ಗರ್ಭಿಣಿ ಪತ್ನಿಯನ್ನು ನಿರ್ಲಕ್ಷಿಸಿದ್ರಾ ರಣಬೀರ್? 'ಅಲಿಯಾ ಮೇಲೆ ಪ್ರೀತಿ ಇಲ್ವಾ' ಎಂದ ನೆಟ್ಟಿಗರು

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್‌ನ ಸಂಭ್ರಮದಲ್ಲಿದ್ದಾರೆ. ಬ್ರಹ್ಮಾಸ್ತ್ರ ಬಾಯ್ಕಟ್ ಸಮಸ್ಯೆಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. ರಣಬೀರ್ ಕಪೂರ್ ತನ್ನ ಗರ್ಭಿಣಿ ಪತ್ನಿಯನ್ನು ನಿರ್ಲಕ್ಷ  ಮಾಡಿದ್ದಾರೆ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. 

Netizens troll Ranbir Kapoor for ignoring his pregnant wife Alia Bhatt vidoe viral sgk

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್‌ನ ಸಂಭ್ರಮದಲ್ಲಿದ್ದಾರೆ. ಬ್ರಹ್ಮಾಸ್ತ್ರ ಬಾಯ್ಕಟ್ ಸಮಸ್ಯೆಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. ಅಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇಡೀ ತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿತ್ತು. ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡಿದ್ದರು. ಅಂದಹಾಗೆ ಅಲಿಯಾ ಭಟ್ ಗರ್ಭಿಣಿ ಆದರೂ ಸಿನಿಮಾ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಶ್ರಮಕ್ಕೆ ಅಭಿಮಾನಿಗಳಿಂದ ತಕ್ಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ 300 ಕೋಟಿ ಬಾಚಿಕೊಂಡಿದೆ. ಇದು ಬಾಲಿವುಡ‌್ ಗೆ ಹೊಸ ಚೈತನ್ಯ ತುಂಬಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಸಿನಿಮಾ ದ ಸಕ್ಸಸ್ ಹೋದ ಜೀವ ಬಂದಂತೆ ಆಗಿದೆ. ಈ ನಡುವೆ ಅಲಿಯಾ ಮತ್ತು ರಣಬೀರ್ ದಂಪತಿ ಅನೇಕ ವಿಚಾರಗಳಿಗೆ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.   

ಇತ್ತೀಚಿಗಷ್ಟೆ ಬ್ರಹ್ಮಾಸ್ತ್ರ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಅಲಿಯಾ ದಂಪತಿಯ ವಿಡಿಯೋ ಒಂದು ವೈರಲ್ ಆಗಿದೆ. ರಣಬೀರ್ ಕಪೂರ್ ತನ್ನ ಗರ್ಭಿಣಿ ಪತ್ನಿಯನ್ನು ನಿರ್ಲಕ್ಷ  ಮಾಡಿದ್ದಾರೆ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರಣಬೀರ್ ಕಪೂರ್ ಪತ್ನಿ ಅಲಿಯಾರನ್ನ ಗಮನಕ್ಕೆ ತೆಗೆದುಕೊಳ್ಳದೆ ತನ್ನ ಪಾಡಿಗೆ ನೆಡೆದುಕೊಂಡು ಹೋಗುತ್ತಿದ್ದಾರೆ. ಪಾಪರಾಜಿಗಳು ಸ್ಟಾರ್ ಜೋಡಿಯನ್ನು ಸೆರೆಹಿಡಿಯುತ್ತಿರುವಾಗ ರಣಬೀರ್ ಪತ್ನಿಯನ್ನು ಹೊರಗೆ ಬಿಟ್ಟು ತನ್ನ ಪಾಡಿಗೆ ಹೋಗುತ್ತಾರೆ. ಇದನ್ನು ನೋಡಿದ ನೆಟ್ಟಿಗರು ಪತ್ನಿಯನ್ನು ಸರಿಯಾಗಿ ಕೇರ್ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಮತ್ತೊಬ್ಬ ಕಾಮೆಂಟ್ ಮಾಡಿ, ನೀವು ನಿಜಕ್ಕೂ ಅಲಿಯಾರನ್ನು ಪ್ರೀತಿಸುತ್ತೀರಾ? ನಿಮ್ಮ ಮಗುವಿಗೆ ತಾಯಿಯಾಗುತ್ತಿದ್ದಾರೆ, ಕನಿಷ್ಠ ಅವರ ಕೈಯನ್ನು ಹಿಡಿದು ನಡೆಯಬೇಕಲ್ವಾ' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಪ್ರತಿ ಬಾರಿಯೂ ರಣಬೀರ್ ಪತ್ನಿಯನ್ನು ಬಿಟ್ಟು ಹೋಗುತ್ತಿರುತ್ತರೆ ಎಂದು ಹೇಳಿದರು. 

ಬಾಯ್ಕಟ್‌ಗೆ ಸೆಡ್ಡು ಹೊಡೆದ 'ಬ್ರಹ್ಮಾಸ್ತ್ರ'; ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ರಣಬೀರ್-ಆಲಿಯಾ ಸಿನಿಮಾ

ಅಂದು ಅಲಿಯಾರನ್ನು ರಣಬೀರ್ ತುಂಬಾ ಕೇರ್ ಮಾಡುತ್ತಿದ್ದರು. ಆದರೀಗ ನಿರ್ಲಕ್ಷಿಸುತ್ತಿದ್ದಾರೆ' ಎಂದು ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇದರೆ ನೆಟ್ಟಿಗರ ಕಾಮೆಂಟ್ ಹಾಗೂ ಟ್ರೋಲ್ ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದ ಆಲಿಯಾ ದಂಪತಿ ತನ್ನ ಸಿನಿಮಾದ ಸಕ್ಸಸ್ ಹಾಗೂ ತಾಯಿಯಾಗುತ್ತಿರುವ ಸಂಭ್ರಮವನ್ನು ಆನಂದಿಸುತ್ತಿದ್ದಾರೆ. ಈ ಜೋಡಿಯ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೆ ಇವೆ.

ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಮಾಡಲು Rajamouliಗೆ ರಣಬೀರ್ ಕಪೂರ್ ಕೊಟ್ಟ ಹಣ ಎಷ್ಟು?

ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ 

ಈ ಚಿತ್ರದಲ್ಲಿ ಅಲಿಯಾ ಭಟ್, ರಣಬೀರ್ ಜೊತೆಗೆ ಅಮಿತಾಭ್​ ಬಚ್ಚನ್​, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಮುಂತಾದ ಸ್ಟಾರ್​ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅತಿಥಿ ಪಾತ್ರ ಮಾಡಿರುವುದು ವಿಶೇಷ.  ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. 

Latest Videos
Follow Us:
Download App:
  • android
  • ios