ಮುಂಬರುವ ಮೋದಿ ಬಯೋಪಿಕ್‌ನಲ್ಲಿ 'ಕಟ್ಟಪ್ಪ' ಸತ್ಯರಾಜ್ ನಟನೆ, ಅಧಿಕೃತ ಘೋಷಣೆಯಷ್ಟೇ ಬಾಕಿ!

ಎಸ್‌ಎಸ್ ರಾಜಮೌಳಿ ನಿರ್ದೇಶನ ಹಾಗೂ ಡಾರ್ಲಿಂಗ್ ಪ್ರಭಾಸ್ ನಟನೆಯ 'ಬಾಹುಬಲಿ' ಸೂಪರ್ ಹಿಟ್ ಚಿತ್ರದಲ್ಲಿ 'ಕಟ್ಟಪ್ಪ' ಪಾತ್ರದಲ್ಲಿ ನಟಿಸಿ ಭಾರೀ ಮಿಂಚಿದ್ದ ನಟ ಸತ್ಯರಾಜ್, ಇದೀಗ ಮುಂಬರಲಿರುವ ಮೋದಿ ಜೀವನ ಬಯೋಪಿಕ್‌ನಲ್ಲಿ ಮೋದಿ ಪಾತ್ರವನ್ನು..

Bahubali cinema Katappa fame actor Sathyaraj is set to play PM Narendra Modi upcoming biopic

ಮೋದಿ ಬಯೋಪಿಕ್‌ನಲ್ಲಿ ನಟ ಸತ್ಯರಾಜ್ ನಟಿಸಲಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನ ಹಾಗೂ ಡಾರ್ಲಿಂಗ್ ಪ್ರಭಾಸ್ ನಟನೆಯ 'ಬಾಹುಬಲಿ' ಸೂಪರ್ ಹಿಟ್ ಚಿತ್ರದಲ್ಲಿ 'ಕಟ್ಟಪ್ಪ' ಪಾತ್ರದಲ್ಲಿ ನಟಿಸಿ ಭಾರೀ ಮಿಂಚಿದ್ದ ನಟ ಸತ್ಯರಾಜ್, ಇದೀಗ ಮುಂಬರಲಿರುವ ಮೋದಿ ಜೀವನ ಚರಿತ್ರೆಯಲ್ಲಿ (Biopic)ನಲ್ಲಿ ಮೋದಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದರೆ, ಬಾಹುಬಲಿ ಸಿನಿಮಾದಲ್ಲಿ ವಿಲನ್ ಅಗಿದ್ದ ನಟ ಸತ್ಯರಾಜ್ ಮೋದಿ ಬಯೋಪಿಕ್‌ನಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. 

ನಟ ಸತ್ಯರಾಜ್ ಮುಖ್ಯವಾತ್ರದಲ್ಲಿ ನಟಿಸಲಿರುವ ಮೋದಿ ಬಯೋಪಿಕ್ ಎರಡನೇ ಪ್ರಯತ್ನವಾಗಿದೆ. ಈಗಾಗಲೇ ಮೋದಿ ಜೀವನ ಚರಿತ್ರೆ ಆಧಾರಿತ ಬಯೋಪಿಕ್ ಚಿತ್ರವೊಂದು ನಟ ವಿವೇಕ್ ಒಬೆರಾಯ್ ನಾಯಕತ್ವದಲ್ಲಿ 2019ರಲ್ಲಿ ತೆರೆಗೆ ಬಂದಿತ್ತು. ಸದ್ಯ ಮುಂಬರುವ ಚಿತ್ರದ ಮಾತುಕತೆ ಹಾಗು ತಾರಾಗಣದ ಆಯ್ಕೆಗಳು ನಡೆಯುತ್ತಿದ್ದು, ಯಾರು ಮೋದಿ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿತ್ತು. ಇದೀಗ, ನಟ ಸತ್ಯರಾಜ್ ಈ ಪಾತ್ರದ ಪೋಷಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಅಧಿಕೃತ ಘೋಷಣೆಗಾಗಿ ಕಾಯಲಾಗುತ್ತಿದೆ. 

