Asianet Suvarna News Asianet Suvarna News

ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್‌ ಮುಂದೂಡಿದ ಟೀಮ್!

ಯಶ್​ ನಿರ್ಮಾಪಕ ಆಗಿ ಬಂದ ಮೇಲೆ ಇದರ ಬಜೆಟ್ ಗಾತ್ರ ಹೆಚ್ಚಾಯ್ತು. ರಾಮಾಯಣ ಬಜೆಟ್ ಎಷ್ಟು ಕೋಟಿ ಇರುತ್ತೆ ಅನ್ನೋ ಚರ್ಚೆ ಶುರುವಾಯ್ತು. ಯಾಕಂದ್ರೆ ಯಶ್​ ತನ್ನ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್​​​ ಮೂಲಕ ನಿರ್ಮಾಪಕ ನಮಿತ್​ ಮಲ್ಹೋತ್ರಾ ಜೊತೆ ಸೇರಿ ರಾಮಾಯಣವನ್ನ ಪ್ರಪಂಚಕ್ಕೆ ತೋರಿಸಬೇಕು..

Ramayana shooting halted for 3 weeks due to Copyright Infringement srb
Author
First Published May 22, 2024, 5:05 PM IST

ಸ್ಯಾಂಡಲ್‌ವುಡ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ (Rocking Star Yash) ನಟನೆಯ 'ರಾಮಾಯಣ' ಚಿತ್ರವು ಇದೀಗ ಹೊಸದೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯ ಪೌರಾಣಿಕ ಚಿತ್ರ ರಾಮಾಯಣವು ಮೂರು ವಾರಗಳ ಕಾಲ ಚಿತ್ರದ ಶೂಟಿಂಗ್ ಮುಂದಕ್ಕೆ ಹಾಕಿದೆ. ಕಾರಣ, ಕಾಪಿರೈಟ್ ಇಶ್ಯೂ ಆಗಿರುವ ಕಾರಣಕ್ಕೆ ಚಿತ್ರದ ಮೇಲೆ ಕೇಸ್ ದಾಖಲಾಗಿದ್ದು, ಅದು ಇತ್ಯರ್ಥವಾಗುವರೆಗೂ, ಅಂದರೆ 3 ವಾರಗಳ ಕಾಲ ಶೂಟಿಂಗ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. 

ರಾಮಾಯಣ ಚಿತ್ರದ ಶೂಟಿಂಗ್ ಒಂದು ತಿಂಗಳ ಹಿಂದಷ್ಟೇ ಶುರುವಾಗಿತ್ತು ಈ ಚಿತ್ರಕ್ಕೆ ಕೆಜಿಎಫ್ ಸ್ಟಾರ್ ಯಶ್ ಸಹ ನಿರ್ಮಾಪಕರಲ್ಲಿ ಒಬ್ಬರು ಎಂಬುದು ಗಮನಿಸಬೇಕಾದ ಸಂಗತಿ. ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ (Ranbir Kapoor), ನಟ ಯಶ್ ಹಾಗೂ ಸಾಯಿ ಪಲ್ಲವಿ (Sai Pallavi) ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಈಗ ಚಿತ್ರೀಕರಣಕ್ಕೆ ಸ್ಟೇ ಆರ್ಡರ್ ಬಂದಿದ್ದು, ಸದ್ಯ ರಾಮಾಯಣ ಶೂಟಿಂಗ್ ಸ್ಥಗಿತವಾಗಿದೆ. 

ಹರಿಹರಪುರ ಕ್ಷೇತ್ರಕ್ಕೆ 'ಕಾಂತಾರ' ಖ್ಯಾತಿಯ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಭೇಟಿ, ಫ್ಯಾನ್ಸ್ ಥ್ರಿಲ್!

ಎಲ್ಲಾ ಹೊಸ ಟೆಕ್ನಾಲಜಿಯನ್ನ ಬಳಸಿ ರಾಮಾಯಣದ ಪ್ರಪಂಚವನ್ನ ರಿಯಲಿಸ್ಟಿಕ್ ಆಗಿ ತೆರೆದಿಡೋ ಜವಾಬ್ಧಾರಿ ನಿರ್ದೇಶಕ ನಿತೀಶ್ ತಿವಾತಿ ಮೇಲಿದೆ. ರಾಮಾಯಣದ ಕಥೆಯನ್ನು ಅದ್ಭುತ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ರಾಮಾಯಣ, ಇದು ರಾಕಿಂಗ್ ಸ್ಟಾರ್ ಯಶ್​ ನಿರ್ಮಾಣದ ಸಿನಿಮಾ. ಕೆಜಿಎಫ್​​ನ ರಾಕಿ ರಾವಣನಾಗಿ ಅಬ್ಬರಿಸೋ ಚಿತ್ರ.

ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು?

ಭಾರತೀಯ ಪರಂಪರೆಯನ್ನ ಇಡೀ ವಿಶ್ವಕ್ಕೆ ತೆರೆದಿಡಲು ಸಿದ್ಧವಾಗುತ್ತಿರೋ ಪ್ಯಾನ್​ ವರ್ಲ್ಡ್​ ಮೂವಿ. ಈ ಸಿನಿಮಾದಿಂದ ಯಶ್​​ ದೊಡ್ಡ ರೆಕಾರ್ಡ್​ ಒಂದನ್ನು ಬರೆಯಲು ಸಜ್ಜಾಗಿದ್ದಾರೆ. ಅದು ರಾಮಾಯಣ ನಿರ್ಮಾಣಕ್ಕೆ ಖರ್ಚು ಮಾಡೋ ಹಣದ ವಿಷಯದಲ್ಲಿ. ಹಾಗಾದ್ರೆ ರಾಮಾಯಣ ಎಷ್ಟು ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗುತ್ತೆ ಗೊತ್ತಾ..? ಅದನ್ನ ಕೇಳಿದ್ರೆ ನೀವು ಆಶ್ಚರ್ಯ ಪಡೋದರಲ್ಲಿ ನೋ ಡೌಟ್. ಇಷ್ಟು ದಿನ ರಾಮಾಯಣ ಭಾರತದ ಬಿಗ್ ಬಜೆಟ್ ಸಿನಿಮಾ ಅಂತ ಮಾತ್ರ ಟಾಕ್ ಆಗುತ್ತಿತ್ತು. 

ಬಾಲಿವುಡ್‌ಗೆ ಬಂತು ಬಂಗಾರದ ಬೊಂಬೆ; ಕೋಮಲ್ ಝಾ ಗ್ಲಾಮರ್‌ಗೆ ಗಂಡ್‌ಹೈಕ್ಳ ಗುಂಡಿಗೆ ಗಡಗಡ!

ಆದ್ರೆ ಈ ಸಿನಿಮಾದಲ್ಲಿ ಯಶ್​ ನಿರ್ಮಾಪಕ ಆಗಿ ಬಂದ ಮೇಲೆ ಇದರ ಬಜೆಟ್ ಗಾತ್ರ ಹೆಚ್ಚಾಯ್ತು. ರಾಮಾಯಣ ಬಜೆಟ್ ಎಷ್ಟು ಕೋಟಿ ಇರುತ್ತೆ ಅನ್ನೋ ಚರ್ಚೆ ಶುರುವಾಯ್ತು. ಯಾಕಂದ್ರೆ ಯಶ್​ ತನ್ನ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್​​​ ಮೂಲಕ ನಿರ್ಮಾಪಕ ನಮಿತ್​ ಮಲ್ಹೋತ್ರಾ ಜೊತೆ ಸೇರಿ ರಾಮಾಯಣವನ್ನ ಪ್ರಪಂಚಕ್ಕೆ ತೋರಿಸಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಈ ಸಿನಿಮಾಗೆ 835 ಕೋಟಿ ಬಂಡವಾಳ ಹೂಡೂದಕ್ಕೆ ಯಶ್​ ಹಾಗು  ನಮಿತ್ ಮಲ್ಹೋತ್ರಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಉಪೇಂದ್ರರ A ಸಿನಿಮಾ ರೀಮೇಕ್‌ಗೆ ನಿರ್ಧರಿಸಿದ್ರು ಶಾರುಖ್‌ ಖಾನ್, ಯಾಕೆ ಮಾಡ್ಲಿಲ್ಲ?

