ಫೇಮಸ್ ವೆಬ್ ಸಿರೀಸ್ ಮಿರ್ಝಾಪುರ್ 2ಗೆ ವಿರೋಧ | ಸಿರೀಸ್ ಬಾಯ್ಕಾಟ್ ಮಾಡಿ ಎಂದು ನೆಟ್ಟಿಗರು

ಪ್ರಸಿದ್ಧ ಮಿರ್ಝಾಪುರ್ 2 ವೆಬ್ ಸಿರೀಸ್ ಟ್ರೈಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಇದೀಗ ನೆಟ್ಟಿಗರು ಸಿರೀಸ್ ಬಹಿಷ್ಕರಿಸುತ್ತಿದ್ದಾರೆ. ಬಾಯ್‌ಕಾಟ್‌ ಮಿರ್ಝಾಪುರ್2 ಟ್ರೆಂಡ್ ಆಗುತ್ತಿದೆ.

ಈ ಸಿರೀಸ್‌ನ ಲೀಡ್ ನಟ ಅಲಿ ಫಸಲ್ ಹಾಗೂ ಮಿರ್ಝಾಪುರ್‌ನ ಸಹ ನಿರ್ಮಾಪಕ ಫರಾನ್ ಅಖ್ತರ್ ಇದಕ್ಕೆ ಕಾರಣ. ಅಲಿ ಫಸಲ್‌ನ ಈ ಹಿಂದಿನ ಟ್ವೀಟ್‌ ಬಗ್ಗೆ ನೆಟ್ಟಿಗರು ಗರಂ ಆಗಿದ್ದು, ವೆಬ್‌ಸಿರೀಸ್ ಬಾಯ್‌ಕಾಟ್ ಮಾಡ್ತಿದ್ದಾರೆ.

ಸ್ಪಾನಿಷ್ ಕಲಿಸೋಕೆ ಬಂದ್ರು ಹೊಸ ಟೀಚರ್: ತೈಮೂರ್ ಫುಲ್ ಖುಷ್

2019 ಡಿಸೆಂಬರ್‌ನಲ್ಲಿ ಪೋಸ್ಟ್ ಹಾಕಿದ್ದ ನಟ CAA ಹಾಗೂ NRC ವಿರುದ್ಧ ಬರೆದಿದ್ದರು. ಪ್ರೊಟೆಸ್ಟರ್ಸ್: ಶುರು ಮಜಬೂರಿನೆ ಕೆಯೇಥೆ, ಅಬ್ ಮಜಾ ಆ ರಹಾ ಹೈ(ಪ್ರತಿಭಟನಾಕಾರರು: ಅನಿವಾರ್ಯತೆ ಆರಂಭಕ್ಕೆ ಕಾರಣವಾಯ್ತು, ಈಗ ಮಜಾ ಎನಿಸ್ತಿದೆ ಎಂದು ನಟ ಸಿಎಎ ವಿರೋಧಿ ಪ್ರತಿಭಟನೆ ಬಗ್ಗೆ ಪೋಸ್ಟ್ ಮಾಡಿದ್ದರು.

ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!

ದೇಶಕ್ಕೆ ಲಾಯಲ್ ಆಗಿರದವರ ಸಿನಿಮಾ, ವೆಬ್‌ಸಿರೀಸ್ ನಮಗೆ ಬೇಡ ಎಂದು ನೆಟ್ಟಿಗರು ಟ್ವಿಟರ್ ಟ್ರೆಂಡ್ ಮಾಡಿದ್ದಾರೆ. ಅಲಿ ಫಸಲ್ ಸಿಎಎ ವಿರೋಧಿಸ್ತಾರೆ, ಮಿರ್ಝಾಪುರ್ 2 ನಿಷೇಧಿಸಿ ಅಂತಿದ್ದಾರೆ ನೆಟ್ಟಿಗರು.

Scroll to load tweet…