ಅಯ್ಯೋ, ಚಂದ್ರಕಾಂತ್ ಜೀವ ಉಳಿಸಲು ಪತ್ನಿ ಶಿಲ್ಪಾಗೆ ಸಾಧ್ಯವಿತ್ತು; ಹೀಗಂತಾರೆ ಘಟನೆ ಬಲ್ಲವರು!

ಬಡ ಕುಟುಂಬದಲ್ಲಿ ಜನಿಸಿದ್ದ ನರೇಂದ್ರ ದಾಮೋದರ ಮೋದಿಯವರು ತಮ್ಮ ಬಾಲ್ಯ ಜೀವನದಲ್ಲಿ ರೇಲ್ವೇ ಸ್ಟೇಷನ್‌ನಲ್ಲಿ ಟೀ ಮಾರುತ್ತ ತಮ್ಮ ಕುಟುಂಬದ ನಿರ್ವಹಣೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹಾಗೇ ಬೆಳೆಯುತ್ತ ಮೋದಿಯವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಆಡಳಿತ ನಡೆಸಿ ಜನಪ್ರಿಯ ನಾಯಕರಾಗಿ ಬೆಳೆದರು. ಬಳಿಕ ಅವರು ಭಾರತದ 14ನೇ ಪ್ರಧಾನಮಂತ್ರಿಯಾಗಿ ಈಗ ಎರಡನೇ ಅವಧಿಗೆ ಆಡಳಿತ ನಡೆಸುತ್ತಿದ್ದಾರೆ. 

ಡಿಸ್ಕೋ ಶಾಂತಿ ತಂಗಿಯನ್ನು ಡಿವೋರ್ಸ್ ಮಾಡಿದ್ಯಾಕೆ ನಟ ಪ್ರಕಾಶ್ ರಾಜ್? ಹೊಸ ಪತ್ನಿ ಜೊತೆಗಿದ್ದಾರಾ?

ಇಂಥ ಮಹಾನ್ ವ್ಯಕ್ತಿ ನರೇಂದ್ರ ಮೋದಿಯವರ ಜೀವನ ಆಧಾರಿತ 'ಮೋದಿ ಬಯೋಪಿಕ್' 2019ರಲ್ಲಿ ವಿವೇಕ್ ಒಬೆರಾಯ್ ಮುಖ್ಯ ಭೂಮಿಕೆಯಲ್ಲಿ ತೆರೆಗೆ ಬಂದಿತ್ತು. ಆ ಚಿತ್ರವನ್ನು ಒಮಂಗ್ ಕುಮಾರ್ (Omung Kumar) ನಿರ್ದೇಶನ ಮಾಡಿದ್ದರು. ಈ ಚಿತ್ರವು 24 ಮೇ 2019ರಲ್ಲಿ ತೆರೆಗೆ ಬಂದು ಭರ್ಜರಿ ರೆಸ್ಪಾನ್ಸ್ ಪಡೆದಿತ್ತು. 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮೋದಿ ಬಯೋಪಿಕ್ ನಿರೀಕ್ಷೆಯಂತೆ ಒಳ್ಳೆಯ ರೆಸ್ಪಾನ್ಸ್ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. 

ಗುರುಕಿರಣ್‌ಗೆ ಯಾಕೆ 'ಕಿಲಾಡಿ' ಅಂದ್ಬಿಟ್ರು ಉಪೇಂದ್ರ; ಅವರಿಬ್ಬರ ಸ್ನೇಹಕ್ಕೆ ಅಂಥದ್ದೇನಾಯ್ತು?

ಸರೇಶ್ ಒಬೆರಾಯ್ ನಿರ್ಮಾದಲ್ಲಿ 2019ರಲ್ಲಿ ಬಂದಿದ್ದ ಮೋದಿ ಬಯೋಪಿಕ್ ಬಳಿಕ ಇದೀಗ ಎರಡನೇ ಬಯೋಪಿಕ್ ಸಿನಿಮಾವನ್ನು ತೆರೆಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಸದ್ಯದಲ್ಲೆ ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗುತ್ತಿದೆ. 

Latest Videos
Follow Us:
Download App:
  • android
  • ios