ರಾಮಾಯಣ ನಿರ್ಮಾಣ ಸುಮ್ಮನೆ ಮಾತಲ್ಲ. ಎಲ್ಲಾ ಹೊಸ ಟೆಕ್ನಾಲಜಿಯನ್ನ ಬಳಸಿ ರಾಮಾಯಣದ ಪ್ರಪಂಚವನ್ನ ರಿಯಲಿಸ್ಟಿಕ್ ಆಗಿ ತೆರೆದಿಡೋ ಜವಾಬ್ಧಾರಿ ನಿರ್ದೇಶಕ ನಿತೀಶ್ ತಿವಾತಿ ಮೇಲಿದೆ. ರಾಮಾಯಣದ ಕಥೆಯನ್ನು ಅದ್ಭುತ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಆ ಕಾರಣಕ್ಕಾಗಿ ಇಷ್ಟು ದೊಡ್ಡ ಬಜೆಟ್​ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಅಷ್ಟೆ ಅಲ್ಲ ರಾಮಾಯಣ ಕಥೆಯನ್ನ ಒಂದೇ ಪಾರ್ಟ್​​ನಲ್ಲಿ ಹೇಳೋಕೆ ಸಾಧ್ಯವಿಲ್ಲ.

ಪೋರ್ನ್‌ ಸ್ಟಾರ್ ಖ್ಯಾತಿಗೂ ಮೊದಲು ಸನ್ನಿ ಲಿಯೋನ್ ಏನ್ಮಾಡ್ತಿದ್ರು..?

ಹೀಗಾಗಿ ಅದನ್ನು ಮೂರು ಪಾರ್ಟ್​ ಮಾಡಿ ತೆರೆಗೆ ತರುತ್ತಿದ್ದಾರೆ. ಈ ಮೂರು ಪಾರ್ಟ್​​ಗೆ ಸೇರಿ ಒಟ್ಟು 835 ಕೋಟಿ ಬಂಡವಾಳ ಅಂತ ಅಂದಾಜಿಸಲಾಗಿದೆ. ಈಗಾಗ್ಲೆ ರಾಮಾಯಣ ಮೊದಲ ಪಾರ್ಟ್​​ನ ಕೆಲಸ ಶುರುವಾಗಿದ್ದು, ರಾಮನ ಅವತಾರ ತಾಳಿರೋ ರಣಬೀರ್ ಕಪೂರ್​​​ ಹಾಗು ಸೀತೆಯಾಗಿರೋ ಸಾಯಿ ಪಲ್ಲವಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಮದುವೆಯಾಗಿದ್ದು ಬಿಟ್ಟಿರಲು ಅಲ್ಲ, ನಿಕ್ ಜತೆಗಿರದೇ ರಾತ್ರಿ ಕಳೆಯಲಾರೆ; ಪ್ರಿಯಾಂಕಾ ಚೋಪ್ರಾ

2022ರಲ್ಲಿ ಬಿಡುಗಡೆ ಆದ ‘ಬ್ರಹ್ಮಾಸ್ತ್ರ’ ಸಿನಿಮಾಗೆ 450 ಕೋಟಿ ರೂಪಾಯಿ ಬಜೆಟ್​ ಸುರಿಯಲಾಗಿತ್ತು. ಅದು ಬಾಲಿವುಡ್​ನಲ್ಲಿ ಈವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿತ್ತು. ಆ ಸಿನಿಮಾದಲ್ಲೂ ರಣಬೀರ್ ಕಪೂರ್​ ಹೀರೋ ಆಗಿದ್ದರು. ಈಗ ಯಶ್​​​ ಜೊತೆ ರಾಮಾಯಣದಲ್ಲಿ ರಾಮ ಆಗಿರೋ ರಣಬೀರ್ ಕಪೂರ್​​​​ ಮತ್ತೊಮ್ಮೆ ರಾಮಾಯಣದಲ್ಲಿ ಬಿಗ್ ಬಜೆಟ್​ ಸಿನಿಮಾದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದ್ರೆ ಇದು ಭಾರತೀಯ ಚಿತ್ರರಂಗದ 835 ಕೋಟಿಯ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆ ಪಡೆಯಲಿದೆ. 

ಅಸಿಸ್ಟಂಟ್ ಡೈರೆಕ್ಟರ್ ಕೆಲಸ ಕೇಳ್ಕೊಂಡು ಬಂದಿದ್ರು ಕಿಚ್ಚ ಸುದೀಪ್‌; ರಿಜೆಕ್ಟ್ ಮಾಡದ್ಯಾಕೆ ಉಪೇಂದ್ರ?

Latest Videos
Follow Us:
Download App:
  • android
  • ios