Rocking Star Yash ಜೊತೆ ಹುಡುಗಿಯೊಬ್ಬಳು ಸಖತ್ ತರಲೆ ಮಾಡಿ ಬೇಜಾನ್ ನಗ್ಸಿದ್ದಾಳೆ. ನಿಹಾರಿಕ ಅನ್ನೋ ಹೆಸರಿನ ಈ ಹುಡುಗಿಯ ರೀಲ್ಸ್ ಈಗ ಎಲ್ಲೆಡೆ ವೈರಲ್. ಅಷ್ಟಕ್ಕೂ ಈ ವೀಡಿಯೋದಲ್ಲಿ ಏನಿದೆ ಗೊತ್ತಾ?

ನಿಹಾರಿಕಾ ಎನ್ ಎಂ (Niharika N M) ಅನ್ನೋ ಹುಡುಗಿ ಈಗ ಅಮೆರಿಕಾದಲ್ಲಿ ಎಂಬಿಎ (MBA) ಓದ್ತಿದ್ದಾಳೆ. ಇವಳು ಹುಟ್ಟಿದ್ದು ಚೆನ್ನೈಯಲ್ಲಿ. ಬೆಳೆದದ್ದು ಬೆಂಗಳೂರಲ್ಲಿ. ಈಗ ಎಂಬಿಎ ಮಾಡ್ತಿರೋದು ಅಮೆರಿಕಾದಲ್ಲಿ. ಇನ್ನೂ 23 ವರ್ಷದ ಈ ಹುಡುಗಿಯ ಇನ್ ಸ್ಟಾಗ್ರಾಂ ತುಂಬ ಹೊಟ್ಟೆ ಹುಣ್ಣಾಗೋ ಹಾಗೆ ನಗಿಸೋ ರೀಲ್ಸ್ ಗಳೇ ತುಂಬಿದ್ದಾವೆ. ಈಕೆ ಈ ಥರ ರೀಲ್ಸ್ ಮಾಡೋದು ಶುರುವಾಗಿ ಮೂರ್ನಾಲ್ಕು ತಿಂಗಳಾಗಿರಬಹುದು ಅಷ್ಟೇ, ಆದರೆ ಇಷ್ಟರಲ್ಲೇ ಇವಳಿಗೆ 2 ಮಿಲಿಯನ್ ಅಂದರೆ 20 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್ ಇನ್ ಸ್ಟಾಗ್ರಾಮ್ (Instagram) ಒಂದರಲ್ಲೇ ಇದ್ದಾರೆ.

ನಾಳೆ KGF 2 ರಿಲೀಸ್‌; ಸಾಲು ಸಾಲು ರಜೆಗಳ ಕಾರಣ ಭರ್ಜರಿ ಕಲೆಕ್ಷನ್‌ ಸಾಧ್ಯತೆ

ಈಗ ಈ ಹುಡುಗಿ ಮಾಡಿರೋ ಸಖತ್ ಫೇಮಸ್ ರೀಲ್ಸ್ (Reels) ವಿಷಯಕ್ಕೆ ಬರೋಣ. ಇದು ಕೆಜಿಎಫ್ 2 KGF 2) ನ ರೀಲ್ಸ್. ಇದ್ರಲ್ಲಿ ಯಶ್ ಅವರ ಸೂಪರ್ ಡೂಪರ್ ಹಿಟ್ ಡೈಲಾಗ್ ಇದೆಯಲ್ಲಾ.. 'ವೈಲೆನ್ಸ್, ವೈಲೆನ್ಸ್ ವೈಲೆನ್ಸ್ .. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್' ಅನ್ನೋದು, ಇದೇ ಡೈಲಾಗ್ ಅನ್ನು ಈ ಹುಡುಗಿ ಎಷ್ಟು ಎಷ್ಟು ಫನ್ನಿಯಾಗಿ ಹೇಳಿದ್ದಾಳೆ ಅಂದರೆ ಯಶ್ ಪಕ್ಕದಲ್ಲಿ ಕೂತು ಆ ಡೈಲಾಗ್ ಮುಂದುವರಿಸೋವಷ್ಟು!

View post on Instagram

ಇನ್ನೂ ಕ್ಲಿಯರ್ ಆಗಿ ಎಕ್ಸ್ ಪ್ಲೇನ್ ಮಾಡಬೇಕು ಅಂದರೆ, 'ಕೆಜಿಎಫ್ 2' ನ ಸಖತ್ ಜನಪ್ರಿಯ ಡೈಲಾಗ್ 'I AM VUOLENCE'. ಒಬ್ಬ ಹುಡುಗಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಎಂಟ್ರಿ ತಗೊಂಡು ಯಶ್ ಅವರ ಐ ಯ್ಯಾಮ್ ವೈಲೆನ್ಸ್ ಡೈಲಾಗ್ ಹೇಳೋದಕ್ಕೆ ಶುರು ಮಾಡ್ತಾಳೆ. ಇನ್ನಷ್ಟು ಬಿಲ್ಡಪ್ ಕೊಡೋಣ ಅಂತ ಬಾಟಲ್ ಮುಚ್ಚಳ ತೆರೆಯಲು ಪ್ರಯತ್ನಿಸುತ್ತಾಳೆ. ಊಹೂಂ ಓಪನ್ ಆಗಲ್ಲ. ತನ್ನೆಲ್ಲ ಶಕ್ತಿ ಹಾಕಿ ಬಾಟಲ್ ಮುಚ್ಚಳ ತೆರೆಯಲು ಪ್ರಯತ್ನಿಸುತ್ತಾಳೆ. ಕಾಲುಗಳ ಮಧ್ಯೆ ಇಟ್ಟು ಕೈಯಿಂದ ತೆರೆಯಲು ಟ್ರೈ ಮಾಡ್ತಾಳೆ, ಕಾಲಲ್ಲಿ ಒದೀತಾಳೆ, ಹಲ್ಲಲ್ಲಿ ಕಚ್ಚಿ ಓಪನ್ ಮಾಡೋಕೆ ಟ್ರೈ ಮಾಡ್ತಾಳೆ, ಅದರ ಮೇಲೆ ಏಟು ಹಾಕ್ತಾಳೆ.. ಊಹೂಂ, ಬಾಟಲ್ ಓಪನ್ ಆಗಲ್ಲ. ಈ ಬಾಟಲ್ಲೇ ಸರಿಯಿಲ್ಲ ಅಂತ ಇನ್ನೊಂದು ಬಾಟಲ್ ಕೇಳ್ತಾಳೆ. ಅದನ್ನು ತೆರೆಯಲು ತನ್ನೆಲ್ಲ ಶಕ್ತಿ ಹಾಕ್ತಾ ಇರ್ತಾಳೆ. ಅಷ್ಟರಲ್ಲಿ ಪಕ್ಕದಲ್ಲಿ ಯಾರೋ ಅವಳನ್ನು ಮುಟ್ಟಿ ಕರೆಯಲು ಪ್ರಯತ್ನಿಸುತ್ತಾರೆ. ಬಾಟಲಿ ಮುಚ್ಚಳ ತೆರೆಯಲು ಒದ್ದಾಡುತ್ತಿರುವ ಅವಳು, ಒಂದ್ನಿಮ್ಶ ತಡಿ ಅಂತಾಳೆ. ಆ ಆಸಾಮಿ ಮತ್ತೊಮ್ಮೆ ಅವಳ ಹೆಗಲು ಮುಟ್ಟಿ ಕರೀತಾರೆ. ಸಿಟ್ಟು ಸರ್ರಂತ ಏರಿ, ಇವಳು ಆ ಕಡೆ ತಿರುಗಿದ್ರೆ, ಪಕ್ಕದಲ್ಲಿ ಡೈಲಾಗ್ ಕಿಂಗ್ YASH!

KGF 2ಜತೆಗೆ ರಿಷಬ್ ಶೆಟ್ಟಿ ಕಾಂತಾರ ಟೀಸರ್..ಇನ್ನು ಒಂದು ಗುಡ್ ನ್ಯೂಸ್ ಕೊಟ್ಟ ಹೊಂಬಾಳೆ


ಇವಳು ಕಣ್ಣು ಬಾಯಿ ಬಿಟ್ಕೊಂಡು ನೋಡುತ್ತಿರುವಾಗಲೇ ಯಶ್ ಇವಳ ಕೈಯಲ್ಲಿರುವ ಬಾಟಲನ್ನ ತನ್ನ ಕೈಗೆತ್ತಿಕೊಳ್ತಾರೆ. ಒಂದೇ ಸ್ಟ್ರೈಕ್ ನಲ್ಲಿ ಬಾಟಲ್ ಓಪನ್ ಮಾಡ್ತಾರೆ. ಮರುಕ್ಷಣ ಆ ಬಾಟಲ್‌ನೊಂದಿಗೆ ಮಾಯ ಆಗ್ತಾರೆ! ಈ ಹುಡುಗಿ 'I AM VIOLENCE, DON`T AVIOD ME' (ಐಯ್ಯಾಮ್ ವೈಲೆನ್ಸ್, ಡೋಂಡ್ ಅವಾಯ್ಡ್ ಮಿ) ಅಂತ ಗೊಣಗುತ್ತ ಹಿಂದಿಂದೆ ಹೋದರೂ ಯಶ್ ತಿರುಗಿ ನೋಡಲ್ಲ. ಸುಸ್ತಾದ ಅವಳು, 'ಅಂಕಲ್ ವಾಟರ್ ಬಾಟಲ್ ಕೊಡಿ' ಅಂತ ಮತ್ತೊಂದು ಪ್ರಯತ್ನಕ್ಕೆ ರೆಡಿ ಆಗ್ತಾಳೆ.

ಯಶ್‌ ಮುಂದಿನ ಸಿನಿಮಾ: ಹಬ್ಬಿರುವ ಈ ಗಾಸಿಪ್ ನಿಜಾನಾ?

ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral) ಆಗಿದೆ. ಮಿಲಿಯನ್‌ಗಿಂತಲೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಬಾಲಿವುಡ್ ನ ಸೆಲೆಬ್ರಿಗಳೂ (Bollywood celebrities) ಈಕೆಯ ವೀಡಿಯೋ ನೋಡಿ ಮನಸಾರೆ ನಕ್ಕು ಕಮೆಂಟ್ ಮಾಡಿದ್ದಾರೆ. ಈ ಹುಡುಗಿ ನಿಹಾರಿಕಾ ಹಿಸ್ಟರಿ ತೆಗೆದು ನೋಡಿದ್ರೆ ಈಕೆ ಅಮೆರಿಕಾದಲ್ಲಿ ಎಂಬಿಎ ಮಾಡ್ತಿರೋ ಹುಡುಗಿ. ರೀಲ್ಸ್ (Reels)ಮಾಡೋದು ಅವಳ ಇಷ್ಟದ ಹಾಬಿ. ಇತ್ತೀಚೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Union Minister Smruthi Irani) ಈಕೆಯ ಫನ್ನಿ ರೀಲ್ಸ್ ನ ಶೇರ್ ಮಾಡಿದ್ದರು. ನೆಟ್ ಫ್ಲಿಕ್ಸ್ ನಲ್ಲಿ(Netflix) ಈಕೆ ಗೆಸ್ಟ್ ಎಪಿಯರೆನ್ಸ್ ಕೊಟ್ಟು ಜನರನ್ನು ನಗಿಸಿದ್ದಳು. ಎರಡೇ ಎರಡು ತಿಂಗಳಲ್ಲಿ ಮಿಲಿಯನ್ ಗೂ ಹೆಚ್ಚು ವೀಕ್ಷಕರನ್ನು ಇನ್ ಸ್ಟಾ ಒಂದರಲ್ಲೇ ಸಂಪಾದಿಸಿದ ಇವಳ ಸದ್ಯದ ಫಾಲೋವರ್ಸ್ ೨ ಮಿಲಿಯನ್‌ಗೂ ಅಧಿಕ. ಅಷ್ಟಕ್ಕೂ ಇವಳ ಸೌತ್ ಇಂಡಿಯನ್ ಆಕ್ಸೆಂಟ್ ಡೈಲಾಗ್ ಗಳು ಸಖತ್ ಹಿಲೇರಿಯಸ್ ಆಗಿದ್ದು ಎಂಥವರೂ ಹೊಟ್ಟೆ ಹುಣ್ಣಾಗುವಂತೆ ನಗೋ ಹಾಗಿದೆ. ಬರೀ 23 ವರ್ಷದ ಇನ್ನೂ ಯುನಿವರ್ಸಿಟಿಯಲ್ಲಿ ಎಂಬಿಎ ಮಾಡ್ತಿರೋ ನೋಡೋಕೂ ಚಂದವಾಗಿರೋ ಈ ಹುಡುಗಿ ಮೈಂಡಲ್ಲಿ ಅದೇನೆಲ್ಲ ಓಡುತ್ತೋ ಅಂತ ನೆಟಿಜನ್ಸ್ ಕ್ಯೂರಿಯಸ್ ಆಗಿದ್ದಾರೆ.