಿರೀಕ್ಷೆಯಂತೆ ಒಳ್ಳೆಯ ರೆಸ್ಪಾನ್ಸ್ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈಗ ಮುಂಬರುವ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮನೆಮಾಡಿದೆ.

ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು?

Latest Videos
Follow Us:
Download App:
  • android
  • ios