ಬಾಯ್ಕಟ್‌ಗೆ ಸೆಡ್ಡು ಹೊಡೆದ 'ಬ್ರಹ್ಮಾಸ್ತ್ರ'; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ರಣಬೀರ್-ಆಲಿಯಾ ಸಿನಿಮಾ
ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ಟ್ರೆಂಡ್ ಮಾಡಿದ್ದರು ಸಹ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಈ ಗಳಿಕೆ ಬಡವಾಗಿದ್ದ ಬಾಲಿವುಡ್‌ಗೆ ಜೀವ ಬಂದಂತೆ ಆಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿತ್ತು. ನಂತರದ ದಿನಗಳಲ್ಲೂ ಬ್ರಹ್ಮಾಸ್ತ್ರ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್‌ಗೂ ಮೊದಲು ಭಾರಿ ವಿರೋಧ ವ್ಯಕ್ತವಾಗಿತ್ತು. ನೆಟ್ಟಿಗರು ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ಟ್ರೆಂಡ್ ಮಾಡಿದ್ದರು. ರಣಬೀರ್ ಕಪೂರ್ ಅವರ ಗೋಮಾಂಸ ಬಗ್ಗೆ ಹಳೆಯ ಹೇಳಿಕೆ ಹಾಗೂ ಅಲಿಯಾ ಭಟ್ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ನೆಟ್ಟಿಗರು ಬ್ರಹ್ಮಾಸ್ತ್ರ ಬಾಯ್ಕಟ್ ಮಾಡುವಂತೆ ಒತ್ತಾಯ ಮಾಡಿ ಟ್ರೆಂಡ್ ಮಾಡಲಾಗಿತ್ತು. ಇದು ಸಿನಿಮಾದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಲೆಕ್ಕಾಚಾರ ಉಲ್ಟವಾಗಿದೆ. ಬಾಯ್ಕಟ್ ಟ್ರೆಂಡ್‌ಗೆ ಸೆಡ್ಡು ಹೊಡೆದು ಬ್ರಹ್ಮಾಸ್ತ್ರ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ.
ಮೊದಲ ವೀಕೆಂಡ್‌ನಲ್ಲಿ ಬ್ರಹ್ಮಾಸ್ತ್ರ ಉತ್ತಮ ಕಲೆಕ್ಷನ್ ಮಾಡಿದೆ. ಧರ್ಮ ಪ್ರೊಡಕ್ಷನ್ ಬಹಿರಂಗ ಪಡಿಸಿದ ಮಾಹಿತಿ ಪ್ರಕಾರ ಬ್ರಹ್ಮಾಸ್ತ್ರ ಸಿನಿಮಾ ಮೊದಲ ವೀಕೆಂಡ್‌ನಲ್ಲಿ 225 ಕೋಟಿ ರೂಪಾಯಿ ಬಾಚಿಕೊಂಡಿದೆ. ಬ್ರಹ್ಮಾಸ್ತ್ರ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಜಾವೇದ್ ಅಖ್ತಾರ್, ಇದು (ಬಾಯ್ಕಟ್) ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸಿನಿಮಾ ಉತ್ತಮವಾಗಿದ್ದರೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತದೆ. ಚೆನ್ನಾಗಿಲ್ಲ ಎಂದರೆ ಪ್ರೇಕ್ಷಕರು ಇಷ್ಟಪಡುವುದಿಲ್ಲ. ಬಾಯ್ಕಟ್ ಎಲ್ಲಾ ಸಮಯದಲ್ಲೂ ಕೆಲಸ ಮಾಡಲ್ಲ' ಎಂದು ಹೇಳಿದ್ದಾರೆ.
ಬಾಲಿವುಡ್ ಸಿನಿಮಾ ವಿಮರ್ಷಕ, ಸಿನಿ ಪಂಡಿತ ತರಣ್ ಆರ್ದಶ್ ಬ್ರಹ್ಮಾಸ್ತ್ರ ಸಿನಿಮಾಗೆ 2 ಸ್ಟಾರ್ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತರಣ್ ಆದರ್ಶ್, ಅದು ನನ್ನ ಅಭಿಪ್ರಾಯ, ನನ್ನ ವೈಯಕ್ತಿಕ ಅಭಿಪ್ರಾಯ. ಚಿತ್ರದ ದ್ವಿತೀಯಾರ್ಧ ನನಗೆ ಇಷ್ಟವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಮುಖ್ಯವಾಗಿ ವಿಷಯಕ್ಕಿತಂತ ಪ್ರೇಮಕಥೆಯ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ ಎನ್ನುವುದು ನಿನ್ನ ಅಭಿಪ್ರಾಯ. ಹಾಗಾಗಿ ಧ್ವಿತಿಯಾರ್ಧ ನನಗೆ ನಿರಾಸೆಯಾಯಿತು. ಕಲೆಕ್ಷನ್ ನಲ್ಲಿ ಸಿನಿಮಾ ತುಂಬಾ ಚೆನ್ನಾಗಿದೆ. ಅದ್ಭುತವಾದ ಕಲೆಕ್ಷನ್ ಮಾಡಿದೆ' ಎಂದು ಹೇಳಿದರು.
'ಬ್ರಹ್ಮಾಸ್ತ್ರ' ಕಲೆಕ್ಷನ್ ಲೆಕ್ಕ ಪಕ್ಕಾ ಫೇಕ್; ಆಲಿಯಾ-ರಣಬೀರ್ ಸಿನಿಮಾ ವಿರುದ್ಧ ಕಂಗನಾ ಗಂಭೀರ ಆರೋಪ
ಬ್ರಹ್ಮಾಸ್ತ್ರ ವಿರೋಧಗಳ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ ಈ ಕಲೆಕ್ಷನ್ ಲೆಕ್ಕಾಪಟ್ಟ್ ಪಕ್ಕಾ ಫೇಕ್ ಎನ್ನುವುದು ಅನೇಕ ಆರೋಪ. ನಟಿ ಕಂಗನಾ ರಣಾವತ್ ಕೂಡ ಇದು ಫೇಕ್ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿರುವ ಪೋಸ್ಟ್ ಗಳನ್ನು ಶೇರ್ ಮಾಡಿ ನಕಲಿ ಕಲೆಕ್ಷನ್ ಲೆಕ್ಕ ಎಂದು ಜರಿದಿದ್ದಾರೆ. ಆದರೂ ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ ಎನ್ನುವುದು ಚಿತ್ರತಂಡಕ್ಕೆ ಸಂತೋಷದ ವಿಚಾರ.
ಬಾಲಿವುಡ್ ನಾಶಮಾಡಲು ಸುಶಾಂತ್ ಅನ್ನೋ 'ಬ್ರಹ್ಮಾಸ್ತ್ರ' ಸಾಕು; ಸಹೋದರಿ ಮೀತು ಸಿಂಗ್ ವ್ಯಂಗ್ಯ
ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ
ಈ ಚಿತ್ರದಲ್ಲಿ ಅಲಿಯಾ ಭಟ್, ರಣಬೀರ್ ಜೊತೆಗೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಿರುವುದು ವಿಶೇಷ. ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಬಂದ ಈ ಸಿನಿಮಾವನ್ನು ವೀಕೆಂಡ್‌ನಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಹಾಗಾಗಿ ದೊಡ್ಡ ಮೊತ್ತದ ಕಲೆಕ್ಷನ್ ಆಗಿರುವು ಸಾಧ್ಯತೆ ಇದೆ.