ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಮಾಡಲು Rajamouliಗೆ ರಣಬೀರ್ ಕಪೂರ್ ಕೊಟ್ಟ ಹಣ ಎಷ್ಟು?
ಬ್ರಹ್ಮಾಸ್ತ್ರ ಚಿತ್ರಕ್ಕೆ ಸಾಥ್ ಕೊಟ್ಟ ಸೌತ್ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ. ಪ್ರಚಾರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತಾ?
ಬಾಲಿವುಡ್ ಚಿತ್ರರಂಗ ಬಹು ನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರ (Brahmastra) ಬಿಡುಗಡೆಯಾಗಿ 3 ದಿನ ಕಳೆದು ಕೇವಲ 130 ಕೋಟಿ ಕಲೆಕ್ಷನ್ ಮಾಡಿದೆ. ಅಯಾನ್ ಮುಖರ್ಜಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಿಯಲ್ ಕಪಲ್ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia bhatt) ಅಭಿನಯಿಸಿದ್ದಾರೆ. ಆಫ್ ಸ್ಕ್ರೀನ್ ಇವರಿಬ್ಬರ ಕಾಂಬಿನೇಷನ್ ಇಷ್ಟ ಪಡುವ ಜನರಿಗೆ ಅನ್‌ಸ್ಕ್ರೀನ್ ಇಷ್ಟವಾಗುತ್ತದೆ ಎಂದು ಚಿತ್ರತಂಡ ಭಾವಿಸಿತ್ತು ಆದರೆ ಎಲ್ಲೋ ಏನೋ ಎಡವಟ್ಟಾಗುತ್ತಿದೆ.
ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯಾಗಿದ್ದು ಪ್ರಚಾರಕ್ಕೆ ಸೌತ್ ಸ್ಟಾರ್ ನಿರ್ದೇಶಕ ರಾಜಮೌಳಿ (SS Rajamouli) ಮತ್ತು ಜ್ಯೂನಿಯರ್ ಎನ್‌ಟಿಆರ್ (Jr NTR) ಸಾಥ್ ಕೊಟ್ಟಿದ್ದಾರೆ. ಪ್ರೆಸ್‌ಮೀಟ್‌ನಲ್ಲಿ ಎರಡು ವಿಚಾರಗಳು ಹೈಲೈಟ್ ಆಗಿದೆ, ಆಲಿಯಾ ಭಟ್ ಡ್ರೆಸ್ ಮತ್ತೊಂದು ಎಸ್.ಎಸ್ ರಾಜಮೌಳಿ ಮಾತುಗಳು. ರಾಜಮೌಳಿ ಬಾಲಿವುಡ್ ಸಿನಿಮಾ ಪ್ರಚಾರ ಮಾಡಲು ಪಡೆದುಕೊಂಡಿರುವ ಸಂಭಾವನೆ ಸಖತ್ ವೈರಲ್ ಆಗುತ್ತಿದೆ.
ಬ್ರಹ್ಮಾಸ್ತ್ರ ಚಿತ್ರಕ್ಕೆ 410 ಕೋಟಿ ಬಂಡವಾಳ ಹಾಕಲಾಗಿದೆ. ಈ ಚಿತ್ರ ತಾರೆಯರ ಮೇಲ್ಲೂ ಅಷ್ಟೇ ಇನ್ವೆಸ್ಟ್ ಮಾಡಿದ್ದಾರೆ. ಒಂದು ತಿಂಗಳ ಕಾಲ ಸಿನಿಮಾ ಪ್ರಚಾರ ಮಾಡಲು ಎಸ್‌ಎಸ್ ರಾಜಮೌಳಿ 10 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ (Andra Pradesh) ಮತ್ತು ತೆಲಂಗಾಣವನ್ನು ಪ್ರತಿನಿಧಿಸಿದ ರಾಜಮೌಳಿ ರಾಮೂಜೀ ಫಿಲ್ಮ್ ಸಿಟಿ ಹೈದರಾಬಾದ್‌ನಲ್ಲಿ ಪ್ರಚಾರ ಇಟ್ಟುಕೊಂಡಿದ್ದರು ಆದರೆ ಪ್ಲ್ಯಾನ್ ಕ್ಯಾನ್ಸಲ್ ಆದ ಕಾರಣ ತಕ್ಷಣವೇ ಮತ್ತೊಂದು ಪ್ರೆಸ್‌ಮೀಟ್ ಪ್ಲ್ಯಾನ್ ಮಾಡಿ ಜ್ಯೂ. ಎನ್‌ಟಿಆರ್‌ನ ಕೂಡ ಆಹ್ವಾನ ಮಾಡಿದ್ದರು.
