ಪುನೀತ್ ರಾಜಕುಮಾರ ಅವರ ಅಪ್ಪಟ್ಟ ಅಭಿಮಾನಿಯೋರ್ವ ತನ್ನ ವಿವಾಹದ ದಿನದಂದೂ ರಾಜರತ್ನನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವ ಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ.

ರಾಜರತ್ನ ಪುನೀತ್ ರಾಜ್ ಕುಮಾರ್(Puneeth Rajkumar) ಸಾವನ್ನಪ್ಪಿ 6 ತಿಂಗಳು ಕಳೆಯಲು ಬಂದರೂ ಪುನೀತ್ ಮೇಲಿನ ಅಭಿಮಾನ ಮಾತ್ರ ಮರೆಯಾಗಿಲ್ಲ. ಪುನೀತ್ ರಾಜಕುಮಾರ ಅವರ ಅಪ್ಪಟ್ಟ ಅಭಿಮಾನಿಯೋರ್ವ ತನ್ನ ವಿವಾಹದ ದಿನದಂದೂ ರಾಜರತ್ನನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವ ಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ.

ರಾಯಬಾಗ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಇನ್ನೂ ವಿಶೇಷವೆಂದರೇ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ನವ ಜೀವನಕ್ಕೆ ಕಾಲಿಟ್ಟಿದ್ದು.‌

'ಕನ್ನಡದ ಕೋಟ್ಯಾಧಿಪತಿ' ಹೋಸ್ಟ್ ಮಾಡ್ತಾರಾ ಈ ಸ್ಟಾರ್ ನಟ..?

ಹೌದು ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧು ವರರು ಅರುಂಧತಿ ನಕ್ಷತ್ರ ನೋಡುವದು ವಾಡಿಕೆ ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೆ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದಗೆ ಆತನ‌ ಸ್ನೇಹಿತರು ಪುನೀತ್ ಭಾವಚಿತ್ರ ಇರುವ ವಿವಿಧ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ ಪಟ್ಟಣ ಅವರ ಸ್ನೇಹಿತರು ಪುನೀತ್ ಹಾಡುಗಳನ್ನ ಹಾಡಿ‌ ಮದುವೆಗೆ ಮತ್ತಷ್ಟು ಕಳೆ ತಂದರು. ಇನ್ನೂ ಮದುವೆ ನಂತರ ಪುನೀತ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಸಂಪೂರ್ಣವಾಗಿ ಪುನೀತ ಅಪ್ಪಟ ಅಭಿಮಾನಿ ಆನಂದ ಪಟ್ಟಣ ಅವರ ಮದುವೆ ಪುನೀತ್ ಮಯವಾಗಿತ್ತು. ಪುನೀತ್ ಎಲ್ಲೂ ಹೋಗಿಲ್ಲ ನಮ್ಮ ಮನದಲ್ಲೆ ಇದ್ದಾರೆ ಎನ್ನುವುದಕ್ಕೆ ಈ ಮದುವೆ ಸಾಕ್ಷಿಯಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ಹಾಗೆ ಪೂಜಿಸುತ್ತಿದ್ದಾರೆ. ಪುನೀತ್ ಕಳೆದುಕೊಂಡು ಅನೇಕ ತಿಂಗಳು ಕಳೆದರು ಅಪ್ಪು ನೆನಪು ಪದೇ ಪದೆ ಕಾಡುತ್ತಿದೆ. ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ದೇವರ ದರ್ಶನದ ವೇಳೆ, ದೇವರ ಸನ್ನಿಧಾನಗಳಲ್ಲಿ, ರಥೋತ್ಸವದಲ್ಲಿ ಅಭಿಮಾನಿಗಳು ಅಪ್ಪು ಫೋಟೋ ಹಿಡಿದು ಪೂಜೆ ಮಾಡುತ್ತಿದ್ದಾರೆ. ದೇವರ ಸ್ಥಾನ ನೀಡಿದ್ದಾರೆ.

ಅಪ್ಪು ಮತ್ತು RCB ಮೇಲಿನ ಪ್ರೀತಿಗೆ ಅಭಿಮಾನಿಯೊಬ್ಬ ಮಾಡಿದ್ದೇನು ನೋಡಿ

ಇತ್ತೀಚಿಗಷ್ಟೆ ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬರಲಿ, ಆರ್.ಸಿ.ಬಿ. ಕಪ್ ಗೆಲ್ಲಲಿ, ಈ ಸಲ ಕಪ್ ನಮ್ದೆ' ಬಾಳೆಹಣ್ಣಿನ ಮೇಲೆ ಬರೆದು ಸಿಡಿಗೆ ಎಸೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಿಡಿಯಲ್ಲಿ ಈ ಘಟನೆ ನಡೆದಿದೆ. ಸಿಡಿ ಸುತ್ತುವ ವೇಳೆ ಸಿಡಿ ಮೇಲೆ ಬಾಳೆಹಣ್ಣು ಎಸೆದಿದ್ದಾರೆ. ಹಳವೀರಮ್ಮ ಸಿಡಿ ಮಹೋತ್ಸವದಲ್ಲಿ ಈ ಬಾಳೆಹಣ್ಣು ಸಿಕ್ಕಿದೆ.