KGF 2ಜತೆಗೆ ರಿಷಬ್ ಶೆಟ್ಟಿ ಕಾಂತಾರ ಟೀಸರ್..ಇನ್ನು ಒಂದು ಗುಡ್ ನ್ಯೂಸ್ ಕೊಟ್ಟ ಹೊಂಬಾಳೆ
ಬೆಂಗಳೂರು(ಏ. 13) ಸದ್ಯಕ್ಕೆ ಎಲ್ಲೆಲ್ಲೂ ಕೆಜಿಎಫ್ (KGF 2) ಹವಾ.. ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತೊಂದು ಶುಭ ಸುದ್ದಿ ನೀಡಿದೆ. ಅದು ಏನು ಅನ್ನೋದನ್ನು ಮುಂದೆ ಹೇಳ್ತೆವೆ.
ಕೆಜಿಎಫ್ 2 ಜತೆಗೆ ಕನ್ನಡದ ಎರಡು ಚಿತ್ರಗಳ ಟೀಸರ್ ಹೊರಗೆ ಬರಲಿದೆ. ಮಾರ್ಚ್ 13 ರಾತ್ರಿ 10.45ಕ್ಕೆ ಟೀಸರ್ ರಿಲೀಸ್ ಆಗಲಿದೆ. ಕೆಜಿಎಫ್ ಜತೆ ಇವನ್ನು ನೋಡಬಹುದು.
kantara
ಜೇಮ್ಸ್ ಚಿತ್ರದ ಜತೆಗೆ ಭೈರಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೊಂದು ಹೊಸ ಟ್ರೇಂಡ್ ಹುಟ್ಟಿಕೊಂಡಿದೆ. ಕನ್ನಡ ಚಿತ್ರ ರಸಿಕರಿಗೆ ಒಂದು ಸಂದೇಶ ಸಿಗಲಿದೆ.
ಕೆಜಿಎಫ್ ಜತೆ ರಿಷಬ್ ಶೆಟ್ಟಿ ಅವರ ಕಾಂತಾರಾ ಮತ್ತು ಸಂತೋಷ್ ಆನಂದ್‌ರಾಮ್ ಅವರ ರಾಘವೇಂದ್ರ ಸ್ಟೋರ್ಸ್ ಟೀಸರ್ ಕಾಣಸಿಗಲಿದೆ.
ಕಾಂತಾರದಲ್ಲಿ ರಿಷಬ್ ಇದ್ದರೆ ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸ ನಾಯಕ ಜಗ್ಗೇಶ್ ಇದ್ದಾರೆ. ರಿಷಬ್ ಶೆಟ್ಟಿ ಸಹ ಹೊಸ ಸಾಹಸ ಮಾಡುವುದರಲ್ಲಿ ಎತ್ತಿದ ಕೈ..
ದಂತಕಥೆಯ ಮೊದಲ ಆಟ, ಕಾಂತಾರಾದ ಮೊದಲ ನೋಟ ನಾಳೆ ರಾತ್ರಿ 10:44ಕ್ಕೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಎಂದು ಶೀರ್ಷಿಕೆ ನೀಡಲಾಗಿದೆ.
Jaggesh
ಒಟ್ಟಿನಲ್ಲಿ ಕೊರೋನಾ ನಂತರ ಕನ್ನಡ ಸಿನಿಪ್ರಿಯರಿಗೆ ತಂತ್ರಜ್ಞರು ಹಬ್ಬದ ವಾತಾವರಣ ನಿರ್ಮಾಣ ಮಾಡಿ ನೀಡುತ್ತಿದ್ದಾರೆ. ಕೆಜಿಎಫ್ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.