ದಂಗಲ್-ಸಂಜು-ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ, 100 ಕೋಟಿ ಕ್ಲಬ್‌ಗೆ ರಣಬೀರ್ ಕಪೂರ್ ಸಿನಿಮಾ!
ಆಲಿಯಾ-ರಣಬೀರ್ ವಿರುದ್ಧ ಕಂಗನಾ:
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಮೊದಲ ಎರಡು ದಿನದಲ್ಲೇ 160 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಸ್ವತಃ ನಿರ್ಮಾಪಕ ಕರಣ್ ಜೋಹರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಇದು ಪಕ್ಕಾ ಫೇಕ್ ಲೆಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ಕಂಗನಾ ರಣಾವತ್ ಶೇರ್ ಮಾಡುವ ಮೂಲಕ ಮೂಲಕ ಅವರು ಸಹ ಆರೋಪ ಮಾಡಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಆದರೆ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರ ಶೇಕಡ 70ರಷ್ಟು ನಕಲಿ ಎಂದು ಆರೋಪಿಸಿದ್ದಾರೆ.
ಕಂಗನಾ ರಣಾವತ್ ಅವರಿಗೆ ಬಾಲಿವುಡ್‌ನಲ್ಲಿ ಅನೇಕ ಮಂದಿಯನ್ನು ಕಂಡರೆ ಆಗಲ್ಲ. ಆಗಾಗ ಅನೇಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಅದರಲ್ಲೂ ಕರಣ್ ಜೋಹರ್, ಅಲಿಯಾ ಭಟ್ ವಿರುದ್ಧ ಆಗಾಗ ಕೆಂಡಕಾರುತ್ತಿರುತ್ತಾರೆ. ಇದೀಗ ಮತ್ತೆ ಆಲಿಯಾ ಮತ್ತು ಕರಣ್ ಸಿನಿಮಾ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕರಣ್ ಮಾಡುವ ಪ್ರತಿ ಸಿನಿಮಾ ಮತ್ತು ಶೋಗಳನ್ನು ಕಂಗನಾ ವಿರೋಧಿಸುತ್ತಾರೆ. ಈಗ ‘ಬ್ರಹ್ಮಾಸ್ತ್ರ’ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಲೆಕ್ಕ ಸಂಪೂರ್ಣ ನಿಜವಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಅಂಥ ಪೋಸ್ಟ್ಗಳನ್ನು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಪಿವಿಆರ್-ಐನಾಕ್ಸ್ ಹೂಡಿಕೆದಾರರ ಮೇಲೆ ಬ್ರಹ್ಮಾಸ್ತ್ರ ಎಫೆಕ್ಟ್, 800 ಕೋಟಿ ಸಂಪತ್ತು ಮಾಯ!
Brahmastra Twitter Review:
ಬ್ರಹ್ಮಾಸ್ತ್ರ ಸಿನಿಮಾ ವೀಕ್ಷಿಸಿದ ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಡಿಸಾಸ್ಟರ್, ಹಾರಿಬಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 5 ಕ್ಕೆ ಕೇವಲ ಒಂದು, ಎರಡು ಸ್ಟಾರ್ ಮಾತ್ರ ನೀಡುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಾಣುವ ಸುಳಿವು ನೀಡಿದೆ. ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಬಂದ ಬ್ರಹ್ಮಾಸ್ತ್ರ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗಿದೆ.